ಕೊರೋನಾ 3ನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ: ತಜ್ಞರ ಎಚ್ಚರಿಕೆ

ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಗೆ ಭಾರತ ತತ್ತರಿಸಿ ಹೋಗಿದೆ. ಈಗಾಗಲೇ ದೇಶದಲ್ಲಿ ಪ್ರತಿನಿತ್ಯ ಲಕ್ಷ ಲಕ್ಷ ಮಂದಿಗೆ ಕೊವಿಡ್-19 ಸೋಂಕು ಪತ್ತೆಯಾಗುತ್ತಿವೆ. ಈ ನಡುವಲ್ಲೇ 3ನೇ ಅಲೆಯ ಆತಂಕ ಶುರುವಾಗಿದ್ದು, 3ನೇ ಅಲೆಯು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಗೆ ಭಾರತ ತತ್ತರಿಸಿ ಹೋಗಿದೆ. ಈಗಾಗಲೇ ದೇಶದಲ್ಲಿ ಪ್ರತಿನಿತ್ಯ ಲಕ್ಷ ಲಕ್ಷ ಮಂದಿಗೆ ಕೊವಿಡ್-19 ಸೋಂಕು ಪತ್ತೆಯಾಗುತ್ತಿವೆ. ಈ ನಡುವಲ್ಲೇ 3ನೇ ಅಲೆಯ ಆತಂಕ ಶುರುವಾಗಿದ್ದು, 3ನೇ ಅಲೆಯು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. 

ನಗರದ ಮದರ್ ಹುಡ್ ಆಸ್ಪತ್ರೆಯ ತಜ್ಞರು ಈ ಕುರಿತು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಆರಂಭವಾಗಿರುವ ಕೊರೋನಾ 2ನೇ ಅಲೆಯಲ್ಲಿ ಹೆಚ್ಚೆಚ್ಚು ಮಕ್ಕಳಿಗೆ ಸೋಂಕು ಹರಡುತ್ತಿದೆ. ಸಾಕಷ್ಟು ಮಕ್ಕಳಲ್ಲಿ ರೂಪಾಂತರಿ ಕೊರೋನಾ ವೈರಸ್ ಸೋಂಕು ತಗುಲಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 0-16 ವಯಸ್ಸಿನ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಸೋಂಕು ತಗುಲುತ್ತಿರುವುದು ಕಂಡು ಬಂದಿದೆ. ಪೋಷಕರು ಬಹಳ ಎಚ್ಚರಿಕೆಯಿಂದಿರಬೇಕೆಂದು ಹೇಳಿದ್ದಾರೆ. 

ನವಜಾತ ಶಿಶುಗಳಲ್ಲಿ ಹೆಚ್ಚೆಚ್ಚು ಸೋಂಕು ಪತೆಯಾಗುತ್ತಿವೆ. ಹೀಗಾಗಿ ತಾಯಿಯಂದಿರು ಮಕ್ಕಳಿಗೆ ಹೆಚ್ಚೆಚ್ಚು ಹಾಲುಣಿಸಬೇಕು. ಇದರಿಂದ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. 3ನೇ ಅಲೆ ಭೀಕರವಾಗಿರಲಿದ್ದು, ಪೋಷಕರು ಮಕ್ಕಳ ಲಸಿಕೆ ಹಾಕಿಸುವಿಕೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲೇಬೇಕು. ಇದರಿಂದ ಮಕ್ಕಳಿಗೆ ಸೋಂಕು ತಗುಲುವುದು ನಿಯಂತ್ರಣಗೊಳ್ಳುತ್ತದೆ. ಇದೂ ಕೂಡ ಮಕ್ಕಳಿಗೆ ಸೋಂಕು ತಗುವುದನ್ನು ತಡೆಯಲು ನಿರ್ಣಾಯಕ ಪಾತ್ರವನ್ನು ವಹಿಸಲಿದೆ ಎಂದು ಮದರ್ ಹುಡ್ ಆಸ್ಪತ್ರೆಯ ಮಕ್ಕಳ ವೈದ್ಯ ಸಂತೋಷ್ ಕುಮಾರ್ ಅವರು ಹೇಳಿದ್ದಾರೆ. 

ಅತೀವ್ರ ಜ್ವರ, ಜಠರದಲ್ಲಿ ಉರಿ, ಉಸಿರಾಟ ಸಮಸ್ಯೆಗಳು ಮಕ್ಕಳಲ್ಲಿ ಕಂಡು ಬರುವ ಸಾಮಾನ್ಯ ಲಕ್ಷಣಗಳಾಗಿವೆ. ಸಾಕಷ್ಟು ಜನರು ಕೊರೋನಾ ನಿಯಮಗಳನ್ನು ಪಾನೆ ಮಾಡುತ್ತಿಲ್ಲ. ಒಮ್ಮೆ ಸೋಂಕಿಗೊಳಗಾದ ಕೂಡಲೇ ಇತರರಿಗೂ ಸೋಂಕು ಹರಿಡಿಸುತ್ತಿದ್ದಾರೆ. ಅವರ ಮಕ್ಕಳಿಗೂ ಸೋಂಕು ಹರಡುವಂತೆ ಮಾಡುತ್ತಿದ್ದಾರೆ. ಇನ್ನು ಮನೆಯಲ್ಲಿ ಹಿರಿಯರಿದ್ದರೆ ಅವರಿಗೆ ಸೋಂಕು ತಗುಲಿದರೆ ಅಪಾಯ ಎದುರಾಗಲಿದೆ. ಇನ್ನು ಮಕ್ಕಳಿಗೆ ಕೊರೋನಾ ಸೋಂಕು ತಡೆಹಿಡಿಯಲು ಯಾವುದೇ ರೀತಿಯ ಲಸಿಕೆಗಳು ಬಾರದ ಕಾರಣ ಮಕ್ಕಳಿಗೆ ಸೋಂಕು ಅತಿ ಶೀಘ್ರದಲ್ಲಿ ತಗುಲುತ್ತದೆ. ಹೀಗಾಗಿ ಪೋಷಕರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com