ಸಾಂಕ್ರಾಮಿಕ ಸಂಕಷ್ಟದ ನಡುವೆ ಅಧಿಕೃತ ನಿವಾಸದಲ್ಲಿ ಈಜುಕೊಳ, ಜಿಮ್ ನಿರ್ಮಿಸಿಕೊಂಡ ಮೈಸೂರು ಡಿಸಿ: ಜೆಡಿಎಸ್ ಮುಖಂಡ ಆರೋಪ

ರಾಜ್ಯವು ತೀವ್ರ ಸಾಂಕ್ರಾಮಿಕ ಸೋಂಕು ಹಾಗೂ ಲಾಕ್ ಡೌನ್ ಸಂಕಟವನ್ನು ಅನುಭವಿಸುತ್ತಿರುವಾಗ ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ  ತಮ್ಮ ಅಧಿಕೃತ ನಿವಾಸದಲ್ಲಿ ಈಜುಕೊಳ ಮತ್ತು ವೈಯಕ್ತಿಕ ಜಿಮ್ ನಿರ್ಮಿಸಿಕೊಂಡಿದ್ದಾರೆ.
ಸಾಂಕ್ರಾಮಿಕ ಸಂಕಷ್ಟದ ನಡುವೆ ಅಧಿಕೃತ ನಿವಾಸದಲ್ಲಿ ಈಜುಕೊಳ, ಜಿಮ್ ನಿರ್ಮಿಸಿಕೊಂಡ ಮೈಸೂರು ಡಿಸಿ: ಜೆಡಿಎಸ್ ಮುಖಂಡ ಆರೋಪ

ಮೈಸೂರು: ರಾಜ್ಯವು ತೀವ್ರ ಸಾಂಕ್ರಾಮಿಕ ಸೋಂಕು ಹಾಗೂ ಲಾಕ್ ಡೌನ್ ಸಂಕಟವನ್ನು ಅನುಭವಿಸುತ್ತಿರುವಾಗ ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ  ತಮ್ಮ ಅಧಿಕೃತ ನಿವಾಸದಲ್ಲಿ ಈಜುಕೊಳ ಮತ್ತು ವೈಯಕ್ತಿಕ ಜಿಮ್ ನಿರ್ಮಿಸಿಕೊಂಡಿದ್ದಾರೆ.

ಮೈಸೂರು ಜಿಲ್ಲೆಯು ಪ್ರತಿದಿನ ಎರಡಂಕಿಯಲ್ಲಿ ಕೋವಿಡ್ ಸಾವುಗಳನ್ನು ಕಾಣುತ್ತಿದೆ. ಈ ನಡುವೆ ನೆರೆಯ ಚಾಮರಾಜನಗರಕ್ಕೆ ಆಮ್ಲಜನಕವನ್ನು ರವಾನಿಸುವಲ್ಲಿ ವಿಳಂಬ ಮಾಡಿದ್ದರೆಂದು ರೋಹಿಣಿ ಸಿಂಧೂರಿಯವರ ಮೇಲೆ ಆರೋಪ ಕೇಳಿಬಂದಿತ್ತು. ಅಲ್ಲಿಆಮ್ಲಜನಕದ ಕೊರತೆಯ ಕಾರಣ ಆಸ್ಪತ್ರೆಯಲ್ಲಿ ಸುಮಾರು 24 ರೋಗಿಗಳು ಸಾವನ್ನಪ್ಪಿದ್ದಾರೆ.

ಇದೀಗ ರೋಹಿಣಿ ಸಿಂಧೂರಿ ಅವರ ನಿವಾಸದಲ್ಲಿ ಈಜುಕೊಳ, ಜಿಮ್ ನಿರ್ಮಾಣ ಮಾಡಿಕೊಂಡಿರುವ ವಿಚಾರವನ್ನು ಬಹಿರಂಗಪಡಿಸಿದ ಜೆಡಿ (ಎಸ್) ಮುಖಂಡ ಮತ್ತು ಮಾಜಿ ಸಲಹೆಗಾರ ಕೆ ವಿ ಮಲ್ಲೇಶ್ ಅವರ ಪ್ರಕಾರ, ಡಿಸಿಯವರು ಈ ನಿರ್ಮಾಣಕ್ಕಾಗಿ ಕನಿಷ್ಠ 50 ಲಕ್ಷ ರೂ. ವೆಚ್ಚ ಮಾಡುತ್ತಿದ್ದಾರೆ, ಅದಕ್ಕಾಗಿ ಎಲ್ಲಿಯ ಹಣ ಬಳಸಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸುವಂತೆ ಕೇಳಿಕೊಂಡರು.

ಡಿಸಿಗಳ ಅಧಿಕೃತ ನಿವಾಸವು ಒಂದು ಪಾರಂಪರಿಕ ಕಟ್ಟಡವಾಗಿದ್ದು, ಯಾವುದೇ ಮಾರ್ಪಾಡು ಮತ್ತು ಹೊಸ ನಿರ್ಮಾಣ  ಮಾಡುವ ಮುನ್ನವಿಶೇಷ ಅನುಮತಿ ಮತ್ತು ಸಮಾಲೋಚನೆಯ ಅಗತ್ಯವಿರುತ್ತದೆ ಎಂದು ಅವರು ಹೇಳಿದರು.

"ಸಾಂಕ್ರಾಮಿಕ ರೋಗವು ಉಲ್ಬಣಗೊಳ್ಳುತ್ತಿರುವ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲು ಕೂಗು ಹೆಚ್ಚಿರುವ ಸಮಯದಲ್ಲಿ ಇದು ಅನಗತ್ಯ ಐಷಾರಾಮಿ ವೆಚ್ಚವಾಗಿದೆ. ಪ್ರವಾಹ ಪರಿಹಾರ ಸೇರಿದಂತೆ ರೈತರಿಗೆ ಪಾವತಿಸುವ ಹಣ ಬಾಕಿ ಇದೆ. ಆಡಳಿತವು ಕನಿಷ್ಠ ಇದೇ ಹಣದಲ್ಲಿ ಅಗತ್ಯ ಔಷಧಿಯನ್ನು ಖರೀದಿಸುವುದಾಗಲಿ, ಬೆಡ್ ಗಳನ್ನು ವ್ಯವಸ್ಥೆ ಮಾಡುವುದಾಗಲಿ ಮಾಡಬಹುದು" ಎಂದು ಅವರು ಹೇಳಿದರು.

ಸಾರ್ವಜನಿಕ ಹಣವನ್ನು ಈಜುಕೊಳದ ನಿರ್ಮಾಣಕ್ಕೆ ಬಳಸಿಲ್ಲವಾದರೆ ಇದಕ್ಕಾಗಿ ಯಾರು ಹಣ ನೀಡಿದ್ದಾರೆ ಎಂದು ಸ್ಪಷ್ಟಪಡಿಸಬೇಕು. ಒಂದೊಮ್ಮೆ ಡಿಸಿ ಇದರ ಬಗ್ಗೆ ಸ್ಪಷ್ಟತೆ ನೀಡದಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸುಗುದಾಗಿ ಮಲ್ಲೇಶ್ ಹೇಳಿದ್ದಾರೆ.

ವಿಶೇಷವೆಂದರೆ, ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಶೋಮಶೇಖರ್ ಅವರೊಂದಿಗೆ ಮೊದಲೇ ಚರ್ಚಿಸಿದ್ದರೂ ಪ್ರಯೋಜನವಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com