ಚಾಮರಾಜನಗರದಲ್ಲಿ ಕೊರೋನಾ ಸೋಂಕಿನಿಂದ ಅಪ್ಪ, ಅಮ್ಮ ಸಾವು: 4 ವರ್ಷದ ಮಗು ಅನಾಥ!
ರಾಜ್ಯದಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು ಚಾಮರಾಜನಗರದಲ್ಲಿ ಗಂಡ, ಹೆಂಡತಿ ಕೋವಿಡ್ ನಿಂದ ಮೃತಪಟ್ಟಿದ್ದು ನಾಲ್ಕೂವರೆ ವರ್ಷದ ಹೆಣ್ಣುಮಗು ಅನಾಥಳಾಗಿದ್ದಾಳೆ.
Published: 10th May 2021 05:29 PM | Last Updated: 10th May 2021 05:56 PM | A+A A-

ಮೃತ ರಶ್ಮಿ-ಗುರುಪ್ರಸಾದ್
ಚಾಮರಾಜನಗರ: ರಾಜ್ಯದಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು ಚಾಮರಾಜನಗರದಲ್ಲಿ ಗಂಡ, ಹೆಂಡತಿ ಕೋವಿಡ್ ನಿಂದ ಮೃತಪಟ್ಟಿದ್ದು ನಾಲ್ಕೂವರೆ ವರ್ಷದ ಹೆಣ್ಣುಮಗು ಅನಾಥಳಾಗಿದ್ದಾಳೆ.
ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ನಿವಾಸಿಗಳಾದ ಗುರುಪ್ರಸಾದ್ ಹಾಗೂ ಪತ್ನಿ ರಶ್ಮಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಗುರುಪ್ರಸಾದ್ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದರೆ, ರಶ್ಮಿ ಕಳೆದ ರಾತ್ರಿ ಮೃತಪಟ್ಟಿದ್ದಾರೆ.
ಇನ್ನು ಇಬ್ಬರು ಮನೆಯಲ್ಲೇ ಐಸೋಲೇಷನ್ ನಲ್ಲಿದ್ದರಿಂದ ಇದೀಗ ಗುರುಪ್ರಸಾದ್ ಅವರ ತಂದೆ, ತಾಯಿಗೂ ಕೊರೋನಾ ವಕ್ಕರಿಸಿದೆ. ಹೀಗಾಗಿ ಮನೆಯಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿದೆ. ಇನ್ನು ಅಪ್ಪ, ಅಮ್ಮ ಸಾವನ್ನಪ್ಪಿರುವ ವಿಚಾರ ತಿಳಿಯದ ಪುಟ್ಟ ಮಗು ಆಟವಾಡಿಕೊಂಡು ಕಾಲಕಳೆಯುತ್ತಿದೆ.