ಗರೀಬ್ ಕಲ್ಯಾಣ ಯೋಜನೆಯಡಿ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ ಉಚಿತವಾಗಿ 5 ಕೆಜಿ ಅಕ್ಕಿ

ಕೋವಿಡ್ ಸಾಂಕ್ರಾಮಿಕ ಹರಡಿರುವ ಕಾರಣಕ್ಕಾಗಿ ಕರ್ನಾಟಕ ರಾಜ್ಯದಲ್ಲಿ ತಂದಿರುವ ಲಾಕ್ ಡೌನ್ ನಿಂದಾಗಿ ಬಡವರು, ನಿರ್ಗತಿಕರು, ಕೆಳ ಮಧ್ಯಮ ವರ್ಗದವರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ಹರಡಿರುವ ಕಾರಣಕ್ಕಾಗಿ ಕರ್ನಾಟಕ ರಾಜ್ಯದಲ್ಲಿ ತಂದಿರುವ ಲಾಕ್ ಡೌನ್ ನಿಂದಾಗಿ ಬಡವರು, ನಿರ್ಗತಿಕರು, ಕೆಳ ಮಧ್ಯಮ ವರ್ಗದವರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ) ಅಡಿ 2021ರ ಮೇ ಮತ್ತು ಜೂನ್ ತಿಂಗಳಿಗೆ ನಾಲ್ಕು ಕೋಟಿ ಟಿಪಿಡಿಎಸ್ ಕಾರ್ಡ್ ಹೊಂದಿರುವ ಸದಸ್ಯರಿಗೆ ತಿಂಗಳಿಗೆ ತಲಾ ಐದು ಕೆ.ಜಿ.ಅಕ್ಕಿ ಯನ್ನು ಉಚಿತವಾಗಿ ರಾಜ್ಯಗಳಿಗೆ ನೀಡಲಿದೆ.

ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈಗಾಗಲೇ ಉಚಿತ ಅಕ್ಕಿಯನ್ನು ಭಾರತೀಯ ಆಹಾರ ನಿಗಮದ ಗೋಡನ್ ಗಳಿಂದ ಪಡೆದುಕೊಳ್ಳುವುದನ್ನು ಆರಂಭಿಸಿದೆ.ಈಗಾಗಲೇ ಇಂದಿನವರೆಗೆ 40 ಕೋಟಿಯ 193 ಕೆ.ಜಿ. ಆಹಾರ ಧಾನ್ಯದಲ್ಲಿ 1 ಕೋಟಿ 43 ಲಕ್ಷ ಕೆ.ಜಿ. ಅಕ್ಕಿಯನ್ನು ಭಾರತೀಯ ಆಹಾರ ನಿಗಮದ  ಗೋಡನ್ ನಿಂದ ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಚಿತವಾಗಿ ಪಡೆದು ಕೊಳ್ಳಲಾರಂಭಿಸಿದೆ.

ಈ ಆಹಾರ ಧಾನ್ಯವು ಪಡಿತರ ಚೀಟಿದಾರರಿಗೆ ಮಾಮೂಲಿನಂತೆ ಪಿಡಿಎಸ್ ನಲ್ಲಿ ನೀಡುವ ಅಕ್ಕಿಯ ಜೊತೆಗೆ ಹೆಚ್ಚುವರಿಯಾಗಿ ಉಚಿತವಾಗಿ ನೀಡುವ ಆಹಾರ ಧಾನ್ಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com