ಕೊರೋನಾ ರೋಗಿಗಳಿಗೆ ಮೊಬೈಲ್ ಆಕ್ಸಿಜನ್: ಆಕ್ಸಿಬಸ್ ಸೇವೆಗೆ ಸಿಎಂ ಯಡಿಯೂರಪ್ಪ ಚಾಲನೆ!

ಗಂಭೀರ ಸ್ವರೂಪದ ರೋಗಲಕ್ಷಣಗಳಿರುವ ರೋಗಿಗಳಿಗೆ ಚಿಕಿತ್ಸೆ ಪಡೆಯಲು ದಾರಿ ಮಾಡಿಕೊಡಿ, 'ಅನಗತ್ಯವಾಗಿ' ಆಸ್ಪತ್ರೆಗಳಲ್ಲಿ ಹೆಚ್ಚು ಕಾಲ ಉಳಿದಿರುವ ಕೋವಿಡ್ ರೋಗಿಗಳು ಮನೆಗೆ ತೆರಳಿ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಂಗಳವಾರ ಮನವಿ ಮಾಡಿದ್ದಾರೆ.
ಕೊರೋನಾ ರೋಗಿಗಳ ಆರೈಕೆಗಾಗಿ ಆಕ್ಸಿಬಸ್  ಸೇವೆಗೆ ಚಾಲನೆ ನೀಡಿದ ಸಿಎಂ ಯಡಿಯೂರಪ್ಪ
ಕೊರೋನಾ ರೋಗಿಗಳ ಆರೈಕೆಗಾಗಿ ಆಕ್ಸಿಬಸ್ ಸೇವೆಗೆ ಚಾಲನೆ ನೀಡಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ಗಂಭೀರ ಸ್ವರೂಪದ ರೋಗಲಕ್ಷಣಗಳಿರುವ ರೋಗಿಗಳಿಗೆ ಚಿಕಿತ್ಸೆ ಪಡೆಯಲು ದಾರಿ ಮಾಡಿಕೊಡಿ, 'ಅನಗತ್ಯವಾಗಿ' ಆಸ್ಪತ್ರೆಗಳಲ್ಲಿ ಹೆಚ್ಚು ಕಾಲ ಉಳಿದಿರುವ ಕೋವಿಡ್ ರೋಗಿಗಳು ಮನೆಗೆ ತೆರಳಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಗಳವಾರ ಮನವಿ ಮಾಡಿದ್ದಾರೆ.

"332 ರೋಗಿಗಳು 30 ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾದ ಅವಶ್ಯಕತೆ ಏನು? ಆಸ್ಪತ್ರೆಯಲ್ಲಿ 503 ರೋಗಿಗಳು 20 ದಿನಗಳಿಂದ ಇದ್ದಾರೆ. ಈ ರೀತಿ ಅನಗತ್ಯವಾಗಿ ಆಸ್ಪತ್ರೆಯಲ್ಲಿ ಉಳಿದುಕೊಂಡಿರುವ ಜನರು ಮನೆಗೆ ಮರಳಬೇಕು" ಎಂದು ಅವರು ಹೇಳಿದರು.

ತುರ್ತು ಸಂದರ್ಭಗಳಲ್ಲಿ ಕೋವಿಡ್-19 ರೋಗಿಗಳಿಗೆ ಸಹಾಯ ಮಾಡಲು ಮುಖ್ಯಮಂತ್ರಿಗಳು ಆಕ್ಸಿಬಸ್ ಸೇವೆಯನ್ನು ಪ್ರಾರಂಭಿಸಿದರು. ಪ್ರತಿ ತಾತ್ಕಾಲಿಕ ಆಕ್ಸಿಬಸ್ 8 ರೋಗಿಗಳಿಗೆ ನೆರವಾಗಲಿದೆ. ಅಂತಹ 20 ಬಸ್ ಗಳನ್ನು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳು ಮತ್ತು ಚಿಕಿತ್ಸಾ ಕೇಂದ್ರಗಳ ಬಳಿ ಇರಿಸಲಾಗುವುದು ಅಲ್ಲದೆ ರಾಜ್ಯದಾದ್ಯಂತ ಹೆಚ್ಚಿನ ಸಂಖ್ಯೆಯ ಬಸ್ ಗಳನ್ನು ಇರಿಸಲಾಗುವುದು. ಬೆಂಗಳೂರಿನ ಕೋವಿಡ್  ವಾರ್ ರೂಮ್ ಗೆ ಭೇಟಿ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಕೋವಿಡ್ ರೋಗಿಗಳ ಬಗ್ಗೆ ಮಾಹಿತಿ, ಆಸ್ಪತ್ರೆಗಳಲ್ಲಿನ ಬೆಡ್ ಗಳ ಸ್ಥಿತಿ, ಆಮ್ಲಜನಕದ ಲಭ್ಯತೆ ಮತ್ತು ಸಾಂಕ್ರಾಮಿಕ ರೋಗಕ್ಕೆ ಅಗತ್ಯವಾದ ಇತರ ಔಷಧಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೋವಿಡ್ ವಾರ್ ರೂಮ್ಮನೆಯಲ್ಲಿ ಚಿಕಿತ್ಸೆ ಪಡೆಯಬಹುದಾದ ರೋಗಿಗಳ ಬಗ್ಗೆ ಮಾಹಿತಿಯನ್ನು ಒದಗಿಸಿದೆ, ಆದರೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗಳಿಗೆ ಕಳಿಸಲಾಗಿದೆ ಎಂದು ಸಿಎಂ ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯಡಿಯೂರಪ್ಪ, ಆ 503 ಜನರು ಡಿಸ್ಚಾರ್ಜ್ ಮಾಡುವ ಸಂಬಂಧ ವೈದ್ಯರ ಸಲಹೆ ಹೊರತಾಗಿಯೂ ಆಸ್ಪತ್ರೆಯಲ್ಲಿದ್ದಾರೆ ಎಂದರು. ಅವರ ಪ್ರಕಾರ, ಅಂತಹ ರೋಗಿಗಳಿಗೆ ಚಿಕಿತ್ಸೆ ಮುಗಿದಿದೆ ಎಂದು ತಿಳಿಯಬೇಕು ಮತ್ತು ಅವರು ಗಂಭೀರ ಸ್ಥಿತಿಯಲ್ಲಿರುವವರಿಗಾಗಿ ದಾರಿ ಮಾಡಿಕೊಡಬೇಕು.

ಕೋವಿಡ್ ವಾರ್ ರೂಮ್ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಯಡಿಯೂರಪ್ಪ ಇದು ದೇಶದಲ್ಲಿ ಒಂದು ಮಾದರಿಯಾಗಿದ್ದು, ಪ್ರವೇಶ ಪಡೆದ ಜನರ ಸಂಖ್ಯೆ, ಅವರು ಎಷ್ಟು ಸಮಯದವರೆಗೆ ಇದ್ದಾರೆ ಮತ್ತು ಆಸ್ಪತ್ರೆಗಳಲ್ಲಿ ಬೆಡ್ ಗಳ ಲಭ್ಯತೆಯ ಬಗ್ಗೆ ರಿಯಲ್ ಟೈಮ್ ಆಧಾರದ ಮೇಲೆ ದತ್ತಾಂಶವು ಎಲ್ಲ ವಿವರಗಳನ್ನು ನೀಡುತ್ತದೆ. ಕೋವಿಡ್ ರೋಗಿಗಳಿಗೆ. "ನಾವು ಈ ವಾರ್ ರೂಮ್ ಅನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸುತ್ತಿದ್ದೇವೆ, ಇದನ್ನು ಬಹುಶಃ ದೇಶದಲ್ಲಿ ಇನ್ನೆಲ್ಲಿಯೂ ನೋಡಲಾಗುವುದಿಲ್ಲ" ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com