'ಮೈ ಬೂತ್- ಕೊರೋನಾ ಫ್ರೀ ಬೂತ್' ಕಾರ್ಯಕ್ರಮಕ್ಕೆ ಬಿಜೆಪಿ ಚಾಲನೆ

ಮೈ ಬೂತ್-ಕೊರೋನಾ ಫ್ರೀ ಬೂತ್ ಎಂಬ ಹೆಸರಲ್ಲಿ ಬಿಜೆಪಿ ಕೊರೋನಾ ವಿರುದ್ಧ ಹೋರಾಡಿ ಜನರಿಗೆ ಸಹಾಯ ಮಾಡಲು ಮುಂದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೈ ಬೂತ್-ಕೊರೋನಾ ಫ್ರೀ ಬೂತ್ ಎಂಬ ಹೆಸರಲ್ಲಿ ಬಿಜೆಪಿ ಕೊರೋನಾ ವಿರುದ್ಧ ಹೋರಾಡಿ ಜನರಿಗೆ ಸಹಾಯ ಮಾಡಲು ಮುಂದಾಗಿದೆ.

ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದು, ರಾಜ್ಯಾದ್ಯಂತ ಕಾಲ್ ಸೆಂಟರ್ ಮತ್ತು ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಸುಮಾರು 350 ಸ್ಥಳಗಳಲ್ಲಿ ಈ ಕೇಂದ್ರಗಳು ಕೆಲಸ ಮಾಡಲಿವೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ತಿಳಿಸಿದ್ದಾರೆ.

ಕಾಲ್ ಸೆಂಟರ್ ಗಳು ಪ್ರಮುಖವಾಗಿ ಆಸ್ಪತ್ರೆಗಳಲ್ಲಿರುವ ವೆಂಟಿಲೇಟರ್ ಲಭ್ಯತೆ ಮುಂತಾದವುಗಳ ಬಗ್ಗೆ ಮಾಹಿತಿ ನೀಡುತ್ತದೆ, ದೇಶಾದ್ಯಂತ 56,211 ಪಕ್ಷದ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಬೆಳಗಾವಿ, ವಿಜಯಪುರ, ಬಳ್ಳಾರಿ, ಕಲಬುರಗಿ, ಬೀದರ್ ಸೇರಿದಂತೆ 7 ಜಿಲ್ಲೆಗಳಲ್ಲಿ ಜನಸೇವಾ ಎನ್ ಜಿ ಓ ಮತ್ತು ಬಿಜೆಪಿ ಜೊತೆಗೂಡಿ 500 ಬೆಡ್ ಗಳ ಆಸ್ಪತ್ರೆ ಸ್ಥಾಪಿಸಲಾಗಿದೆ, ತುರ್ತು ಅವಶ್ಯಕತೆಗಳಿಗಾಗಿ  ಆಕ್ಸಿಜನ್ ವೆಂಟಿಲೇಟರ್ ಒದಗಿಸಲಾಗುತ್ತದೆ.  ಬೆಂಗಳೂರಿನಲ್ಲಿ ಮೂರು ಐಸೋಲೆಷನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com