ಬೆಂಗಳೂರು: ರಾಜ್ಯದ ಮೊದಲ ಮಹಿಳಾ ಶಿಲ್ಪಿ ಕನಕ ಮೂರ್ತಿ ನಿಧನ

ರಾಜ್ಯದ ಮೊದಲ ಮಹಿಳಾ ಶಿಲ್ಪಿ ಎಂದು ಹೆಗ್ಗಳಿಕೆ ಹೊಂದಿದ್ದ ಶಿಲ್ಪಿ ಕನಕ ಮೂರ್ತಿ ಇಂದು ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.
ಕನಕ ಮೂರ್ತಿ
ಕನಕ ಮೂರ್ತಿ

ಬೆಂಗಳೂರು: ರಾಜ್ಯದ ಮೊದಲ ಮಹಿಳಾ ಶಿಲ್ಪಿ ಎಂದು ಹೆಗ್ಗಳಿಕೆ ಹೊಂದಿದ್ದ ಶಿಲ್ಪಿ ಕನಕ ಮೂರ್ತಿ ಇಂದು ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಮೃತರು ಪತಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಬಾಲ್ಯದಿಂದಲೂ ಶಿಲ್ಪಕಲೆಯತ್ತ ಆಸಕ್ತಿ ತಾಳಿದ್ದ ಕನಕ ಮೂರ್ತಿ ಗುರುಗಳಾದ ವಾದಿರಾಜ್ ಅವರ ಬಳಿ ಶಿಲ್ಪಶಾಸ್ತ್ರದ ಅಭ್ಯಾಸ ಮಾಡಿದ್ದರು.

ಆಧುನಿಕ ಮತ್ತು ಸಾಂಪ್ರದಾಯಿಕ ಎರಡು ಕಲಾಪ್ರಕಾರಗಳಲ್ಲಿ ಪಳಗಿದವರು ಕನಕ ಮೂರ್ತಿ. ಬೆಂಗಳೂರಿನ ಲಾಲ್ ಬಾಗ್ ಸಮೀಪದ ಕುವೆಂಪು ಪ್ರತಿಮೆ, ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯದಲ್ಲಿರುವ ರೈಟ್ ಸೋದರರ ಪ್ರತಿಮೆ, ಸತ್ಯಸಾಯಿ ಆಸ್ಪತ್ರೆಯ ಮುಂಭಾಗದಲ್ಲಿರುವ ಹೊಯ್ಸಳ ಶೈಲಿಯ ವಿಷ್ಣುವಿನ ಪ್ರತಿಮೆ ಸೇರಿದಂತೆ ಇನ್ನೂರಕ್ಕೂ ಹೆಚ್ಚು ಅದ್ಭುತ ಕಲಾಕೃತಿಗಳನ್ನು ಕನಕ ಮೂರ್ತಿ ಅವರು ನಿರ್ಮಾಣ ಮಾಡಿದ್ದಾರೆ. 

ನಗರದ ಬಾಣಸವಾಡಿಯಲ್ಲಿರುವ 11 ಅಡಿ ಎತ್ತರದ ಆಂಜನೇಯನ ವಿಗ್ರಹ ಸಹ ಕನಕ ಮೂರ್ತಿ ಅವರ ಕೈಚಳಕಕ್ಕೆ ಸಾಕ್ಷಿಯಾಗಿದೆ.

ಕನಕ ಮೂರ್ತಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ,ಸುವರ್ಣ ಕರ್ನಾಟಕ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿ, ಗೌರವಗಳು ಲಭಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com