ರೆಮ್ಡಿಸಿವಿರ್ ಅಕ್ರಮ ಮಾರಾಟ: ಕೋಲಾರ ಪೊಲೀಸರಿಂದ ಆರು ಮಂದಿ ಬಂಧನ

ಅಕ್ರಮವಾಗಿ ರೆಮ್ಡಿಸಿವಿರ್ ಔಷಧಿ ಮಾರಾಟ ಮಾಡುತ್ತಿದ್ದ ಆರು ಮಂದಿಯನ್ನು ಕೋಲಾರ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲಾರ: ಅಕ್ರಮವಾಗಿ ರೆಮ್ಡಿಸಿವಿರ್ ಔಷಧಿ ಮಾರಾಟ ಮಾಡುತ್ತಿದ್ದ ಆರು ಮಂದಿಯನ್ನು ಕೋಲಾರ ಪೊಲೀಸರು ಬಂಧಿಸಿದ್ದಾರೆ.

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಮಂದಿಯನ್ನು ಬಂಧಿಸಿ, ಔಷಧಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೋಲಾರ ಎಸ್ ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.

ಬಂಧಿತರಲ್ಲಿ ಲ್ಯಾಬ್ ಟೆಕ್ನಿಷಿಯನ್, ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ನರ್ಸಿಂಗ್ ಅಧೀಕ್ಷಕ, ಮತ್ತು ಔಷಧಿ ಮಾರಾಟಗಾರರು ಸೇರಿದ್ದಾರೆ. ರೆಮ್ಡೆಸಿವಿರ್ ಚುಚ್ಚುಮದ್ದನ್ನು ಪ್ರಿಸ್ಕ್ರಿಪ್ಷನ್ ಇಲ್ಲದೆ ನಗರದಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಸುಳಿವಿನ ಮೇರೆಗೆ ತಂಡವನ್ನು ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ನಾರಾಯಣಸ್ವಾಮಿ, ಹೆಚ್ಚುವರಿ ಎಸ್‌ಪಿ, ಸಾಹಿಲ್ ಬಾಗ್ಲಾ, ಸಹಾಯಕ ಎಸ್‌ಪಿ, ಕೆ.ಸಿ.ಗಿರಿ, ಡಿವೈಎಸ್ ಪಿ ರಂಗಸಾಮಯ್ಯ, ಇನ್ಸ್‌ಪೆಕ್ಟರ್ ತಂಡವನ್ನು ಒಳಗೊಂಡಂತೆ ಸೈಬರ್ ಅಪರಾಧ ಪೊಲೀಸರು ವಿವಿಧ ಆಯಾಮಾಗಳಲ್ಲಿ ತನಿಖೆ ನಡೆಸಿದ್ದಾರೆ, ಮೊಬೈಲ್ ಸಂಖ್ಯೆಗಳು ಮತ್ತು ಚಲನವಲನಳನ್ನು ಆಧರಿಸಿ ಟ್ರ್ಯಾಕ್ ಮಾಡಲಾಗಿದೆ.

ಆರೋಪಿಗಳನ್ನು ಶಿವ ಕುಮಾರ್, ಲ್ಯಾಬ್ ತಂತ್ರಜ್ಞ, ನಾಗರಾಜ್, ನರ್ಸಿಂಗ್  ಕಾಲೇಜು ಮೇಲ್ವಿಚಾರಕ  ಮಹೇಶ್ ಎಂದು ಗುರುತಿಸಲಾಗಿದೆ. ಅವರಿಂದ ರೆಮ್‌ಡೆಸಿವಿರ್‌ನ ನಾಲ್ಕು ಬಾಟಲುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ, ಇದೇ ಪೊಲೀಸರ ತಂಡವು ಖಾಸಗಿ ವೈದ್ಯಕೀಯ ಕಾಲೇಜಿನ ಫಾರ್ಮಸಿ ಅಸಿಸ್ಟೆಂಟ್ ನಾಗೇಶ್, ನವೀನ್, ಸಂದೀಪ್ ಮತ್ತು ದರ್ಶನ್ ಅವರನ್ನು ಬಂಧಿಸಿ ರೆಮ್ಡೆಸಿವಿರ್ ಔಷದಿಯ ಎರಡು ಬಾಟಲುಗಳನ್ನು ವಶಪಡಿಸಿಕೊಂಡಿದೆ. ಔಷಧಿಯನ್ನು 40 ಸಾವಿರ ರೂ ಗೆ ಮಾರಾಟ ಮಾಡುತ್ತಿದ್ದರು. ಈ ಅಕ್ರಮ ಮಾರಾಟದ ಹಿಂದೆ ಯಾರ್ಯಾರ ಕೈವಾಡವಿದೆ ಎಂಬುದನ್ನು ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com