ಶಾಲೆಗಳಿಗೆ ಆರ್.ಟಿ.ಇ ಅನುದಾನ ಪಾವತಿಸಲು ಸರ್ಕಾರದಿಂದ 700 ಕೋಟಿ ಹಣ ಬಿಡುಗಡೆಗೆ ಅನುಮೋದನೆ!

ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಅನುದಾನರಹಿತ ಶಾಲೆಗಳಿಗೆ ಆರ್‌ಟಿಇ ಶುಲ್ಕ ಮರುಪಾವತಿಗಾಗಿ ರಾಜ್ಯ ಸರ್ಕಾರವೂ 700 ಕೋಟಿ ರೂ. ಹಣ ಬಿಡುಗಡೆಗೆ ಅನುಮೋದನೆ ನೀಡಿದೆ.
ಸುರೇಶ್ ಕುಮಾರ್
ಸುರೇಶ್ ಕುಮಾರ್

ಬೆಂಗಳೂರು: ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಅನುದಾನರಹಿತ ಶಾಲೆಗಳಿಗೆ ಆರ್‌ಟಿಇ ಶುಲ್ಕ ಮರುಪಾವತಿಗಾಗಿ ರಾಜ್ಯ ಸರ್ಕಾರವೂ 700 ಕೋಟಿ ರೂ. ಹಣ ಬಿಡುಗಡೆಗೆ ಅನುಮೋದನೆ ನೀಡಿದೆ.

ಇಲಾಖೆಯಿಂದ ಆರ್‌ಟಿಇ ಮರುಪಾವತಿ ಬಾಕಿ ಇನ್ನೂ ಬಂದಿಲ್ಲ  ಎಂಬ ಆರೋಪದ ನಡುವೆ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ, ಸರ್ಕಾರದಿಂದ ಇಲಾಖೆಗೆ ಹಣ ವರ್ಗಾವಣೆಯಾಗಿದ್ದು, ಸರ್ಕಾರದ ಆದೇಶ ಬಂದ ಕೂಡಲೇ ಅರ್ಹ ಶಾಲೆಗಳಿಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ಪ್ರಾಥಮಿಕ ಶಾಲೆ ನಿರ್ದೇಶಕರು ತಿಳಿಸಿದ್ದಾರೆ.

ಇಲ್ಲಿಯವರೆಗೆ, 2019-20 ಮತ್ತು 2020-21ರ ವರ್ಷಗಳಿಗೆ ಮೀಸಲಿಟ್ಟ 1,050 ಕೋಟಿ ರೂ.ಗಳನ್ನು ಈಗಾಗಲೇ ಬಳಸಿಕೊಳ್ಳಲಾಗಿದೆ ಎಂದು ಹಲವಾರು ಶಾಲೆಗಳ ಆರ್‌ಟಿಇ ಮರುಪಾವತಿ ಬಾಕಿ ಉಳಿದಿದೆ ಎಂದು ಶಾಲೆಗಳು ಹೇಳಿದ್ದವು ಎಂದು ಇಲಾಖೆ ತಿಳಿಸಿದೆ.

5,06,694 ವಿದ್ಯಾರ್ಥಿಗಳ ಶುಲ್ಕ ಮರುಪಾವತಿಯಾಗಿ 11,432 ಖಾಸಗಿ ಸಂಸ್ಥೆಗಳಿಗೆ 2019-20ರಲ್ಲಿ ಮೀಸಲಿಟ್ಟ 500 ಕೋಟಿ ರೂ., ಮತ್ತು 4,75,083 ವಿದ್ಯಾರ್ಥಿಗಳ ಮರುಪಾವತಿಗಾಗಿ 11,386 ಖಾಸಗಿ ಸಂಸ್ಥೆಗಳಿಗೆ 2020-21ಕ್ಕೆ ಮೀಸಲಿಟ್ಟ 550 ಕೋಟಿ ರೂ. ಸಂಪೂರ್ಣವಾಗಿ ಬಳಸಲಾಗಿದೆ.

ಇಲಾಖೆಯ ಸುತ್ತೋಲೆಯ ಪ್ರಕಾರ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೇವಲ 11,386 ಸಂಸ್ಥೆಗಳಲ್ಲಿ ಕೇವಲ 4,379 ಶಾಲೆಗಳ ಹಣ ಕ್ಲಿಯರ್ ಮಾಡಲಾಗಿದೆ. ಇನ್ನೂ 2,891 ಶಾಲೆಗಳು ಇನ್ನೂ ಅನುದಾನದ ಹಣ ಘೋಷಣೆ ಮಾಡಿಲ್ಲ, ಆದರೆ 1,453 ಶಾಲೆಗಳ ಅನುದಾನ ಘೋಷಣೆ ಮರು ಪರಿಶೀಲನೆಗೆ ಒಳಗಾಗುತ್ತಿವೆ ಎಂದು ತಿಳಿಸಿದ್ದಾರೆ.

ಈ ನಡುವೆ ಮಾರ್ಚ್ 2021 ರ ಆರ್‌ಟಿಇ ಮರುಪಾವತಿಗಾಗಿ ರಾಜ್ಯವು 100 ಕೋಟಿ ರೂ.ಗಳನ್ನು ಹೆಚ್ಚುವರಿ ನಿಧಿಯಾಗಿ ಬಿಡುಗಡೆ ಮಾಡಿದೆ, 76 ಕೋಟಿ ರೂ.ಗಳನ್ನು ರಾಜ್ಯ ಕಚೇರಿಯಿಂದ ನೇರವಾಗಿ 2,466 ಖಾಸಗಿ ಸಂಸ್ಥೆಗಳ ಖಾತೆಗಳಿಗೆ ಬಿಡುಗಡೆ ಮಾಡಲಾಗಿದೆ, ಮತ್ತು ಉಳಿದ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ಇಲಾಖೆಯ ಸುತ್ತೋಲೆ ತಿಳಿಸಿದೆ.

ಶಾಲೆಗಳಿಗೆ ನೀಡಬೇಕಾದ ಹಣವನ್ನು ಅನಗತ್ಯವಾಗಿ ತಮ್ಮ ಖಾತೆಯಲ್ಲೇ ಉಳಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮಕ್ಕೆ ಕೂಡಲೇ ಪ್ರಸ್ತಾವನೆ ಮಂಡಿಸಲೂ ಸಹ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಕೋವಿಡ್ ಸಂಕಷ್ಟದ ಸಮಯದಲ್ಲೂ ಮಕ್ಕಳಿಗೆ ಶಿಕ್ಷಣ ನೀಡಲು ಶಾಲೆಗಳು ಕ್ರಮ ವಹಿಸಿದ್ದು, ಬಾಕಿ ಆರ್.ಟಿ.ಇ ಹಣವನ್ನು ಮೇ ಅಂತ್ಯದೊಳಗೆ ಬಿಡುಗಡೆ ಮಾಡಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಬಾಕಿ ಹಣ ನೀಡದೇ ಬಾಕಿ ಉಳಿಸಿಕೊಂಡಿರುವ ಬಿಇಒ ಮತ್ತು ಡಿಡಿಪಿಐಗಳಿಗೆ ಎಚ್ಚರಿಕೆ ನೀಡಿ ತಕ್ಷಣವೇ ಹಣ ಬಿಡುಗಡೆಗೆ ಕ್ರಮ ವಹಿಸಬೇಕೇಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಸಚಿವರು ಸೂಚಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com