ಕೊರೋನಾ 3ನೇ ಅಲೆ: ಮಕ್ಕಳು, ಮಹಿಳೆಯರ ನೆರವಿಗೆ ನಿಮ್ಹಾನ್ಸ್'ನಿಂದ ಸಹಾಯವಾಣಿ ಆರಂಭ

ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರ ಮಹಿಳೆ ಹಾಗೂ ಮಕ್ಕಳ ಸಹಾಯಕ್ಕಾಗಿ ಎರಡು ಸಹಾಯವಾಣಿ ಆರಂಭಿಸುವಂತೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)'ಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರ ಮಹಿಳೆ ಹಾಗೂ ಮಕ್ಕಳ ಸಹಾಯಕ್ಕಾಗಿ ಎರಡು ಸಹಾಯವಾಣಿ ಆರಂಭಿಸುವಂತೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)'ಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. 

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು, ತರಬೇತಿ ಪಡೆದ ಮಾನಸಿಕ ಆರೋಗ್ಯ ವೃತ್ತಿಪರರೊಂದಿಗೆ ಎರಡು ಸಹಾಯವಾಣಿ ಆರಂಭಿಸುವಂತೆ ನಿಮ್ಹಾನ್ಸ್'ಗೆ ಸೂಚನೆ ನೀಡಿದೆ ಎಂದು ವರದಿಗಳು ತಿಳಿಸಿವೆ. 

ಕೊರೋನಾ 3ನೇ ಅಲೆ ಮಕ್ಕಳು ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಈ ಸಂದರ್ಭದಲ್ಲಿ ಮಕ್ಕಳು ಹಾಗೂ ಮಹಿಳೆಯರಿಗೆ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ. ಹೀಗಾಗಿ ಸಹಾಯವಾಣಿ ಆರಂಬಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈಗಾಗಲೇ ನಮ್ಮಲ್ಲಿ 40 ವೃತ್ತಿಪರ ಸ್ವಯಂಸೇವಕರಿದ್ದು, ಎರಡು ಸಹಾಯವಾಣಿಗಳಲ್ಲಿ ಕಾರ್ಯ ನಿರ್ವಹಿಸಲು ಅವರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ ಎಂದು ನಿಮ್ಹಾನ್ಸ್ ಎಂದು ನಿಮ್ಹಾನ್ಸ್‌ನ ವಿಪತ್ತು ನಿರ್ವಹಣಾ ಕೇಂದ್ರದ ಮುಖ್ಯಸ್ಥ ಡಾ.ಕೆ.ಶೇಖರ್ ಅವರು ಹೇಳಿದ್ದಾರೆ. 

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವಕರನ್ನು ಹೊಂದಿದ ರಾಷ್ಟ್ರವಾಗಿದ್ದು, ಇದರಲ್ಲಿ ಶೇ.10ರಷ್ಟು ಮಕ್ಕಳಿದ್ದಾರೆ. "ಸಾಂಕ್ರಾಮಿಕವು ಶಿಕ್ಷಣ, ಮಕ್ಕಳ ಕೌಶಲ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಹೀಗಾಗಿ ನಾವು ಆನ್‌ಲೈನ್ ಮತ್ತು ಆಫ್‌ಲೈನ್ ಶಿಕ್ಷಣದ ನಡುವೆ ಸಮತೋಲನವನ್ನು ತರಲು ನಾವು ಕಾರ್ಯನಿರ್ವಹಿಸಬೇಕಿದೆ.

ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ಹಿಂದೆ ಕೊರೋನಾ ಮೊದಲ ಅಲೆ ಸಂದರ್ಭದಲ್ಲಿಯೇ ಜನರಿಗೆ ಮಾನಸಿಕ-ಸಾಮಾಜಿಕವಾಗಿ ನೆರವು ನೀಡಲು ರಾಷ್ಟ್ರೀಯ ಸಹಾಯವಾಣಿ - 080-46110007ನ್ನು ಆರಂಭಿಸಿತ್ತು. ಈ ವರ್ಷದ ಏಪ್ರಿಲ್ ವರೆಗೆ 4,48,458 ಕರೆಗಳನ್ನು ಸ್ವೀಕರಿಸಿದೆ. 24 ಮಾನಸಿಕ ಆರೋಗ್ಯ ಕೇಂದ್ರಗಳ 656 ಮಾನಸಿಕ ಆರೋಗ್ಯ ವೃತ್ತಿಪರರು 12 ಭಾಷೆಗಳಲ್ಲಿ ರಾಷ್ಟ್ರೀಯ ಸಹಾಯವಾಣಿಯನ್ನು ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. 

ಶೇ.70 ರಷ್ಟು ಕರೆಗಳು ಹಿಂದಿ ಮಾತನಾಡುವ ರಾಜ್ಯಗಳಿಂದ ಬಂದಿದ್ದು, ಉಳಿದವು ದಕ್ಷಿಣ ಭಾರತ ಮತ್ತು ಇತರೆ ರಾಜ್ಯಗಳಿಂದ ಬಂದಿವು. ಹೆಚ್ಚಿನ ಕರೆಗಳು ಐಸೋಲೇಷನ್ ಮತ್ತು ಲಾಜಿಸ್ಟಿಕ್ ಸಮಸ್ಯೆಗಳ ಕುರಿತಾಗಿಯೇ ಆಗಿವೆ. ಶೇ.12ಕರೆಗಳು ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳು, ಶಿಕ್ಷಣ ಮತ್ತು ಜೀವನೋಪಾಯದಲ್ಲಿ ಅಡ್ಡಿ, ಆಹಾರ ಮತ್ತು ತೀವ್ರ ಆರ್ಥಿಕ ತೊಂದರೆಗಳ ಕುರಿತಾಗಿ ಆಗಿದ್ದವು. ಸಂತಾನೋತ್ಪತ್ತಿ ಮತ್ತು ನಂತರದ ಒತ್ತಡಕ್ಕೆ ಸಂಬಂಧಿಸಿದ ಕರೆಗಳೂ ಬಂದಿದ್ದವು. 

ಒತ್ತಡಕ್ಕೊಳಗಾಗಿರುವ ಆರೋಗ್ಯ ಕಾರ್ಯಕರ್ತರೂ ಕೂಡ ಕರೆ ಮಾಡಿದ್ದವು. ಈ ವೇಳೆ ಸಾಕಷ್ಟು ನಕಾರಾತ್ಮಕ ಅಂಶಗಳನ್ನು ಹೇಳಿಕೊಂಡಿದ್ದರು. ಸಾಕಷ್ಟು ಜನರು ನಕಾರಾತ್ಮಕ ಅಂಶಗಳನ್ನು ಬಹಳ ಬೇಗ ಮನಸ್ಸಿಗೆ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರಲ್ಲಿ ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಶಿಕ್ಷಣ ನೀಡಲು ನಿಮ್ಹಾನ್ಸ್ ಕಾರ್ಯವಿಧಾನಗಳನ್ನು ಸಿದ್ಧಪಡಿಸುತ್ತಿದೆ. ಮಕ್ಕಳಿಗೂ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವನ್ನು ನೀಡಬೇಕು. ಸೂಕ್ತ ಮಾಹಿತಿಗಳೊಂದಿಗೆ ಹಿರಿಯರು ಅವರಿಗೆ ಸಹಾಯ ಮಾಡಬೇಕು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com