'ನಿಮ್ಮ ಮಕ್ಕಳನ್ನು ಏನು ಮಾಡುವುದು'? ಗಂಭೀರ ಸ್ವರೂಪದಲ್ಲಿ ದಾಖಲಾಗುವ ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳ ಪ್ರಶ್ನೆ!

ಕೊರೋನಾ ಎರಡನೇ ಅಲೆ ಎಷ್ಟರ ಮಟ್ಟಿಗೆ ತೀವ್ರವಾಗಿದೆ ಎಂದರೆ ಅನೇಕರು ಮನೆ-ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ, ತಂದೆ-ತಾಯಿಗಳನ್ನು ಸೋಂಕಿನಿಂದ ಕಳೆದುಕೊಂಡು ಅನೇಕ ಮಕ್ಕಳು ಅನಾಥವಾಗಿದ್ದಾರೆ. ಅನಾಥ ಮಕ್ಕಳಿದ್ದಾರೆ, ಯಾರಾದರೂ ದತ್ತು ತೆಗೆದುಕೊಳ್ಳುವವರಿದ್ದರೆ ಮುಂದೆ ಬನ್ನಿ ಎಂದು ಮೊಬೈಲ್ ಸಂಖ್ಯೆ ಹಾಕಿರುವ ಸಂದೇಶಗಳು ವಾಟ್ಸಾಪ್, ಫೇಸ್ ಬುಕ್ ಗಳಲ್ಲಿ ಇತ್ತೀಚೆಗೆ ಸಾ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ಎರಡನೇ ಅಲೆ ಎಷ್ಟರ ಮಟ್ಟಿಗೆ ತೀವ್ರವಾಗಿದೆ ಎಂದರೆ ಅನೇಕರು ಮನೆ-ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ, ತಂದೆ-ತಾಯಿಗಳನ್ನು ಸೋಂಕಿನಿಂದ ಕಳೆದುಕೊಂಡು ಅನೇಕ ಮಕ್ಕಳು ಅನಾಥವಾಗಿದ್ದಾರೆ. ಅನಾಥ ಮಕ್ಕಳಿದ್ದಾರೆ, ಯಾರಾದರೂ ದತ್ತು ತೆಗೆದುಕೊಳ್ಳುವವರಿದ್ದರೆ ಮುಂದೆ ಬನ್ನಿ ಎಂದು ಮೊಬೈಲ್ ಸಂಖ್ಯೆ ಹಾಕಿರುವ ಸಂದೇಶಗಳು ವಾಟ್ಸಾಪ್, ಫೇಸ್ ಬುಕ್ ಗಳಲ್ಲಿ ಇತ್ತೀಚೆಗೆ ಸಾಕಷ್ಟು ಹರಿದಾಡುತ್ತಿವೆ.

ಹಲವು ಕಡೆಗಳಲ್ಲಿ ಪೋಷಕರು ಕೋವಿಡ್ ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರಿದರೆ ಮಕ್ಕಳು ಸಂಬಂಧಿಕರು, ಸ್ನೇಹಿತರ ಮನೆಯಲ್ಲಿ ಕಳೆಯುವಂತಾಗಿದೆ. ಪೋಷಕರನ್ನು ಕಳೆದುಕೊಳ್ಳುವ ಮಕ್ಕಳ ಬಗ್ಗೆ ವೈದ್ಯಲೋಕಕ್ಕೆ ಆತಂಕವುಂಟಾಗಿದೆ.

ಮಕ್ಕಳ ತಜ್ಞೆ ಡಾ ಪ್ರೀತಿ ಗಲಗಳಿ, ಅನಾಥ ಮಕ್ಕಳ ಬಗ್ಗೆ ತೀವ್ರ ಆತಂಕವಾಗುತ್ತಿದೆ.ಕೋವಿಡ್ ಸಂದರ್ಭದಲ್ಲಿ ಪೋಷಕರಿಬ್ಬರೂ, ಅಥವಾ ಕುಟುಂಬವಿಡೀ ಆಸ್ಪತ್ರೆಗೆ ದಾಖಲಾದರೆ ಮಕ್ಕಳ ಬಗ್ಗೆ ವಿವರ ತೆಗೆದುಕೊಂಡು ಮುಂದೆ ಏನಾದರೂ ಅನಾಹುತ ಆದರೆ ಮಕ್ಕಳನ್ನು ಏನು ಮಾಡಬಹುದು ಎಂಬುದಕ್ಕೆ ಪೋಷಕರಿಂದ ಬರವಣಿಗೆ ಮೂಲಕ  ಆಸ್ಪತ್ರೆಗಳಲ್ಲಿ ಬರೆಸಿಕೊಳ್ಳುತ್ತಿದ್ದಾರೆ ಎಂದರು.

ಇಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳು ಏನು ಕೇಳುತ್ತಾರೆ, ಹೇಗೆ ಸ್ಪಂದಿಸುತ್ತಾರೆ ಎಂಬುದು ಮುಖ್ಯವಾಗುತ್ತದೆ. ಒತ್ತಡ, ಭಯ, ಬೇಸರದಲ್ಲಿರುವ ಮಕ್ಕಳನ್ನು ನಿಗಾ ಕೇಂದ್ರದಲ್ಲಿ ಬಿಡುವುದು ಆಸ್ಪತ್ರೆಗಳ ಕೊನೆಯ ಆಯ್ಕೆಯಾಗಿದೆ. ಮಕ್ಕಳಿಗೆ ಈ ಸಮಯದಲ್ಲಿ ಮಾನಸಿಕವಾಗಿ ಬೆಂಬಲ ನೀಡುವುದು, ಕೌನ್ಸೆಲಿಂಗ್ ಮಾಡುವುದು ಮುಖ್ಯವಾಗುತ್ತದೆ ಎನ್ನುತ್ತಾರೆ ತಜ್ಞರು. 

ಅಪ್ರಾಪ್ತ ಮಕ್ಕಳ ಭವಿಷ್ಯದ ಬಗ್ಗೆ ಪಾಲಕರು ಅಥವಾ ಅಧಿಕಾರಿಗಳಿಗೆ ಪೋಷಕರು ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ಬರೆದು ಕೊಡಬೇಕಾಗುತ್ತದೆ. ಪೋಷಕರ ಅನಾರೋಗ್ಯ ಗಂಭೀರ ಸ್ವರೂಪದಲ್ಲಿದ್ದರೆ ಆಸ್ಪತ್ರೆಯಲ್ಲಿರುವಾಗ ವಕೀಲರ ಮೂಲಕ ಮುಂದೆ ಅವರ ರಕ್ಷಕರು ಯಾರು ಎಂದು ಆಸ್ಪತ್ರೆಗಳು ಕಾನೂನು ಮೂಲಕ ಪೋಷಕರಿಂದ ಬರೆಸಿಕೊಳ್ಳುತ್ತಿದೆ. ಮುಂದಿನ ರಕ್ಷಕರಾಗುವವರು ಕೂಡ ಒಪ್ಪಿಗೆ ಪತ್ರ ಬರೆದುಕೊಡಬೇಕು. ಇದು ವಿಲ್ ರೀತಿಯಲ್ಲಿ ಕಾನೂನಾತ್ಮಕವಾದ ಪ್ರಕ್ರಿಯೆ. ಇಂತಹ ವ್ಯವಸ್ಥೆ ಸಿಗದಿದ್ದರೆ ಮಕ್ಕಳ ಅಭಿವೃದ್ಧಿ ಅಧಿಕಾರಿಗಳ ಮೂಲಕ ಹೋಗುತ್ತದೆ ಎಂದು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಅಲೊಮಾ ಲೊಬೊ ಹೇಳುತ್ತಾರೆ.

ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಸದಸ್ಯ ಎಡ್ವರ್ಡ್ ಥಾಮಸ್, ಮಕ್ಕಳು ಅನಾಥರಾದರೆ ಅವರ ಕುಟುಂಬದವರು, ಸಮೀಪ ಬಂಧುಗಳಿಗೆ ನೀಡುವುದು ಉತ್ತಮ ಆಯ್ಕೆ. ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲದಿದ್ದರೆ ಕೊನೆಗೆ 1098 ಸಹಾಯವಾಣಿಗೆ ಕರೆ ಮಾಡಿ ವ್ಯವಸ್ಥೆ ಮಾಡಬೇಕು. ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಅಭಿವೃದ್ಧಿ ಆಯೋಗ, ಬಾಲಪರಾಧ ಪೊಲೀಸ್ ವಿಶೇಷ ಘಟಕ ಮತ್ತು ಸ್ಥಳೀಯ ಪೊಲೀಸ್ ಠಾಣೆಗೆ ಸಹ ವಿಷಯ ತಿಳಿಸಬಹುದು ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com