ಟೌಕ್ಟೇ ಚಂಡಮಾರುತ: ಎಂಆರ್ ಪಿಎಲ್ ಗೆ ಕಾರ್ಗೊ ಸೇವೆ ನೀಡುತ್ತಿದ್ದ ಟಗ್ ಬೋಟ್ ನಾಪತ್ತೆ, ಒಬ್ಬ ಸಾವು, ಇಬ್ಬರ ರಕ್ಷಣೆ, 6 ಮಂದಿ ನಾಪತ್ತೆ 

ಮಂಗಳೂರು ರಿಫೈನರಿ ಅಂಡ್ ಪೆಟ್ರೊಕೆಮಿಕಲ್ ಲಿಮಿಟೆಡ್(ಎಂಆರ್ ಪಿಎಲ್)ಗೆ ಕಾರ್ಗೊ ಸೇವೆ ನೀಡುವ ಅಲೈಯನ್ಸ್ ಎನ್ನುವ ಟಗ್ ಬೋಟ್ ಟೌಕ್ಟೇ ಚಂಡಮಾರುತದ ಪರಿಣಾಮ ನಾಪತ್ತೆಯಾಗಿದ್ದು ಓರ್ವ ಮೃತಪಟ್ಟಿದ್ದಾರೆ. ಮತ್ತಿಬ್ಬರನ್ನು ರಕ್ಷಣೆ ಮಾಡಲಾಗಿದೆ ಎಂದು ಎಂಆರ್ ಪಿಎಲ್ ತಿಳಿಸಿದೆ.
ರಕ್ಷಣೆಗೊಂಡ ಇಬ್ಬರು ಕಾರ್ಮಿಕರು
ರಕ್ಷಣೆಗೊಂಡ ಇಬ್ಬರು ಕಾರ್ಮಿಕರು

ಮಂಗಳೂರು: ಮಂಗಳೂರು ರಿಫೈನರಿ ಅಂಡ್ ಪೆಟ್ರೊಕೆಮಿಕಲ್ ಲಿಮಿಟೆಡ್(ಎಂಆರ್ ಪಿಎಲ್)ಗೆ ಕಾರ್ಗೊ ಸೇವೆ ನೀಡುವ ಅಲೈಯನ್ಸ್ ಎನ್ನುವ ಟಗ್ ಬೋಟ್ ಟೌಕ್ಟೇ ಚಂಡಮಾರುತದ ಪರಿಣಾಮ ನಾಪತ್ತೆಯಾಗಿದ್ದು ಓರ್ವ ಮೃತಪಟ್ಟಿದ್ದಾರೆ. ಮತ್ತಿಬ್ಬರನ್ನು ರಕ್ಷಣೆ ಮಾಡಲಾಗಿದೆ ಎಂದು ಎಂಆರ್ ಪಿಎಲ್ ತಿಳಿಸಿದೆ.

ಅಲೈಯನ್ಸ್ ಎಂಬ ಟಗ್ ವೆಸೆಲ್ ಎಂ/ಎಸ್ ಅಂಡರ್ ವಾಟರ್ ಸರ್ವಿಸ್ ಕಂಪೆನಿ ಲಿಮಿಟೆಡ್ ಗೆ ಸೇರಿದ್ದಾಗಿದ್ದು ದೋಣಿಯಲ್ಲಿ 9 ಮಂದಿ ಕಾರ್ಮಿಕರು ಕೆಲಸಕ್ಕೆ ಸಮುದ್ರಕ್ಕೆ ಇಳಿದಿದ್ದರು. ಇಬ್ಬರನ್ನು ಕಾಪಾಡಲಾಗಿದ್ದು 6 ಮಂದಿ ಕಣ್ಮರೆಯಾಗಿದ್ದಾರೆ. ಮೊನ್ನೆ ಶುಕ್ರವಾರ ಕಾರ್ಗೊ ಕಾರ್ಯನಿರ್ವಹಣೆ ಮುಗಿದು ದೋಣಿ ಅಂದೇ ವಾಪಸ್ಸಾಗಬೇಕಾಗಿತ್ತು. ಆದರೆ ನಿನ್ನೆ ಹಿಂತಿರುಗಿ ಬರುವಾಗ ಈ ದುರ್ಘಟನೆ ನಡೆದಿದೆ ಎಂದು ಎಂಆರ್ ಪಿಎಲ್ ತಿಳಿಸಿದೆ.

ಅಲೈಯನ್ ಟಗ್ ವೆಸೆಲ್ ಎಂಆರ್ ಪಿಎಲ್ ಗೆ ಎಸ್ ಪಿಎಂ ಹತ್ತಿರ ಕಾರ್ಗೊ ಸೇವೆಗೆ ಮತ್ತು ಬಂದರು ಜೊತೆ ಸಮನ್ವಯ ಕಾರ್ಯದಲ್ಲಿ ತೊಡಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com