ಬ್ಲ್ಯಾಕ್ ಫಂಗಸ್ 'ಅಧಿಸೂಚಿತ ಕಾಯಿಲೆ' ಎಂದು ಘೋಷಣೆ; ಕರ್ನಾಟಕದಲ್ಲಿ ಉಚಿತ ಚಿಕಿತ್ಸೆ!

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಜೊತೆಗೆ ಭಾರೀ ಆತಂಕ ಸೃಷ್ಟಿಸಿರುವ ಬ್ಲ್ಯಾಕ್ ಫಂಗಸ್ ಕಾಯಿಲೆಗೆ ಉಚಿತವಾಗಿ ಚಿಕಿತ್ಸೆ ನೀಡುವ ಕುರಿತು ರಾಜ್ಯ ಸರ್ಕಾರ ಮಂಗಳವಾರ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ.
ಕಪ್ಪು ಫಂಗಸ್ (ಸಂಗ್ರಹ ಚಿತ್ರ)
ಕಪ್ಪು ಫಂಗಸ್ (ಸಂಗ್ರಹ ಚಿತ್ರ)

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಜೊತೆಗೆ ಭಾರೀ ಆತಂಕ ಸೃಷ್ಟಿಸಿರುವ ಬ್ಲ್ಯಾಕ್ ಫಂಗಸ್ ಕಾಯಿಲೆಗೆ ಉಚಿತವಾಗಿ ಚಿಕಿತ್ಸೆ ನೀಡುವ ಕುರಿತು ರಾಜ್ಯ ಸರ್ಕಾರ ಮಂಗಳವಾರ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ.

ಬ್ಲ್ಯಾಕ್ ಫಂಗಸ್ ಚಿಕಿತ್ಸೆ ಕುರಿತಂತೆ ವಿಕ್ಟೋರಿಯಾ ಆಸ್ಪತ್ರೆ ಇಎನ್ ಟಿ ಮುಖ್ಯಸ್ಥ ಡಾ. ಎಚ್.ಎಸ್ ಸತೀಶ್ ನೇತೃತ್ವದಲ್ಲಿ ರಚಿಸಿರುವ ತಜ್ಞರ ಸಮಿತಿಯೊಂದಿಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸೋಮವಾರ ಮಹತ್ವದ ಸಭೆ ಬಳಿಕ ಮಾತನಾಡಿದ ಅವರು, ಬ್ಲ್ಯಾಕ್ ಫಂಗಸ್ ಅನ್ನು ಅಧಿಸೂಚಿತ ಕಾಯಿಲೆ ಎಂದು ಪರಿಗಣಿಸಿದೆ. 

ಹೀಗಾಗಿ ಯಾವುದೇ ವೈದ್ಯರು ಈ ಕಾಯಿಲೆಯನ್ನು ಮುಚ್ಚಿಡುವಂತಿಲ್ಲ. ಅತಿಯಾದ ಸ್ಟೆರಾಯ್ಡ್ ಬಳಕೆಯೂ ಬ್ಲ್ಯಾಕ್ ಫಂಗಸ್‌ಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಇಲ್ಲದೆ ಸ್ಟೆರಾಯ್ಡ್ ಬಳಸುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆಯನ್ನೂ ಸರ್ಕಾರ ನೀಡಿದೆ. ಮತ್ತೊಂದೆಡೆ, ಬ್ಲ್ಯಾಕ್ ಫಂಗಸ್ (ಕಪ್ಪು  ಶಿಲೀಂಧ್ರ) ಚಿಕಿತ್ಸೆಗಾಗಿ ಮಂಗಳವಾರದಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಪ್ರಧಾನ ಚಿಕಿತ್ಸಾ ಘಟಕ ಹಾಗೂ ಗುರುವಾರದಿಂದ ರಾಜ್ಯಾದ್ಯಂತ ಆರು ಕಡೆ ಪ್ರಾದೇಶಿಕ ಚಿಕಿತ್ಸಾ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ ಎಂದೂ ಪ್ರಕಟಿಸಿದೆ. ಅತಿಯಾದ ಸ್ಟೆರಾಯ್ಡ್ ಬಳಕೆಯೂ ಬ್ಲ್ಯಾಕ್ ಫಂಗಸ್ ಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಇಲ್ಲದೆ ಸ್ಟೆರಾಯ್ಡ್ ಬಳಸುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆಯನ್ನು ಸರ್ಕಾರ ನೀಡಿದೆ ಎಂಜು ತಿಳಿದುಬಂದಿದೆ.

ಬೆಂಗಳೂರಿನ ಬೌರಿಂಗ್ ಆಸ್ಪತ್ರೆ, ಮೈಸೂರು ವೈದ್ಯಕೀಯ ಕಾಲೇಜು, ಶಿವಮೊಗ್ಗ ವೈದ್ಯಕೀಯ ಕಾಲೇಜು, ಮಣಿಪಾಲ, ಮಂಗಳೂರಿನ ವೆನ್ ಲಾಕ್ ಕಲಬುರಗಿಯ ಜಿಮ್ಸ್, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಸಚಿವ ಕೆ ಸುಧಾಕರ್ ತಿಳಿಸಿದ್ದಾರೆ.

ಉಚಿತ ಚಿಕಿತ್ಸೆ
ಕೊರೋನಾಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಬ್ಲ್ಯಾಕ್ ಫಂಗಸ್ ಕೋವಿಡ್ ನಂತರದ ರೋಗ ಆಗಿರುವುದರಿಂದ ಇದಕ್ಕೂ ಉಚಿತ ಚಿಕಿತ್ಸೆ ನೀಡುವ ಕುರಿತು ಚರ್ಚಿಸಲಾಗುವುದು ಎಂದು ಸುಧಾಕರ್ ಮಾಹಿತಿ ನೀಡಿರು. ಬ್ಲ್ಯಾಕ್ ಫಂಗಸ್‌ಗೆ ಆಂಫೊಟೆರಿಸಿನ್ ಔಷಧಿ ನೀಡುತ್ತಿದ್ದು, ಒಬ್ಬ ರೋಗಿಗೆ 40-60 ವಯಲ್‌ಗಳು ಬೇಕಾಗುತ್ತವೆ. ಕೇಂದ್ರ ಸರ್ಕಾರ ರಾಜ್ಯಕ್ಕೆ 1050 ವಯಲ್‌ಗಳ ಮಂಜೂರಾತಿ ನೀಡಿದ್ದು, 450 ವಯಲ್ ಬಂದಿವೆ. ಇದಲ್ಲದೆ, ರಾಜ್ಯ ಸರ್ಕಾರ ಇನ್ನೂ 20 ಸಾವಿರ ವಯಲ್‌ಗಳಿಗೆ ಖಾಸಗಿಯಾಗಿ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇಎನ್‌ಟಿ ತಜ್ಞರ ಪರಿಶೀಲನೆ ಬಳಿಕವೇ ಡಿಸ್ಚಾರ್ಜ್
ಬ್ಲ್ಯಾಕ್ ಫಂಗಸ್ ಮುಖ್ಯವಾಗಿ ಮೂಗು, ಬಾಯಿ, ಕಣ್ಣಿಗೆ ಸಂಬಂಧಿಸಿದ ಸೋಂಕು. ಶಿಲೀಂಧ್ರ ಸೋಂಕು ಉಂಟಾದ ತಕ್ಷಣ ಮೂಗಿನಲ್ಲಿ ಲಕ್ಷಣಗಳು ಕಂಡು ಬರುತ್ತವೆ. ಇದು ಅನಿಯಂತ್ರಿತ ಮಧುಮೇಹ, ದೀರ್ಘಕಾಲ ವೆಂಟಿಲೇಟರ್‌ನಲ್ಲಿದ್ದವರು, ಸ್ಟಿರಾಯ್‌ ಹೆಚ್ಚಾಗಿ ಬಳಸಿದವರು, ರೋಗನಿರೋಧಕ ಶಕ್ತಿ ಇಲ್ಲದವರಲ್ಲಿ  ಕಂಡು ಬರುತ್ತದೆ. ಕ್ಯಾನ್ಸರ್, ಎಚ್‌ಐವಿ, ಅಂಗಾಂಗ ಕಸಿಗೆ ಒಳಗಾದವರಲ್ಲಿ ಮಧುಮೇಹ ನಿಯಂತ್ರಣ ಕಳೆದುಕೊಂಡು ಸೋಂಕು ಉಂಟಾಗಬಹುದು. ಹಾಗಂತ ಇಂತಹವರೆಲ್ಲರಿಗೂ ಕಡ್ಡಾಯವಾಗಿ ಬರುವುದೂ ಇಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಈ ಲಕ್ಷಣಗಳಿರುವ ಸೋಂಕಿತರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವಾಗ ಇಎನ್‌ಟಿ ತಜ್ಞರ ಪರಿಶೀಲನೆಯ ಬಳಿಕವೇ ಬಿಡುಗಡೆ ಮಾಡಬೇಕು ಎಂದು ಡಾ.ಕೆ. ಸುಧಾಕರ್ ಸೂಚನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com