ಬೆಳಗಾವಿಯಲ್ಲಿ 20 ಮಕ್ಕಳ ಮೇಲೆ ಝೈಕೋವ್-ಡಿ ಕೊರೋನಾ ಲಸಿಕೆ ಪ್ರಯೋಗ ಯಶಸ್ವಿ

ಬೆಳಗಾವಿಯಲ್ಲಿ 12 ರಿಂದ 18 ವರ್ಷದೊಳಗಿನ 20 ಮಕ್ಕಳ ಮೇಲೆ ಜೀವನ್ ರೇಖಾ ಆಸ್ಪತ್ರೆಯಲ್ಲಿ ಜೈಡಸ್ ಕ್ಯಾಡಿಲಾ ಕಂಪನಿ ಅಭಿವೃದ್ಧಿಪಡಿಸಿರುವ ಝೈಕೋವ್-ಡಿ ಕೊರೋನಾ ಲಸಿಕೆ ಪ್ರಯೋಗ ನಡೆಸಲಾಯಿತು. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಬೆಳಗಾವಿಯಲ್ಲಿ 12 ರಿಂದ 18 ವರ್ಷದೊಳಗಿನ 20 ಮಕ್ಕಳ ಮೇಲೆ ಜೀವನ್ ರೇಖಾ ಆಸ್ಪತ್ರೆಯಲ್ಲಿ ಜೈಡಸ್ ಕ್ಯಾಡಿಲಾ ಕಂಪನಿ ಅಭಿವೃದ್ಧಿಪಡಿಸಿರುವ ಝೈಕೋವ್-ಡಿ ಕೊರೋನಾ ಲಸಿಕೆ ಪ್ರಯೋಗ ನಡೆಸಲಾಯಿತು. 

20 ಮಕ್ಕಳ ಮೇಲೆ ನಡೆಸಲಾದ ಪ್ರಯೋಗ ಯಶಸ್ವಿಯಾಗಿದೆ. ಲಸಿಕೆ ಪಡೆದ ಎರಡು ತಿಂಗಳ ನಂತರ ಇದೀಗ ಕ್ಲಿನಿಕಲ್ ಪರೀಕ್ಷೆ ನಡೆಸಲಾಗಿದ್ದು ಯಾವುದೇ ಮಕ್ಕಳು ಮೇಲೆ ಅಡ್ಡಪರಿಣಾಮಗಳು ಅಥವಾ ಇತರ ಆರೋಗ್ಯ ಸಮಸ್ಯೆಗಳು ಎದುರಾಗಿಲ್ಲ ಎಂದು ಜೀವನ್ ರೇಖಾ ಆಸ್ಪತ್ರೆಯ ನಿರ್ದೇಶಕ ಡಾ.ಅಮಿತ್ ಭಾಟೆ ಹೇಳಿದ್ದಾರೆ.

ಕಳೆದ ವರ್ಷ ಕೋವಾಕ್ಸಿನ್‌ನ ಕ್ಲಿನಿಕಲ್ ಪ್ರಯೋಗಗಳು ಯಶಸ್ವಿಯಾಗಿ ನಡೆದ ದೇಶದ 12 ಕೇಂದ್ರಗಳಲ್ಲಿ ಈ ಆಸ್ಪತ್ರೆ ಕೂಡ ಒಂದಾಗಿತ್ತು. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಡಾ. ಭಾಟೆ, ತಮ್ಮ ಆಸ್ಪತ್ರೆಯ ವೈದ್ಯರು ಕಳೆದ 20 ತಿಂಗಳಿನಿಂದ ಎಲ್ಲಾ 20 ಮಕ್ಕಳ ಸ್ಥಿತಿಯ ಬಗ್ಗೆ ನಿಯಮಿತವಾಗಿ ಗಮನ ಹರಿಸಿದ್ದು ಅವರೆಲ್ಲ ಆರೋಗ್ಯವಾಗಿದ್ದಾರೆ ಎಂದು ಕಂಡುಬಂದಿರುವುದಾಗಿ ತಿಳಿಸಿದ್ದಾರೆ. 

ಕ್ಲಿನಿಕಲ್ ಪ್ರಯೋಗಗಳಲ್ಲಿ ಎಲ್ಲಾ ಮಕ್ಕಳಿಗೆ ತಲಾ ಮೂರು ಝೈಕೋವ್-ಡಿ ಪ್ರಮಾಣವನ್ನು ನೀಡಲಾಯಿತು. ಈ ಕ್ಲಿನಿಕಲ್ ಪರೀಕ್ಷೆಗಾಗಿ ತಮ್ಮ ಮಕ್ಕಳನ್ನು ಪೋಷಕರು ಸ್ವಯಂಪ್ರೇರಣೆಯಿಂದ ಕರೆತಂದಿದ್ದರು. ಎಲ್ಲಾ 20 ಮಕ್ಕಳ ಪೋಷಕರ ಆಡಿಯೋ ಮತ್ತು ವಿಡಿಯೋ ಒಪ್ಪಿಗೆ ತೆಗೆದುಕೊಂಡ ನಂತರವಷ್ಟೇ ಲಸಿಕೆ ಪ್ರಯೋಗ ಮಾಡಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ. 

ಎಲ್ಲಾ ಮಕ್ಕಳು ಪ್ರಯೋಗಗಳಿಗೆ ಉತ್ತಮವಾಗಿ ಸ್ಪಂದಿಸಿದ್ದು ನಮಗೆ ಸಂತೋಷವಾಗಿದೆ ಮತ್ತು ಸಂತಸವಾಗಿದೆ ಎಂದು ಡಾ ಭಾಟೆ ಹೇಳಿದರು. ಎಲ್ಲಾ ಮಕ್ಕಳಲ್ಲಿ ರಕ್ತದ ಮಾದರಿಗಳು ಮತ್ತು ಪ್ರತಿಕಾಯಗಳನ್ನು ಮುಂದಿನ 12 ತಿಂಗಳುಗಳವರೆಗೆ ನಿಯಮಿತವಾಗಿ ಪರೀಕ್ಷಿಸಲಾಗುವುದು. ಇದುವರೆಗಿನ ಕ್ಲಿನಿಕಲ್ ಪ್ರಯೋಗಗಳ ಯಶಸ್ಸನ್ನು ಗಮನಿಸಿದರೆ, ದೇಶಾದ್ಯಂತ 30 ಕೇಂದ್ರಗಳಲ್ಲಿ ನಡೆಯುತ್ತಿರುವ ಮಕ್ಕಳ ಮೇಲೆ ಝೈಕೋವ್-ಡಿ ಕ್ಲಿನಿಕಲ್ ಪ್ರಯೋಗಗಳು ಸಹ ಯಶಸ್ವಿಯಾಗುತ್ತವೆ ಎಂದು ಡಾ. ಭಾಟೆ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com