ಬೆಂಗಳೂರು: ಕೋವಿಡ್​ ಟೆಸ್ಟ್​ ನಕಲಿ ವರದಿ ನೀಡುತ್ತಿದ್ದ ವೈದ್ಯ ದಂಪತಿ ಸೇರಿ 6 ಮಂದಿ ಬಂಧನ

ಹಣ ಪಡೆದು ಕೋವಿಡ್ ಟೆಸ್ಟ್ ನಕಲಿ ವರದಿ ನೀಡುತ್ತಿದ್ದ ವೈದ್ಯ ದಂಪತಿ ಸೇರಿ ಆರು ಜನರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ‌.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹಣ ಪಡೆದು ಕೋವಿಡ್ ಟೆಸ್ಟ್ ನಕಲಿ ವರದಿ ನೀಡುತ್ತಿದ್ದ ವೈದ್ಯ ದಂಪತಿ ಸೇರಿ ಆರು ಜನರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ‌.

ಆಯುರ್ವೇದ ವೈದ್ಯೆ ಪ್ರಜ್ವಲ ದಂಪತಿ, ಡಾಟಾ ಆಪರೇಟರ್ ವರುಣ್, ಸ್ವ್ಯಾಬ್ ಕಲೆಕ್ಟರ್ ಈಶ್ವರ್, ಮೋಹನ್ ಹಾಗೂ ದಂತವೈದ್ಯ ಶೇಖರ್​ ಬಂಧಿತ ಆರೋಪಿಗಳು.

ಬಂಧಿತರು ಚಾಮರಾಜಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ವೈದ್ಯರಾಗಿ ಹಾಗೂ ಸಿಬ್ಬಂದಿಯಾಗಿ ಕೋವಿಡ್ ಕೆಲಸದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಬರುತ್ತಿದ್ದ ಜನರಿಂದ ಹಣ ಪಡೆದು ನಕಲಿ ವರದಿ ನೀಡುತ್ತಿದ್ದರು. ಅಲ್ಲದೇ, ರೆಮ್​​ಡಿಸಿವಿರ್ ಅಕ್ರಮ ಜಾಲದಲ್ಲಿಯೂ ತೊಡಗಿಸಿಕೊಂಡಿದ್ದರು ಎನ್ನಲಾಗುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೈದ್ಯರು ಹಾಗೂ ಮೂವರು ವೈದ್ಯಕೀಯ ಸಿಬ್ಬಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com