ಕೇರಳದ ಪಿಣರಾಯಿ ಸರ್ಕಾರದಿಂದ 'ಬಾಕಿ ವಸೂಲಿ'ಗಾಗಿ ಕಾಯುತ್ತಿರುವ ಮೈಸೂರು ರೈತರು!

ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಮತ್ತೆ ಕೇರಳದಲ್ಲಿ ಅಧಿಕಾರಕ್ಕೆ ಬರುತ್ತಿದ್ದು, ಕೆಲ ರೈತರು ಸರ್ಕಾರ ಪ್ರಮಾಣ ವಚನ ಸ್ವೀಕರಿಸುವುದನ್ನು ಕಾಯುತ್ತಿದ್ದಾರೆ.
ಪಿಣರಾಯಿ ವಿಜಯನ್
ಪಿಣರಾಯಿ ವಿಜಯನ್

ಮೈಸೂರು: ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಮತ್ತೆ ಕೇರಳದಲ್ಲಿ ಅಧಿಕಾರಕ್ಕೆ ಬರುತ್ತಿದ್ದು, ಕೆಲ ರೈತರು ಸರ್ಕಾರ ಪ್ರಮಾಣ ವಚನ ಸ್ವೀಕರಿಸುವುದನ್ನು ಕಾಯುತ್ತಿದ್ದಾರೆ.

ಪ್ರವಾಹ, ಲಾಕ್ ಡೌನ್ ಸೇರಿದಂತೆ ಹಲವು ಕಷ್ಟದ ಸಮಯದಲ್ಲಿ ಮೈಸೂರು ಭಾಗದ ಕೆಲ ರೈತರು ನೇರವಾಗಿ ಕೇರಳಕ್ಕೆ ಹಣ್ಣು ತರಕಾರಿ ಸರಬರಾಜು ಮಾಡಿದ್ದರು. ಆದರೆ ಕಳೆದ ಡಿಸೆಂಬರ್ ನಿಂದ ಇದುವರೆಗೂ 54.23 ಲಕ್ಷ ರು. ಹಣವನ್ನು ಸರ್ಕಾರ ರೈತರಿಗೆ ಪಾವತಿ ಮಾಡಿಲ್ಲ,

ಮೈಸೂರಿನ 1,200 ರೈತರು ರೈತಮಿತ್ರ ಕಂಪನಿ ಮೂಲಕ ತಮ್ಮ ಉತ್ಪನ್ನಗಳನ್ನು ಕೇರಳ ರಾಜ್ಯ ತೋಟಗಾರಿಕಾ ಉತ್ಪನ್ನಗಳ ಅಭಿವೃದ್ಧಿ ನಿಗಮಕ್ಕೆ ಸಾಗಣೆ ಮಾಡಿದ್ದರು. 

ತರಕಾರಿಗಳ ನಿರಂತರ ಪೂರೈಕೆಗಾಗಿ ನಾವು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಕಳೆದ ವರ್ಷ ಲಾಕ್‌ಡೌನ್ ಸಮಯದಲ್ಲಿ ತರಕಾರಿಗಳನ್ನು ಸಾಗಿಸಲು ಸಾಗಣೆಗಾಗಿ ಸಾಮಾನ್ಯ ಮೊತ್ತಕ್ಕಿಂತ ದುಪ್ಪಟ್ಟು ಪಾವತಿಸಿದ್ದೇವೆ.

ಪ್ರವಾಹದ ಸಮಯದಲ್ಲಿ, ನಾವು ತರಕಾರಿನ್ನು ಕೊಯಮತ್ತೂರು ಮೂಲಕ ರವಾನಿಸಿದ್ದೇವೆ ಮತ್ತು ಅವರು ತಲುಪುವಂತೆ ನೋಡಿಕೊಂಡಿದ್ದೇವೆ ”ಎಂದು ಎಫ್‌ಪಿಒ ಮುಖ್ಯಸ್ಥರಾಗಿರುವ ರೈತ ಮುಖಂಡ ಕುರುಬೂರ್ ಶಾಂತಕುಮಾರ್ ಹೇಳಿದ್ದಾರೆ.

ಪ್ರವಾಹದ ಸಮಯದಲ್ಲಿ, ಅವರು ಎಲ್ಲಾ ಸದಸ್ಯ ರೈತರಿಂದ 5 ಲಕ್ಷ ರೂ.ಗಳನ್ನು ಸಂಗ್ರಹಿಸಿದರು ಮತ್ತು ಕೇರಳ ಸಿಎಂನ ಪರಿಹಾರ ನಿಧಿಗೆ ದೇಣಿಗೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com