ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್'ಗಳ ಲಭ್ಯತೆ ಸ್ಥಿತಿಗತಿ ತಿಳಿಯಲು ವೆಬ್ ಪೋರ್ಟಲ್ ಆರಂಭ

ಖಾಸಗಿ ಆಸ್ಪತ್ರೆಗಳಲ್ಲಿನ ಕೋವಿಡ್ ರೋಗಿಗಳಿಗೆ ಹಾಸಿಗೆಗಳ ಸ್ಥಿತಿಗತಿಯನ್ನು ಕ್ಷಣಕ್ಷಣಕ್ಕೆ ನೀಡುವ ವೆಬ್ ಪೋರ್ಟಲ್ searchmybed ಗೆ ಭಾನುವಾರ ಚಾಲನೆ ದೊರೆತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿನ ಕೋವಿಡ್ ರೋಗಿಗಳಿಗೆ ಹಾಸಿಗೆಗಳ ಸ್ಥಿತಿಗತಿಯನ್ನು ಕ್ಷಣಕ್ಷಣಕ್ಕೆ ನೀಡುವ ವೆಬ್ ಪೋರ್ಟಲ್ searchmybed ಗೆ ಭಾನುವಾರ ಚಾಲನೆ ದೊರೆತಿದೆ. 

ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ ಒಕ್ಕೂಟದ (ಫನಾ) ಪ್ರಯತ್ನದ ಫಲವಾಗಿ ಪೋರ್ಟಲ್ ರಚನೆಯಾಗಿದ್ದು, ಇಲ್ಲಿ ಬೆಂಗಳೂರಿನ 95 ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಖಾಲಿ ಇರುವ ಸಾಮಾನ್ಯ ಬೆಡ್, ಆಮ್ಲಜನಕ ಯುಕ್ತ ಬೆಡ್, ವೆಂಟಿಲೇಟರ್ ಸಹಿತ ಬೆಡ್ ಹಾಗೂ ಐಸಿಯು ಬೆಡ್ ಗಳ ಮಾಹಿತಿ ನೀಡಲಿವೆ. 

ಭಾನುವಾರ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ವರ್ಚುವಲ್ ಮೂಲಕ ಪೋರ್ಟಲ್'ನ್ನು ಉದ್ಘಾಟನೆ ಮಾಡಿದರು. 

ಬಳಿಕ ಮಾತನಾಡಿದ ಅವರು, ಜನರಿಗೆ ಪಾರದರ್ಶಕ ಮಾಹಿತಿಯನ್ನು ನೀಡಲು ಮುಂದಾಗಿರುವ ಫನಾವನ್ನು ಅಭಿನಂದಿಸಿದರು. ನಂಬಿಗಸ್ಥ ಮತ್ತು ರಿಯಲ್ ಟೈಮ್ ಮಾಹಿತಿ ಜನರಿಗೆ ಸಿಕ್ಕರೆ ಉಪಯುಕ್ತವಾಗುತ್ತದೆ. ಸಾಕಷ್ಟು ಅಮೂಲ್ಯ ಜೀವಗಳು ಇದರಿಂದ ಉಳಿಯುತ್ತೇವೆ ಎಂದು ಹೇಳಿದ್ದಾರೆ. 

ಫನಾ ಅಧ್ಯಕ್ಷ ಡಾ.ಪ್ರಸನ್ನ ಹೆಚ್ಎಂ ಅವರು ಮಾತನಾಡಿ, ಬೆಡ್ ಗಾಗಿ ಜನರು ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ಅಲೆಯುತ್ತಿರುವುದನ್ನು ನೋಡುತ್ತಿದ್ದರೆ ಸಾಕಷ್ಟು ನೋವಾಗುತ್ತಿದೆ. ಜನರುಗೆ ಔಷಧಿ, ಹಾಸಿಗೆ ಹಾಗೂ ಆಕ್ಸಿಜನ್ ದೊರೆಯಬೇಕು. ಜನರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರಬಾರದು. ರಾಜ್ಯದಲ್ಲಿಂದು ಐಸಿಯೂ ಬೆಡ್ ಗಳಿಗೆ ಹಾಹಾಕಾರ ಶುರುವಾಗಿದೆ. 50 ಜನರಲ್ಲಿ ಒಬ್ಬರಿಗೆ ಮಾತ್ರ ಆಕ್ಸಿಜನ್ ಐಸಿಯು ಬೆಡ್ ಸಿಗುತ್ತಿದೆ. ಇದು ನಾಚಿಕೆಗೇಡಿನ ವಿಚಾರ. ಈ ಪೋರ್ಟಲ್ ಪಾರದರ್ಶಕವಾಗಿರಲಿದ್ದು, ಸೋಂಕಿತರು ಹಾಗೂ ಎನ್'ಜಿಒಗಳು ಪೋರ್ಟಲ್ ಮೂಲಕ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ. 

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಮಾತನಾಡಿ, ಕೆಪಿಎಂಇ ಮತ್ತು ಎಸ್ಎಎಸ್'ಟಿ ಪೋರ್ಟಲ್ ಸೂಕ್ತ ರೀತಿಯಲ್ಲಿಯೇ ಮಾಹಿತಿಗಳನ್ನು ನೀಡುತ್ತಿದೆ. ಆದರೂ, ಪರಿಹಾರ ಹುಡುಕುವಂತೆ ಫನಾಗೆ ಸೂಚನೆ ನೀಡಲಾಗಿತ್ತು. ನಗರದ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಸಂಖ್ಯೆಯನ್ನು 300-500ಕ್ಕೆ ಹಾಗೂ ಆಕ್ಸಿಜನ್ ಬೆಡ್ ಗಳನ್ನು 2,000ಕ್ಕೆ ಏರಿಕೆ ಮಾಡಬೇಕಿದೆ ಎಂದು ಹೇಳಿದ್ದಾರೆ. 

ಸಂಸದ ತೇಜಸ್ವಿ ಸೂರ್ಯ ಅವರು ಮಾತನಾಡಿ, ಪೋರ್ಟಲ್ ನಲ್ಲಿ ರಿಯಲ್ ಟೈಂನಲ್ಲಿ ಮಾಹಿತಿ ಬರುವುದು ಅತ್ಯವಶ್ಯಕ. ಇಲ್ಲದೇ ಹೋದಲ್ಲಿ ಜನರು ಸುಮಾರು 8-10 ಸಲ ನೋಡಿ ಆ ಬಳಿಕ ಪೋರ್ಟಲ್ ನೋಡುವುದನ್ನು ಬಿಟ್ಟು ಬಿಡುತ್ತಾರೆ. ಮೊದಲ ಅಲೆಯ ಸಂದರ್ಭದಲ್ಲಿ ಇಂತಹ ಪೋರ್ಟಲ್ ಇರಬೇಕಿತ್ತು. ಆದರೂ ದಾಖಲೆಯ 10 ದಿನಗಳಲ್ಲಿ ಇಂತಹ ಪೋರ್ಟಲ್ ನಿರ್ಮಾಣ ಮಾಡಿದ್ದಕ್ಕೆ ಫನಾವನ್ನು ಅಭಿನಂದಿಸುವುದಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com