ಲಾಕ್ ಡೌನ್: ಬಿಎಂಆರ್ ಸಿಎಲ್ ನಿಂದ ಏರ್ ಪೋರ್ಟ್ ಲೈನ್ ಮೆಟ್ರೋ ಟೆಂಡರ್ ಗಡುವು ವಿಸ್ತರಣೆ

ಬಹುನಿರೀಕ್ಷಿತ, ಕೆಆರ್ ಪುರಂ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೆಟ್ರೋ ಲೈನ್ ಕಾಮಗಾರಿ ಲಾಕ್ ಡೌನ್ ನಿಂದಾಗಿ ಮತ್ತಷ್ಟು ವಿಳಂಬಗೊಂಡಿದೆ. 
ನಮ್ಮ ಮೆಟ್ರೋ
ನಮ್ಮ ಮೆಟ್ರೋ

ಬೆಂಗಳೂರು: ಬಹುನಿರೀಕ್ಷಿತ, ಕೆಆರ್ ಪುರಂ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೆಟ್ರೋ ಲೈನ್ ಕಾಮಗಾರಿ ಲಾಕ್ ಡೌನ್ ನಿಂದಾಗಿ ಮತ್ತಷ್ಟು ವಿಳಂಬಗೊಂಡಿದೆ. 

ಟೆಂಡರ್ ಗಳನ್ನು ಅಂತಿಮಗೊಳಿಸುವುದರ ಮೇಲೆಯೂ ಲಾಕ್ ಡೌನ್ ಪರಿಣಾಮ ಬೀರಿದ್ದು, ಮುಂದಿನ ವಾರ ಅಂತಿಮಗೊಳ್ಳಬೇಕಿದ್ದ ರೀಚ್ 2 ಬಿ ಲೈನ್ ನ ಟೆಂಡರ್ ಗಳು ಒಂದು ತಿಂಗಳ ಕಾಲ ಮುಂದೂಡಲ್ಪಟ್ಟಿದೆ. ಹೊಸ ಗಡುವಿನ ಪ್ರಕಾರ ಜೂ.14ಕ್ಕೆ ಟೆಂಡರ್ ಗಳನ್ನು ಅಂತಿಮಗೊಳಿಸಲಾಗುತ್ತದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ. 

ಹೆಬ್ಬಾಳದ ಮೂಲಕ ಹಾದು ಹೋಗುವ ಕೆಆರ್ ಪುರ- ಕೆಐಎ ನಡುವಿನ 17 ನಿಲ್ದಾಣಗಳನ್ನು ಹೊಂದಿರುವ್ 38.44 ಕಿ.ಮೀ  ಮಾರ್ಗದ ಮೆಟ್ರೋ ಕಾಮಗಾರಿಗೆ ಏ.20 ರಂದು ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. 14,788 ಕೋಟಿ ರೂಪಾಯಿ ವೆಚ್ಚ, 5 ವರ್ಷಗಳ ಗಡುವು ಹೊಂದಿದ್ದ ಈ ಕಾಮಗಾರಿಯ ಗುತ್ತಿಗೆಯನ್ನು ಮೇ.15 ರ ಒಳಗೆ ಅಂತಿಮಗೊಳಿಸಬೇಕಾಗಿತ್ತು. 

ಬಿಎಂಆರ್ ಸಿಎಲ್ ನ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್ ಈ ಬಗ್ಗೆ ಮಾತನಾಡಿದ್ದು, ಟೆಂಡರ್ ನ್ನು ಅಂತಿಮಗೊಳಿಸಬೇಕಾದರೆ ಅದಕ್ಕೆ ಭೌತಿಕವಾಗಿ ಕೆಲವು ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ. ಆದರೆ ಕೋವಿಡ್-19 ಕಾರಣದಿಂದಾಗಿ ರಾಜ್ಯದಲ್ಲಿ ಲಾಕ್ ಡೌನ್ ಇದ್ದು ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಖುದ್ದಾಗಿ ಆಗಮಿಸಿ ದಾಖಲಾತಿಗಳನ್ನು ಸಲ್ಲಿಸುವುದಕ್ಕೆ ಸಾಧ್ಯವಾಗುವುದಿಲ್ಲವಾದ ಕಾರಣ ಟೆಂಡರ್ ನ್ನು ಮುಂದೂಡಲಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಹಲವು ಬಿಡ್ಡರ್ ಗಳಿಂದ ಮನವಿ ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ" ಎಂದು ಹೇಳಿದ್ದಾರೆ. "ರೀಚ್ 6E ಪೂರ್ಣಗೊಳಿಸುವ ಗುತ್ತಿಗೆಯ ಅವಧಿಯನ್ನು ಮೇ.21 ರಿಂದ ಜೂ.21 ಕ್ಕೆ ಮುಂದೂಡಲ್ಪಟಿದೆ" ಎಂದೂ ರಾಕೇಶ್ ಸಿಂಗ್ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com