ಮಂಗಳೂರು: ಕೋವಿಡ್ ರೋಗಿಗೆ ಲೈಂಗಿಕ ಕಿರುಕುಳ ನೀಡಿದ್ದ ಆಂಬ್ಯುಲೆನ್ಸ್ ಸಹಾಯಕ ಸೆರೆ

ಕೋವಿಡ್ -19 ರೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆಂಬ್ಯುಲೆನ್ಸ್ ಸಹಾಯಕರನ್ನು ಪೊಲೀಸರು ಶುಕ್ರವಾರ ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಸಧ್ಯ ಸಂತ್ರಸ್ತೆಯನ್ನು ಚಿಕಿತ್ಸೆಯ ಭಾಗವಾಗಿ ಸ್ಕ್ಯಾನಿಂಗ್ ಕೇಂದ್ರಕ್ಕೆ ಕರೆದೊಯ್ಯಲಾಯಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ಕೋವಿಡ್ -19 ರೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆಂಬ್ಯುಲೆನ್ಸ್ ಸಹಾಯಕರನ್ನು ಪೊಲೀಸರು ಶುಕ್ರವಾರ ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಸಧ್ಯ ಸಂತ್ರಸ್ತೆಯನ್ನು ಚಿಕಿತ್ಸೆಯ ಭಾಗವಾಗಿ ಸ್ಕ್ಯಾನಿಂಗ್ ಕೇಂದ್ರಕ್ಕೆ ಕರೆದೊಯ್ಯಲಾಯಿತು.

ಏಪ್ರಿಲ್ 27 ರಂದು ಈ ಘಟನೆ ನಡೆದಿದೆ ಎಂದು ಪೆರಿಂತಲಮಣ್ಣಪೊಲೀಸರು ತಿಳಿಸಿದ್ದಾರೆ ಆದರೆ ಸಂತ್ರಸ್ತೆ ಈ ಬಗ್ಗೆ ಈಗಷ್ಟೇ ವೈದ್ಯರಲ್ಲಿ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯಿಂದ ಮಾಹಿತಿ ಪಡೆದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಂತ್ರಸ್ತೆ ನ್ಯುಮೋನಿಯಾ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಂಡೂರು ಮೂಲದ ರೋಗಿಗೆ  ಆಂಬ್ಯುಲೆನ್ಸ್ ಸಹಾಯಕ ಪ್ರಶಾಂತ್ ಲೈಂಗಿಕ ಕಿರುಕುಳ ನೀಡಿದ್ದು, ಏಪ್ರಿಲ್ 27 ರಂದು ಆಂಬ್ಯುಲೆನ್ಸ್‌ನಲ್ಲಿ ಆಕೆಗೆ ಈ ಬಗೆಯಲ್ಲಿ ಕಿರುಕುಳ ನೀಡಲಾಗಿತ್ತು. ಆದರೆ ಈ ಘಟನೆ ಬಗ್ಗೆ ದೂರು ಸಲ್ಲಿಸಲು ಮಾಡಿದ ವಿಳಂಬಕ್ಕೆ ಕಾರಣವೆಂದರೆ ಸಂತ್ರಸ್ತೆ ಘಟನೆಯ ನಂತರ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೆ ಮುನ್ನ ಕೇರಳದ ತಿರುವನಂತಪುರಂ ಹಾಗೂ ಪಥನಮತ್ತಟ್ಟ ಜಿಲ್ಲೆಗಳಲ್ಲಿ ಸಹ ಇಂತಹಾ ಘಟನೆಗಳು ವರದಿಯಾಗಿದ್ದವು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com