ಕೋವಿಡ್-19 ಒತ್ತಡ: 57 ಡಯಾಲಿಸಿಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಎರಡು ಪಾಳಿಗಳಲ್ಲಿ 3 ನರ್ಸ್ ಗಳು ಕೆಲಸ!

ಕೋವಿಡ್-19 ಎರಡನೇ ಅಲೆಯ ನಡುವೆ ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ಸಿಬ್ಬಂದಿಗಳಿಗೆ ಕೊರತೆ ಎದುರಾಗಿದೆ. 
ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಲ್ಲಿ ಡಯಾಲಿಸಿಸ್ ಚಿಕಿತ್ಸೆ
ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಲ್ಲಿ ಡಯಾಲಿಸಿಸ್ ಚಿಕಿತ್ಸೆ

ಮಡಿಕೇರಿ: ಕೋವಿಡ್-19 ಎರಡನೇ ಅಲೆಯ ನಡುವೆ ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ಸಿಬ್ಬಂದಿಗಳಿಗೆ ಕೊರತೆ ಎದುರಾಗಿದೆ. 

ಕೊಡಗು ಜಿಲ್ಲೆಗೆ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಕ ಮಾಡಬೇಕೆಂಬ ನಿರಂತರ ಮನವಿಗೂ ಸರ್ಕಾರ ಸ್ಪಂದಿಸುತ್ತಿಲ್ಲ. ಜಿಲ್ಲೆಗೆ 500 ನರ್ಸ್ ಸಿಬ್ಬಂದಿಗಳ ಅಗತ್ಯವಿದ್ದು, ಶೇ.70 ರಷ್ಟು ಹುದ್ದೆಗಳು ಖಾಲಿ ಇದೆ. ಇದರ ಒತ್ತಡ ಈಗಿರುವ ಸಿಬ್ಬಂದಿಗಳ ಮೇಲೆ ಬೀಳುತ್ತಿದ್ದು, ಹೆಚ್ಚಿನ ಸಮಯದಲ್ಲಿ, ಎರಡೆರಡು ಪಾಳಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲಿರುವ ಜಿಲ್ಲಾ ಡಯಾಲಿಸಿಸ್ ಕೇಂದ್ರ ಕೊಡಗು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಗೆ ವರ್ಗಾವಣೆಗೊಂಡಿದೆ. ನಿಯಮಿತವಾಗಿ 71 ರೋಗಿಗಳು ಈ ಕೇಂದ್ರಕ್ಕೆ ಭೇಟಿ ನೀಡಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ. ಈ ರೋಗಿಗಳಿಗೆ 8 ಮಂದಿ ಸ್ಟಾಫ್ ನರ್ಸ್ ಗಳು ಹಾಗೂ ಡಿ ಗ್ರೂಪ್ ನೌಕರರು ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಡಯಾಲಿಸಿಸ್ ಗೆ ಬರುವ ರೋಗಿಗಳು ತಮಗೆ ಕೋವಿಡ್-19 ಸೋಂಕು ಇದ್ದರೂ ಸಹ ಡಯಾಲಿಸಿಸ್ ಕೇಂದ್ರದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.

ಕಳೆದ ಒಂದು ವಾರದ ಹಿಂದೆ ಕೋವಿಡ್-19 ರೋಗಿಯೊಬ್ಬರು ಇದೇ ಕೇಂದ್ರದಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆದಿದ್ದರು. ಇದು ಕೇಂದ್ರದಲ್ಲಿರುವ ಸಿಬ್ಬಂದಿಗಳಿಗೆ ಕೋವಿಡ್-19 ಹರಡುವುದಕ್ಕೆ ಕಾರಣವಾಯಿತು. ಒಟ್ಟಾರೆ ಇರುವ 11 ಸಿಬ್ಬಂದಿಗಳ ಪೈಕಿ 5 ನರ್ಸ್ ಗಳು ಹಾಗೂ ಓರ್ವ ಡಿ ಗ್ರೂಪ್ ನೌಕರನಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಪರಿಣಾಮ ಇನ್ನು ಐದು ನರ್ಸ್ ಗಳು ಐಸೊಲೇಷನ್ ಮೊರೆ ಹೋಗಿದ್ದು, ಸಿಬ್ಬಂದಿಯ ಕೊರತೆ ಎದುರಾಗಿದೆ.

ಈಗಿನ ಪರಿಸ್ಥಿತಿಯಲ್ಲಿ ಮೂವರು ನರ್ಸ್ ಗಳು ಎರಡು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದು 57 ಮಂದಿಗೆ ಡಯಾಲಿಸ್ ಚಿಕಿತ್ಸೆ ನೀಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com