ಬೆಂಗಳೂರು: ಕುಂಭಮೇಳದಿಂದ ಹಿಂದಿರುಗಿದ ಅತ್ತೆಯಿಂದ ವೈದ್ಯನಿಗೆ ಕೊರೋನಾ, ವೈದ್ಯರಿಂದ 13 ಮಂದಿಗೆ ಪಾಸಿಟಿವ್

ಬೆಂಗಳೂರಿನ ಸ್ಪಂದನ ಹೆಲ್ತ್‌ಕೇರ್‌ನಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರೊಬ್ಬರಿಂದ ಅಲ್ಲಿನ 11 ರೋಗಿಗಳಿಗೆ ಹಾಗೂ ಇಬ್ಬರು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನ ಸ್ಪಂದನ ಹೆಲ್ತ್‌ಕೇರ್‌ನಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರೊಬ್ಬರಿಂದ ಅಲ್ಲಿನ 11 ರೋಗಿಗಳಿಗೆ ಹಾಗೂ ಇಬ್ಬರು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಮನೋವೈದ್ಯರೊಬ್ಬರಿಗೆ ಕುಂಭಮೇಳದಿಂದ ಮರಳಿದ ಅವರ ಅತ್ತೆಯಿಂದ ಸೋಂಕು ತಗುಲಿದ್ದು, ಅವರಿಂದ ಹನ್ನೊಂದು ರೋಗಿಗಳು ಮತ್ತು ಇಬ್ಬರು ಸಿಬ್ಬಂದಿ ಕೊರೋನಾ ಪಾಸಿಟಿವ್ ಬಂದಿದೆ.

ಇನ್ನೂ ವೈದ್ಯರ ಕುಟುಂಬದ ಹದಿನೆಂಟು ಜನರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ರೋಗಿಗಳು ಮತ್ತು ಸಿಬ್ಬಂದಿ ಸೇರಿದಂತೆ ಆಸ್ಪತ್ರೆಯಲ್ಲಿ ಎಲ್ಲರೂ ಚೇತರಿಸಿಕೊಂಡಿದ್ದರೆ, ಈ ಘಟನೆಯು ಕೋವಿ-19 ರೋಗಿಗಳಿಗೆ 40 ಹಾಸಿಗೆಗಳ ಪ್ರತೇಕ ವಿಭಾಗ ಆರಂಭಿಸಲು ಪ್ರೇರೇಪಿಸಿದೆ.

"ವೈದ್ಯರು ತಮ್ಮ ಅತ್ತೆಗೆ ಕೆಮ್ಮು ಮತ್ತು ಜ್ವರ ಕಾಣಿಸಿಕೊಂಡ ನಂತರ ಕೇವಲ ಒಂದು ದಿನ ಮಾತ್ರ ಆಸ್ಪತ್ರೆಗೆ ಬಂದಿದ್ದಾರೆ. ನಂತರ ಅವರು ಕ್ವಾರಂಟೈನ್ ಆಗಿದ್ದಾರೆ. ಆದರೆ ಒಂದೇ ದಿನದಲ್ಲಿ 13 ಮಂದಿಗೆ ಸೋಂಕು ತಗುಲಿಸಿದ್ದಾರೆ.

ನಮ್ಮ ಆಸ್ಪತ್ರೆಯ 250 ರೋಗಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಕೆಲವರಿಗೆ ಪಾಸಿಟಿವ್ ಬಂದಿದೆ. ಹೀಗಾಗಿ ನಮ್ಮ ಆಸ್ಪತ್ರೆ ಕ್ಲಸ್ಟರ್ ಆಗಿ ಮಾರ್ಪಟ್ಟಿತು ಮತ್ತು ಬಿಬಿಎಂಪಿ ಕೂಡ ಭೇಟಿ ನೀಡಿತು ಎಂದು ಸ್ಪಂದಾನಾ ಹೆಲ್ತ್ ಕೇರ್ ನಿರ್ದೇಶಕ ಡಾ.ಮಹೇಶ್ ಗೌಡ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com