ವಿಕಲ ಚೇತನ ಸಿಬ್ಬಂದಿಗೆ ನ್ಯಾಯಾಲಯದ ಕರ್ತವ್ಯದಿಂದ ವಿನಾಯಿತಿ: ಹೈಕೋರ್ಟ್

ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಇರುವ ಅಂಗವಿಕಲ ಮತ್ತು ಅಂಧ ನೌಕರರು ಲಾಕ್‌ಡೌನ್ ಅವಧಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವುದಕ್ಕೆ ವಿನಾಯಿತಿ ನೀಡಲಾಗಿದೆ. 
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಇರುವ ಅಂಗವಿಕಲ ಮತ್ತು ಅಂಧ ನೌಕರರು ಲಾಕ್‌ಡೌನ್ ಅವಧಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವುದಕ್ಕೆ ವಿನಾಯಿತಿ ನೀಡಲಾಗಿದೆ. 

ದೈಹಿಕ ಅಂಗವಿಕಲರು ಮತ್ತು ದೃಷ್ಟಿಹೀನ ಸಿಬ್ಬಂದಿಯನ್ನು ಸಾಂಕ್ರಾಮಿಕ ಸಮಯದಲ್ಲಿ ಕಚೇರಿಗೆ ಹಾಜರಾಗುವುದರಿಂದ  ವಿನಾಯಿತಿ ನೀಡಬೇಕೆಂದು  ರಾಜ್ಯ ವಿಕಲಚೇತನರ ಹಕ್ಕುಗಳ ಆಯೋಗ ನ್ಯಾಯಾಲಯಕ್ಕೆ ಮನವಿ ಮಾಡಿತ್ತು.

‌ಲಾಕ್‌ಡೌನ್ ಅವಧಿಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಅಂಗವಿಕಲರಿಗೆ ಮತ್ತು ಅಂಧರಿಗೆ ಕಷ್ಟವಾಗಲಿದೆ ಎಂಬ ಮನವಿ ಅಧರಿಸಿ ಮುಖ್ಯ ನ್ಯಾಯಮೂರ್ತಿ ಎಸ್.ಎಸ್. ಓಕಾ ಅವರು ಸೂಚನೆ ಮೇರೆಗೆ ಹೈಕೊರ್ಟ್‌ ರಿಜಿಸ್ಟ್ರಾರ್ ಈ ಆದೇಶ ಹೊರಡಿಸಿದ್ದಾರೆ.

ಏತನ್ಮಧ್ಯೆ, ಹೈಕೋರ್ಟ್ ಎಲ್ಲಾ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಿಗೆ  ಮೇ 15 ರಜಾದಿನವೆಂದು ಘೋಷಿಸಿದೆ.  ಈ ದಿನ ಪಟ್ಟಿ ಮಾಡಲಾದ ಪ್ರಕರಣಗಳನ್ನು ಸೋಮವಾರ ಮರು ಪಟ್ಟಿ ಮಾಡಲಾಗುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com