ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಕಲಿ ರೆಮ್​ಡಿಸಿವರ್​ ತಯಾರು, ಮಾರಾಟ ಆರೋಪ; ವೈದ್ಯನ ಬಂಧನ

ನಕಲಿ ರೆಮ್ ಡಿಸಿವಿರ್ ಔಷಧವನ್ನು ತಯಾರು ಮಾಡಿ ಮಾರಾಟ ಮಾಡುತ್ತಿದ್ದ ಆರೋಪದಡಿ ವೈದ್ಯನೋರ್ವನನ್ನುಕೆ. ಜಿ. ಹಳ್ಳಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬೆಂಗಳೂರು: ನಕಲಿ ರೆಮ್ ಡಿಸಿವಿರ್ ಔಷಧವನ್ನು ತಯಾರು ಮಾಡಿ ಮಾರಾಟ ಮಾಡುತ್ತಿದ್ದ ಆರೋಪದಡಿ ವೈದ್ಯನೋರ್ವನನ್ನುಕೆ. ಜಿ. ಹಳ್ಳಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಅಜಯ್​​ ಕುಮಾರ್ ಯಾದವ್​ ಬಂಧಿತ ವೈದ್ಯ. ಬಂಧಿತನಿಂದ ಪೊಲೀಸರು 8 ನಕಲಿ ರೆಮ್ ಡಿಸಿವಿರ್ ಔಷಧಿಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ಬಾಗಲೂರು ಬಳಿ ಕ್ಲಿನಿಕ್ ಹೊಂದಿದ್ದು, ಜೊತೆಗೆ ಎರಡು ಆಸ್ಪತ್ರೆಗಳಿಗೆ ವಿಸಿಟಿಂಗ್ ಡಾಕ್ಟರ್ ಆಗಿ ಭೇಟಿ ನೀಡುತ್ತಿದ್ದ ಎನ್ನಲಾಗಿದೆ.

ಖಚಿತ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ರೆಮ್​ಡಿಸಿವಿರ್ ಬದಲಿಗೆ ಬೇರೊಂದು ಆಂಟಿಬಯೋಟಿಕ್ ಔಷಧವನ್ನು ಹಾಕಿ ಬಳಿಕ ಸೀಲ್ ಮಾಡಿ ಹೊಸ ರೆಮ್​ಡಿಸಿವಿರ್ ಎಂದು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಆರೋಪಿ ಒಂದು ರೆಮ್​ಡಿಸಿವಿರ್​ ಅನ್ನು 30 ಸಾವಿರ ರೂಪಾಯಿಯಂತೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com