ಬೆಡ್ ಗಾಗಿ 4 ಜಿಲ್ಲೆಗಳಲ್ಲಿ ಸೋಂಕಿತೆ ಅಲೆದಾಟ; ಆಸ್ಪತ್ರೆ ಆವರಣದಲ್ಲಿ ಬಿಟ್ಟು ಹೋದ ಆ್ಯಂಬುಲೆನ್ಸ್ ಚಾಲಕ; ಚಿಕಿತ್ಸೆ ಸಿಗದೆ ಸಾವು

ಕೊರೋನಾ ಸೋಂಕಿತೆಯೊಬ್ಬರು ಬೆಡ್ ಗಾಗಿ ನಾಲ್ಕು ಜಿಲ್ಲೆಗಳಲ್ಲಿ ಅಳೆದಾಡಿ, ಕೊನೆಗೆ ಎಲ್ಲಿಯೂ ಸಿಗದ ಕಾರಣ ಆ್ಯಂಬುಲೆನ್ಸ್ ಚಾಲಕ ಆಕೆಯನ್ನು ಮಂಡ್ಯದಲ್ಲಿ ಇಳಿಸಿಹೋಗಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ಸೋಂಕಿತೆಯೊಬ್ಬರು ಬೆಡ್ ಗಾಗಿ ನಾಲ್ಕು ಜಿಲ್ಲೆಗಳಲ್ಲಿ ಅಳೆದಾಡಿ, ಕೊನೆಗೆ ಎಲ್ಲಿಯೂ ಸಿಗದ ಕಾರಣ ಆ್ಯಂಬುಲೆನ್ಸ್ ಚಾಲಕ ಆಕೆಯನ್ನು ಮಂಡ್ಯದಲ್ಲಿ ಇಳಿಸಿಹೋಗಿದ್ದಾನೆ.

ಬೆಂಗಳೂರಿನ 33 ವರ್ಷದ ಸುಮಯ್ಯ ಬೆಡ್ ಗಾಗಿ ಒಂದೇ ದಿನ ಸುಮಾರು ನಾಲ್ಕು ಜಿಲ್ಲೆಗಳಲ್ಲಿ ಅಲೆದಾಡಿದ್ದಾರೆ. ಕೊನೆಗೆ ಆಕ್ಸಿಜನ್, ವೆಂಟಿಲೇಟರ್ ಸಿಗದ ಕಾರಣ ಮಂಡ್ಯ ಜಿಲ್ಲಾಸ್ಪತ್ರೆ ಆವರಣದಲ್ಲಿ ರಾತ್ರಿಯಿಡಿ ಕಳೆದಿದ್ದಾರೆ.

ಆ್ಯಂಬುಲೆನ್ಸ್ ಚಾಲಕ ಆಕೆಯನ್ನು ತುಮಕೂರಿನಿಂದ ಮಂಡ್ಯವರೆಗೂ ಕರೆದೊಯ್ದಿದ್ದಾನೆ,  ತುಮಕೂರು, ಮಂಡ್ಯ, ಚನ್ನಪಟ್ಟಣ ಕೊನೆಗೆ ಎಲ್ಲೂ ಬೆಡ್ ವೆಂಟಿಲೇಟರ್ ಸಿಗದ ಕಾರಣ ಮತ್ತೆ ಮಂಡ್ಯ ಜಿಲ್ಲಾಸ್ಪತ್ರೆ ಬಳಿ ಆಕೆಯನ್ನು ಇಳಿಸಿ ಹೋಗಿದ್ದಾನೆ.

ಒಂದು ವೇಳೆ ಆ್ಯಂಬುಲೆನ್ಸ್ ನಿಂದ ಕೆಳಗಿಳಿಯದಿದ್ದರೇ ಆಕ್ಜಿಜನ್ ಪೂರೈಕೆ ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದಾನೆ. ನೆರೆಹೊರೆಯವರು ಬೆಡ್ ಗಾಗಿ ಮತ್ತಷ್ಟು ಹುಡುಕಾಟ ನಡೆಸಿದ ಕಾರಣ ಆಕೆಗೆ ಚಿಕಿತ್ಸೆ ಮತ್ತಷ್ಟು ವಿಳಂಬವಾಗಿದೆ.

ಸುಮಯ್ಯ ಅವರಿಗೆ ಮೊದಲು ವೀಸಿಂಗ್ ಕಾಣಿಸಿಕೊಂಡಿತು, ನಂತರ, ಕೆಮ್ಮು ಮತ್ತು ತಲೆನೋವು ಕಾಣಿಸಿಕೊಂಡಿದೆ, ಹೀಗಾಗಿ ಹತ್ತಿರದ ವೈದ್ಯರು ಆಕೆಯನ್ನು ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದರು ಎಂದು ಸುಮಯ್ಯ ಸಹೋದರ ಮೊಹಮದ್ ಇಸ್ಮಾಯಿಲ್ ಹೇಳಿದ್ದಾರೆ.

ತುಮಕೂರಿನ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ತಮ್ಮ ಮನೆಗೆ ಭೇಟಿ ನೀಡಿ ಬುಧವಾರ ಬೆಳಿಗ್ಗೆ 11 ಗಂಟೆಗೆ ದಾಖಲಾಗಲು ಹೇಳಿದರು, ಅದರಂತೆ ನೆರೆಹೊರೆಯವರು ಸುಮಯ್ಯ ಅವರನ್ನು ತುಮಕೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ,ಆದರೆ ಅಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ.

ಆಕೆಯನ್ನು ಚೇರ್ ಮೇಲೆ ಕೂರಿಸಿ ಆಕ್ಸಿಜನ್ ನೀಡಿದ್ದಾರೆ, ಆಕೆಯ ಸ್ಥಿತಿ ಹದಗೆಟ್ಟಾಗ ಆ್ಯಂಬುಲೆನ್ಸ್ ನಲ್ಲಿ ಕೂರಿಸಿ ಮಂಡ್ಯಕ್ಕೆ ಕರೆದೊಯ್ಯಲಾಯಿತು ಎಂದು ಸುಮಯ್ಯ ಸಹೋದರ ಇಸ್ಮಾಯಿಲ್ ವಿವರಿಸಿದ್ದಾರೆ.

ಮಿಮ್ಸ್ ಬಳಿ ಬಂದಾಗ ಕೆಳಗೆ ಇಳಿಯದಿದ್ದರೇ ಆಕ್ಸಿಜನ್ ಪೂರೈಕೆ ಸ್ಥಗಿತಗೊಳಿಸುವುದಾಗಿ ಆ್ಯಂಬುಲೆನ್ಸ್ ಚಾಲಕ ಬೆದರಿಸಿ ಆಕೆಯನ್ನು ಕೆಳಗಿಳಿಸಿದ್ದಾನೆ. ಮಿಮ್ಸ್ ನಲ್ಲೂ ಕೂಡ ಬೆಡ್ ಇಲ್ಲ ಎಂದು ಹೇಳಿದ್ದಾರೆ.ಅಲ್ಲಿಂದ ಮತ್ತೊಂದು ಆ್ಯಂಬುಲೆನ್ಸ್ ಪಡೆದು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆಗಾಗಲೇ ಸುಮಯ್ಯ ಹೃದಯ ಬಡಿತದಲ್ಲಿ ಮತ್ತಷ್ಟು ಏರುಪೇರಾಗಿತ್ತು.

ಚನ್ನಪಟ್ಟಣ ಆಸ್ಪತ್ರೆಯಲ್ಲಿಯೂ ಆಕೆಯನ್ನು ದಾಖಲಿಸಿಕೊಳ್ಳಲಿಲ್ಲ, ಹೀಗಾಗಿ ಮತ್ತೆ ಮಂಡ್ಯ ಆಸ್ಪತ್ರೆಗೆ ವಾಪಾಸಾದರು,  ಮಂಡ್ಯ ಆಸ್ಪತ್ರೆಯಲ್ಲಿ ಆಕ್ಸಿಜನ್ ಮತ್ತು ಬೆಡ್ ಗಾಗಿ ಬೇಡಿಕೊಂಡರು, ಅದಾದ ನಂತರ ಆಕೆಗೆ ಆಸ್ಪತ್ರೆಯ ಕಂಪೌಂಡ್ ನಲ್ಲಿ ಡ್ರಿಪ್ಸ್ ಹಾಕಲಾಯಿತು, ದುರಾದೃಷ್ಠವಶಾತ್ ಆಕೆ ಸಾವನ್ನಪ್ಪಿದ್ದಾರೆ, ವಿಧವೆಯಾಗಿದ್ದ ಸುಮಯ್ಯ ಅವರಿಗೆ ಮೂರು ಮಕ್ಕಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com