ಶುಲ್ಕ ವಿವಾದ: ಕರ್ನಾಟಕದ ಗ್ರಾಮೀಣ ಖಾಸಗಿ ಶಾಲೆಗಳಿಂದ ರಾಜ್ಯ ಸರ್ಕಾರಕ್ಕೆ ಪ್ರತಿಭಟನೆಯ ಎಚ್ಚರಿಕೆ

ಶುಲ್ಕದ ಕೊರತೆಯಿಂದಾಗಿ ರಾಜ್ಯದ ಗ್ರಾಮೀಣ ಖಾಸಗಿ ಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ. ಕನಿಷ್ಠ 70ರಷ್ಟು ಶಾಲಾ ಶುಲ್ಕ ಪಾವತಿಸಲು ಪೋಷಕರಿಗೆ ಆದೇಶಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಶುಲ್ಕದ ಕೊರತೆಯಿಂದಾಗಿ ರಾಜ್ಯದ ಗ್ರಾಮೀಣ ಖಾಸಗಿ ಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ. ಕನಿಷ್ಠ 70ರಷ್ಟು ಶಾಲಾ ಶುಲ್ಕ ಪಾವತಿಸಲು ಪೋಷಕರಿಗೆ ಆದೇಶಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. 

ಕರ್ನಾಟಕದ ಮಾನ್ಯತೆ ಪಡೆದ ಖಾಸಗಿ ಶಾಲೆಗಳ ಸಂಘದ (ರುಪ್ಸಾ) ರಾಜ್ಯ ಅಧ್ಯಕ್ಷ ಹಲ್ನೂರ್ ಎಸ್. ಮೇ 24ರವರೆಗೆ ಸಿಬ್ಬಂದಿ ಇಲ್ಲದೆ ಕೆಲಸ ಮಾಡುವುದು ಹೇಗೆ ಎಂದು ಕೇಳಿದರು. ಏಕೆಂದರೆ ಮೇ 24ರವರೆಗೆ ಶಾಲೆಗಳು ಬಂದ್ ಆಗಿರುತ್ತವೆ. ಇನ್ನು ಶೇಕಡಾ 10 ರಿಂದ 20 ರಷ್ಟು ಪೋಷಕರು ತಮ್ಮ ವಾರ್ಡ್‌ಗಳನ್ನು ನೋಂದಾಯಿಸಿಲ್ಲ. ಅಲ್ಲದೆ ಅವರನ್ನು ಒಂದೇ ತರಗತಿಯಲ್ಲಿ ಇರಿಸಲು ಕೇಳಿಕೊಂಡಿದ್ದಾರೆ ಎಂದರು. 'ಆದರೂ 2019-20ನೇ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳನ್ನು ಎಸ್‌ಎಟಿಎಸ್ ಸಾಫ್ಟ್‌ವೇರ್‌ನಲ್ಲಿ ನೋಂದಾಯಿಸಲು ಶಾಲೆಗಳಿಗೆ ಇಲಾಖೆ ಸೂಚಿಸಿದೆ ಎಂದರು. 

ರುಪ್ಸಾ ಮಾಜಿ ಅಧ್ಯಕ್ಷ ಲೋಕೇಶ್ ತಾಲಿಕಟ್ಟೆ ಮಾತನಾಡಿ, ಶೇಕಡಾ 70ರಷ್ಟು ಶುಲ್ಕ ಬೇಡಿಕೆಯನ್ನು ರಾಜ್ಯ ಸರ್ಕಾರವು ಕಡ್ಡಾಯಗೊಳಿಸದಿದ್ದರೆ ಶಾಲೆಗಳು ಇಲಾಖೆಯ ವಿರುದ್ಧ ಪ್ರತಿಭಟನೆಗೆ ಸಿದ್ಧವಾಗಿವೆ. ಇಲಾಖೆ ವಿದ್ಯಾರ್ಥಿಗಳನ್ನು ಎಸ್‌ಎಟಿಎಸ್‌ನಲ್ಲಿ ನೋಂದಾಯಿಸಲು ಒತ್ತಾಯಿಸಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com