'ಫಾರ್ಮ್-ಡಿ ಪದವೀದರರನ್ನು ಕೋವಿಡ್‌ಗೆ ಆರೋಗ್ಯ ಕಾರ್ಯಕರ್ತರಾಗಿ ಬಳಸಿಕೊಳ್ಳಿ': ಸರ್ಕಾರಕ್ಕೆ ಮನವಿ

ಕೋವಿಡ್-19 ನಿರ್ವಹಣೆಗೆ ವೈದ್ಯಕೀಯ ವೈದ್ಯರು ಮತ್ತು ಕ್ಲಿನಿಕಲ್ ಸಿಬ್ಬಂದಿಗಳ ಕೊರತೆ ಎದುರಾಗಿರುವಂತೆಯೇ ಇತ್ತ ಕ್ಲಿನಿಕಲ್ ಫಾರ್ಮಸಿಸ್ಟ್ ವೈದ್ಯರನ್ನು (ಫಾರ್ಮ್ ಡಿ ಪದವೀಧರರನ್ನು) ಕೋವಿಡ್‌ಗೆ ಆರೋಗ್ಯ ಕಾರ್ಯಕರ್ತರಾಗಿ (ಎಚ್‌ಸಿಡಬ್ಲ್ಯೂ) ಬಳಸಿಕೊಳ್ಳುವಂತೆ ಸರ್ಕಾರಕ್ಕೆ ಮನವಿ  ಮಾಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಕೋವಿಡ್-19 ನಿರ್ವಹಣೆಗೆ ವೈದ್ಯಕೀಯ ವೈದ್ಯರು ಮತ್ತು ಕ್ಲಿನಿಕಲ್ ಸಿಬ್ಬಂದಿಗಳ ಕೊರತೆ ಎದುರಾಗಿರುವಂತೆಯೇ ಇತ್ತ ಕ್ಲಿನಿಕಲ್ ಫಾರ್ಮಸಿಸ್ಟ್ ವೈದ್ಯರನ್ನು (ಫಾರ್ಮ್ ಡಿ ಪದವೀಧರರನ್ನು) ಕೋವಿಡ್‌ಗೆ ಆರೋಗ್ಯ ಕಾರ್ಯಕರ್ತರಾಗಿ (ಎಚ್‌ಸಿಡಬ್ಲ್ಯೂ) ಬಳಸಿಕೊಳ್ಳುವಂತೆ ಸರ್ಕಾರಕ್ಕೆ ಮನವಿ  ಮಾಡಲಾಗಿದೆ.

ಹೌದು.. ರಾಜ್ಯದ ವಿವಿಧ ಮೂಲೆಗಳಿಂದ ಕ್ಲಿನಿಕಲ್ ಫಾರ್ಮಸಿಸ್ಟ್ ವೈದ್ಯರನ್ನು ಕೋವಿಡ್-19 ನಿರ್ವಹಣೆಯಲ್ಲಿ ಬಳಸಿಕೊಳ್ಳುವಂತೆ ವ್ಯಾಪಕ ಬೇಡಿಕೆಗಳು ಕೇಳಿಬರುತ್ತಿರುವಂತೆಯೇ ಇತ್ತ ಕರ್ನಾಟಕ ನೋಂದಾಯಿತ ಔಷಧಿಕಾರರ ಸಂಘ ಮತ್ತು ಹಲವಾರು ಫಾರ್ಮ್-ಡಿ ಪದವೀಧರರು ತಮ್ಮನ್ನೂ ಕೂಡ ಕೋವಿಡ್‌  ನಿರ್ವಹಣೆಯಲ್ಲಿ ಆರೋಗ್ಯ ಕಾರ್ಯಕರ್ತರಾಗಿ (ಎಚ್‌ಸಿಡಬ್ಲ್ಯೂ) ಬಳಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮತ್ತು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ಪತ್ರ ಬರೆದು  ಫಾರ್ಮ್ ಡಿ ಪದವೀಧರರು ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಕರ್ನಾಟಕ ನೋಂದಾಯಿತ ಔಷಧಿಕಾರರ ಸಂಘ ಅಧ್ಯಕ್ಷ ಡಾ. ಕೌಶಿಕ್ ದೇವರಾಜು ಅವರು, 'ಫಾರ್ಮ್ ಡಿ ವೈದ್ಯರು ಔಷಧಿ ನಿರ್ವಹಣೆ ಚಿಕಿತ್ಸೆ ಮತ್ತು ಔಷಧೀಯ ಆರೈಕೆಯಲ್ಲಿ ಪರಿಣತರಾಗಿದ್ದಾರೆ. ಅವರ ಜ್ಞಾನವು ಔಷಧಿಗಳ ಕ್ಲಿನಿಕಲ್ ಪರಿಣಾಮಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.  ಅಲ್ಲದೆ ಚಿಕಿತ್ಸೆ ಮತ್ತು ಪ್ರೇರಿತಪ್ರತಿಕೂಲ ಘಟನೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಪ್ರಸ್ತುತ, ಕರ್ನಾಟಕವು ಕೋವಿಡ್ ನಿರ್ವಹಣೆಗಾಗಿ ವೈದ್ಯಕೀಯ ವೈದ್ಯರು ಮತ್ತು ಇತರ ಕ್ಲಿನಿಕಲ್ ಸಿಬ್ಬಂದಿಗಳ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಫಾರ್ಮ್ ಡಿ ವೈದ್ಯರು ರಾಷ್ಟ್ರದ ಸೇವೆ ಮಾಡಲು ಉತ್ಸುಕರಾಗಿದ್ದಾರೆ  ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com