ಅಕ್ರಮವಾಗಿ ರೆಮಿಡಿಸಿವಿರ್ ಮಾರಾಟ: ಬೆಂಗಳೂರಿನಲ್ಲಿ ಸ್ಟಾಫ್ ನರ್ಸ್ ಬಂಧನ

ನಗರದಲ್ಲಿ ಅಕ್ರಮವಾಗಿ ರೆಮಿಡಿಸಿವಿರ್ ಮಾರಾಟ ಮಾಡುತ್ತಿದ್ದ ಮತ್ತೋರ್ವ ಆರೋಪಿಯನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮನು (26) ಬಂಧಿತ ಆರೋಪಿ.
ರೆಮಿಡಿಸಿವಿರ್
ರೆಮಿಡಿಸಿವಿರ್

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ರೆಮಿಡಿಸಿವಿರ್ ಮಾರಾಟ ಮಾಡುತ್ತಿದ್ದ ಮತ್ತೋರ್ವ ಆರೋಪಿಯನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮನು (26) ಬಂಧಿತ ಆರೋಪಿ. ಬಂಧಿತನಿಂದ ಒಟ್ಟು 13 ರೆಮಿಡಿಸಿವಿರ್ ಔಷಧಿ ಬಾಟಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ನಗರದ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ, ಐಸಿಯು ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಕೊಡುವ ರೆಮಿಡಿಸಿವಿರ್ ಒಂದು ಡೋಸ್ ಗೆ 25 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. 

ರೋಗಿಗೆ 2 ಡೋಸ್​ ಕೊಡುವ ಬದಲಿಗೆ 1 ಡೋಸ್ ಮಾತ್ರ ನೀಡಿ ಉಳಿದಿದ್ದನ್ನು ಬೇರೆಯವರಿಗೆ ಮಾರಾಟ ಮಾಡ್ತಿದ್ದ ಎನ್ನಲಾಗಿದೆ.
ಈ ಕುರಿತು ಪೊಲೀಸರು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.

ಇಂದು ನಗರದ ಪ್ರಖ್ಯಾತ​​ ಖಾಸಗಿ ಆಸ್ಪತ್ರೆ ಬಳಿ ಮಾರಾಟ ಮಾಡುತ್ತಿದ್ದ ವೇಳೆ ರೆಡ್​ಹ್ಯಾಂಡ್​ ಆಗಿ ಪೊಲೀಸರಿಗೆ ಸೆರೆಸಿಕ್ಕಿದ್ದಾನೆ.
ಸದ್ಯ ಆರೋಪಿಯನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com