ರೆಮ್ಡಿಸಿವಿರ್ ಅಕ್ರಮ ಮಾರಾಟ: ಸಿಸಿಬಿ ಪೊಲೀಸರಿಂದ 100 ಮಂದಿ ಬಂಧನ

ಕೊರೋನಾ ಸೋಂಕಿತರಿಗೆ ನೀಡುವ ರೆಮ್‌ಡಿಸಿವಿರ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಐದು ಸ್ಥಳಗಳ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ಸೋಂಕಿತರಿಗೆ ನೀಡುವ ರೆಮ್‌ಡಿಸಿವಿರ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಐದು ಸ್ಥಳಗಳ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಪೊಲೀಸರು 20 ಸಾವಿರ ರು ಮೌಲ್ಯದ ರೆಮ್ಡಿಸಿವಿರ್ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ, ಪೊಲೀಸರು ದಾಳಿ ನಡೆಸಲು ಆರಂಭಿಸಿದ ಕೂಡಲೇ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಉತ್ತರ ವಿಭಾಗದ ಪೊಲೀಸರು ನರ್ಸಿಂಗ್ ಕಾಲೇಜು ಉಪನ್ಯಾಸಕ ಸೇರಿದಂತೆ ಖಾಸಗಿ ಆಸ್ಪತ್ರೆ ಸಿಬ್ಬಂದಿಯನ್ನು ಬಂಧಿಸಿದ್ದಾರೆ, ಇಬ್ಬರು ವ್ಯಕ್ತಿಗಳು ಸಾರ್ವಜನಿಕವಾಗಿ ಔಷಧಿ ಮಾರಾಟ ಮಾಡುತ್ತಿದ್ದಾರೆ  ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ ಸುಬ್ರಮಣ್ಯಪುರ ಪೊಲೀಸರು ರಾಜಾಜಿನಗರ ಖಾಸಗಿ ಆಸ್ಪತ್ರೆ ಬಳಿ ದಿನೇಶ್ ಮತ್ತು ಆತನ ಸಹಚರ ಶಂಕರ್ ಎಂಬ ಲ್ಯಾಬ್ ಟೆಕ್ನಿಶಿಯನ್ ನನ್ನು ಬಂಧಿಸಿದ್ದಾರೆ, ಈತ ನಾಗರಭಾವಿ ನಿವಾಸಿ ಇಬ್ಬರಿಂದ 2 ಮೊಬೈಲ್ ಫೋನ್ ಮತ್ತು 7,500 ಹಣ ವಶ ಪಡಿಸಿಕೊಂಡಿದ್ದಾರೆ,

ವಂಚಕರು ಸಾಮಾಜಿಕ ಜಾಲತಾಣಗಳಲ್ಲಿ ರೆಮ್‌ಡೆಸಿವಿರ್ ಮಾರಾಟ ಮಾಡಲು ಖಾತೆಗಳನ್ನು ತೆರೆದಿದ್ದರು. ಅವರು ಪ್ರತಿ ಇಂಜೆಕ್ಷನ್‌ಗೆ 25 ಸಾವಿರ ರೂ.  ಹೇಳಿ ನಂತರ 20 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು.

ಆರೋಪಿ ನೀಡಿದ ಮಾಹಿತಿ ಮೇರೆಗೆ ಖಾಸಗಿ ಆಸ್ಪತ್ರೆ ಎಚ್. ಆರ್ ಜಾನಿಯನ್ನು ಬಂಧಿಸಿ ಆತನಿಂದ ಮೂರು ರೆಮ್ಡಿಸಿವಿರ್ ಬಾಟಲ್ ವಶ ಪಡಿಸಿಕೊಂಡಿದ್ದಾರೆ. ಅವನಿಂದ 5,000 ರೂ. ಹಣ ಮತ್ತು 2 ಫೋನ್ ಸೀಜ್ ಮಾಡಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.

ಜೆಸಿ ನಗರ ಪೊಲೀಸರು ನಡೆಸಿದ ಪ್ರತ್ಯೇಕ ದಾಳಿಯಲ್ಲಿ ಮೂವರನ್ನು ಬಂಧಿಸಿದ್ದಾರೆ,  ವೈದ್ಯಕೀಯ ಪ್ರತಿನಿಧಿ ಜನಾರ್ಧನ್ ಎನ್ಎಸ್ (34), ಮೆಡಿಕಲ್ ಸ್ಟೋರ್ ಹುಡುಗ ದೀಪಕ್ (34) ಮತ್ತು ಖಾಸಗಿ ಆಸ್ಪತ್ರೆಯ ರಿಸೆಪ್ಷನಿಸ್ಟ್ ಲೋಕೇಶ್ (28).  ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ, ಬಂಧಿತರಿಂದ 10 ಇಂಜೆಕ್ಷನ್ ರೆಮ್‌ಡೆಸಿವಿರ್, ಮೂರು ಮೋಟಾರು ಬೈಕ್‌ಗಳು, ಏಳು ಮೊಬೈಲ್ ಫೋನ್‌ಗಳು ಮತ್ತು 16,000 ರೂ. ನಗದು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಎಲ್ಲ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಡಿಸಿಪಿ (ಉತ್ತರ) ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com