45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಹೇಗೆ ಸಿಕ್ಕಲಿದೆ?: ಕೋವಿಡ್ ಲಸಿಕೆ ಕೊರತೆ ಬಗ್ಗೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ!

45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆಗಳ ಎರಡನೇ ಡೋಸ್ ನೀಡಲು ಅಧಿಕಾರಿಗಳು ಹೇಗೆ ಕಾರ್ಯತತ್ಪರರಾಗಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆಗಳ ಎರಡನೇ ಡೋಸ್ ನೀಡಲು ಅಧಿಕಾರಿಗಳು ಹೇಗೆ ಕಾರ್ಯತತ್ಪರರಾಗಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ಇದೀಗ ಮೊದಲ ಡೋಸ್ ನಿಲ್ಲಿಸಿದ್ದು ಎರಡನೇ ಡೋಸ್ ಮಾತ್ರ ನೀಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

ಆದರೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠವು ರಾಜ್ಯದಲ್ಲಿ ಲಸಿಕೆಗಳ ಲಭ್ಯತೆಯ ಬಗ್ಗೆ ಮನವರಿಕೆ ಮಾಡಿಸಿಕೊಡಿ ಎಂದು ಕೇಳಿದೆ.

"ಕೇವಲ 9 ಲಕ್ಷ ಡೋಸ್ ಲಸಿಕೆಗಳು ಮಾತ್ರ ಲಭ್ಯವಿದೆ. 16 ಲಕ್ಷ ಜನರಿಗೆ ತಕ್ಷಣವೇ ಎರಡನೇ ಡೋಸ್ ಬೇಕು. 18-44 ವಯಸ್ಸಿನವರನ್ನು ಮರೆತುಬಿಡಿ. ಅವರಿಗೆ ಡೋಸ್ ನೀಡಲು ಸಾಧ್ಯವಿಲ್ಲ. 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ, ರಾಜ್ಯವು ಎರಡನೇ ಡೋಸ್ ಅನ್ನು ಹೇಗೆ ನೀಡುತ್ತದೆ" ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದೆ.

ಲಸಿಕೆಯ ಮೊದಲ ಡೋಸ್ ನೀಡಿ ಎರಡನೇ ಡೋಸ್ ಅನ್ನು ಸಮಯಕ್ಕೆ ನೀಡದಿದ್ದರೆ ಅದರ ಪರಿಣಾಮಗಳ ಬಗ್ಗೆ ಏನು ಉತ್ತರ ನೀಡಬಲ್ಲಿರಿ ಎಂದು ನ್ಯಾಯಪೀಠ ರಾಜ್ಯವನ್ನು ಕೇಳಿತು.

"ಕೋವಾಕ್ಸಿನ್ ಎರಡನೇ ಡೋಸ್ ಅನ್ನು 4 ವಾರಗಳಲ್ಲಿ ತೆಗೆದುಕೊಳ್ಳಬೇಕಿದೆ" ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com