ಸೆರಂ ಇನ್ಸ್ಟಿಟ್ಯೂಟ್ ನಿಂದ ನೇರವಾಗಿ ಲಸಿಕೆ ಖರೀದಿಸಿದ ಕೇರಳ, ಕೊಚ್ಚಿಗೆ ಬಂತು 3.5 ಲಕ್ಷ ಡೋಸ್

ಕೇರಳ ಸರ್ಕಾರ ನೇರವಾಗಿ ಪುಣೆಯ ಸೆರಂ ಇನ್‌ಸ್ಟಿಟ್ಯೂಟ್‌ನಿಂದ ಕೋವಿಶೀಲ್ಡ್ ಲಸಿಕೆ ಖರೀದಿಸಿದ್ದು, ಸೋಮವಾರ 3.5 ಲಕ್ಷ ಡೋಸ್ ಲಸಿಕೆ ಕೊಚ್ಚಿ ವಿಮಾನ ನಿಲ್ದಾಣ ತಲುಪಿದೆ.
ಲಸಿಕೆ ಸ್ಥಳಾಂತರಿಸುತ್ತಿರುವುದು
ಲಸಿಕೆ ಸ್ಥಳಾಂತರಿಸುತ್ತಿರುವುದು

ಕೊಚ್ಚಿ: ಕೇರಳ ಸರ್ಕಾರ ನೇರವಾಗಿ ಪುಣೆಯ ಸೆರಂ ಇನ್‌ಸ್ಟಿಟ್ಯೂಟ್‌ನಿಂದ ಕೋವಿಶೀಲ್ಡ್ ಲಸಿಕೆ ಖರೀದಿಸಿದ್ದು, ಸೋಮವಾರ 3.5 ಲಕ್ಷ ಡೋಸ್ ಲಸಿಕೆ ಕೊಚ್ಚಿ ವಿಮಾನ ನಿಲ್ದಾಣ ತಲುಪಿದೆ.

ಇಂದು ಮಧ್ಯಾಹ್ನ 12: 30ಕ್ಕೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಕೋವಿಶೀಲ್ಡ್ ಲಸಿಕೆ ಆಗಮಿಸಿದ್ದು, ಅದನ್ನು ಕೊಚ್ಚಿಯ ಮಂಜುಮ್ಮೆಲ್‌ನಲ್ಲಿರುವ ಕೇರಳ ವೈದ್ಯಕೀಯ ಸೇವೆಗಳ ನಿಗಮದ ಗೋದಾಮಿಗೆ ಸ್ಥಳಾಂತರಿಸಲಾಗಿದೆ.

ಆರೋಗ್ಯ ಇಲಾಖೆಯು ನಂತರ ಪ್ರತಿ ಜಿಲ್ಲೆಗೆ ಅವಶ್ಯಕತೆಗಳನ್ನು ಆಧರಿಸಿ ಲಸಿಕೆಗಳನ್ನು ನಿರ್ಧರಿಸುತ್ತದೆ ಮತ್ತು ಹಂಚಿಕೆ ಮಾಡುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಕೇರಳ ಸರ್ಕಾರ ಒಟ್ಟು ಒಂದು ಕೋಟಿ ಡೋಸ್ ಲಸಿಕೆಯನ್ನು ನೇರವಾಗಿ ಉತ್ಪಾದಕರಿಂದ ಖರೀದಿಸಲು ನಿರ್ಧರಿಸಿದ್ದು, 70 ಲಕ್ಷ ಡೋಸ್ ಕೋವಿಶೀಲ್ಡ್ ಮತ್ತು 30 ಲಕ್ಷ ಡೋಸ್ ಕೋವಾಕ್ಸಿನ್ ಖರೀದಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com