ಕೋವಿಡ್-19: ಹಣಕ್ಕಾಗಿ ಮನೆಮನೆಗೆ ಮೈಕ್ರೋ ಫೈನಾನ್ಸ್ ಏಜೆಂಟರ ಭೇಟಿ, ಗ್ರಾಮೀಣ ಭಾಗದಲ್ಲಿ ಸೋಂಕು ಹರಡುವ ಭೀತಿ

2ನೇ ಅಲೆ ಗ್ರಾಮೀಣ ಭಾಗಗಳ ಮೇಲೆ ಈಗಾಗಲೇ ಗಂಭೀರ ಪರಿಣಾಮ ಬೀರುತ್ತಿದ್ದು, ಈ ನಡುವಲ್ಲೇ ಹಣಕ್ಕಾಗಿ ಮೈಕ್ರೋ ಹಾಗೂ ಖಾಸಗಿ ಫೈನಾನ್ಸ್ ಕಂಪನಿಗಳ ಎಜೆಂಟ್'ಗಳು ಹಳ್ಳಿಗಳಲ್ಲಿರುವ ಪ್ರತೀ ಮನೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಾಗುವ ಭೀತಿ ಶುರುವಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: 2ನೇ ಅಲೆ ಗ್ರಾಮೀಣ ಭಾಗಗಳ ಮೇಲೆ ಈಗಾಗಲೇ ಗಂಭೀರ ಪರಿಣಾಮ ಬೀರುತ್ತಿದ್ದು, ಈ ನಡುವಲ್ಲೇ ಹಣಕ್ಕಾಗಿ ಮೈಕ್ರೋ ಹಾಗೂ ಖಾಸಗಿ ಫೈನಾನ್ಸ್ ಕಂಪನಿಗಳ ಎಜೆಂಟ್'ಗಳು ಹಳ್ಳಿಗಳಲ್ಲಿರುವ ಪ್ರತಿ ಮನೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಾಗುವ ಭೀತಿ ಶುರುವಾಗಿದೆ. 

ಸೋಂಕು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ 14 ದಿನಗಳ ಲಾಕ್ಡೌನ್ ಘೋಷಣೆ ಮಾಡಿದ್ದು, ಪರಿಣಾಮ ಈಗಾಗಲೇ ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿರುವ ಜನರು ತಮ್ಮ ತಮ್ಮ ಗ್ರಾಮಗಳಿಗೆ ಮರಳಿದ್ದಾರೆ. ಇದು ಒಂದೆಡೆಯಾಗದರೆ ಹಣಕ್ಕಾಗಿ ಖಾಸಗಿ ಫೈನಾನ್ಸ್ ಕಂಪನಿಗಳ ಏಜೆಂಟ್ ಗಳು ಪ್ರತೀ ಹಳ್ಳಿ ಹಳ್ಳಿಗೆ, ಮನೆಗಳಿಗೆ ಭೇಟಿ ನೀಡಿ ಹಣ ಕಟ್ಟುವಂತೆ ತಿಳಿಸುತ್ತಿದ್ದಾರೆ. ಈ ಎಜೆಂಟ್ ಗಳು ಆಗಾಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಸೋಂಕು ಹರಡುವ ಆತಂಕಗಳು ಶುರುವಾಗಿದೆ. 

ಮೈಕ್ರೋ ಮತ್ತು ಖಾಸಗಿ ಫೈನಾನ್ಸ್ ಕಂಪನಿಗಳು ತಮ್ಮ ಪಿಕ್ಮಿ ಕಲೆಕ್ಟರ್ಸ್ ಗಳು ಅಥವಾ ಏಜೆಂಟರನ್ನು ನಮ್ಮ ಹಳ್ಳಿಗಳಲ್ಲಿನ ಪ್ರತೀ ಮನೆ ಬಾಗಿಲಿಗೆ ಕಳುಹಿಸುತ್ತಿದ್ದಾರೆ. ಈಗಾಗಲೇ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಾಗಿದ್ದು, ಈ ಏಜೆಂಟರುಗಳು ಆಗಾಗೆ ಭೇಟಿ ನೀಡುವುದರಿಂದ ಸೋಂಕು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳಿವೆ ಎಂದು ರಂಗಸಮುದ್ರ ಗ್ರಾಮದ ನಿವಾಸಿ ರಾಘವ ಎಂಬುವವರು ಹೇಳಿದ್ದಾರೆ. 

ಪ್ರತೀ ಏಜೆಂಟರುಗಳಿಗೆ ಹಣ ಸಂಗ್ರಹಿಸಲು 10-15 ಗ್ರಾಮಗಳ ಜವಾಬ್ದಾರಿಯನ್ನು ನೀಡಲಾಗುತ್ತಿದೆ. ಇವರು ಸೋಂಕು ಹರಡಿಸುವ ಸಾಧ್ಯತೆಗಳಿವೆ. ಹೀಗಾಗಿ ಆತಂಕಕ್ಕೊಳಗಾಗುತ್ತಿರುವ ಗ್ರಾಮಸ್ಥರು ಇದನ್ನು ನಿಲ್ಲಿಸುವಂತೆ ಪಂಚಾಯಿತಿ ಮುಖ್ಯಸ್ಥರ ಮೊರೆ ಹೋಗುತ್ತಿದ್ದಾರೆಂದು ತಿಳಿಸಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಅವರು ಗ್ರಾಮಗಳಲ್ಲಿರುವ ಕಂಟೈನ್ಮೆಂಟ್ ಜೋನ್ ಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಪರಿಶೀಲಿಸಿದರು. ಈ ವೇಲೆ ಬನ್ನಿತಾಳಪುರದ ಗ್ರಾಮಸ್ಥರು ಹಣ ಸಂಗ್ರಹಿಸಲು ಯಾವುದೇ ಏಜೆಂಟ್, ವ್ಯಕ್ತಿಗಳು ಗ್ರಾಮಗಳಿಗೆ ಬಾರದಂತೆ ಪೊಲೀಸರಿಗೆ ಸೂಚಿಸಿ ಎಂದು ಮನವಿ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. 

ಈ ನಡುವೆ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಮೈಸೂರು ಡಿಸಿ ರೋಹಿಣಿ ಸಿಂಧೂರಿಯವರು, ಲಾಕ್ಡೌನ್ ಅಂತ್ಯಗೊಳ್ಳುವವರೆಗೂ ಯಾರೂ ಹಣಕ್ಕಾಗಿ ಭೇಟಿ ನೀಡಬಾರದು ಎಂದು ಸೂಚಿಸಿದ್ದಾರೆ. 

ಏಜೆಂಟರುಗಳ ಭೇಟಿ ಕುರಿತು ನಿನ್ನೆಯಷ್ಟೇ ಅಧಿಕಾರಿಗಳಿಗೊಂದಿಗೆ ಸಭೆ ನಡೆಸಿರುವ ರೋಹಿಣಿ ಸಿಂಧೂರಿಯವರು ಎಲ್ಲಾ ಜಿಲ್ಲೆಗಳ ತಹಶೀಲ್ದಾರುಗಳಿಗೆ ಲಾಕ್ಡೌನ್ ಅಂತ್ಯಗೊಳ್ಳುವವರೆಗೂ ಯಾವುದೇ ಮೈಕ್ರೋ ಫೈನಾನ್ಸ್ ಏಜೆಂಟರುಗಳು ಹಳ್ಳಿಗಳಿಗೆ ಭೇಟಿ ನೀಡದಂತೆ ನೋಡಿಕೊಳ್ಳುವಂತೆ ಸೂಚಿಸಿದ್ದಾರೆಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com