ಕೋವಿಡ್ ಗೆ ಸೆಡ್ಡು ಹೊಡೆದ ಕ್ಯಾನ್ಸರ್ ರೋಗಿ: ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ಅತಿಮುಖ್ಯ!

ಕ್ಯಾನ್ಸರ್ ನಿಂದ ಗುಣಮುಖವಾಗುವುದೇ ಕಷ್ಟ, ಹೀಗಿರುವಾಗ ಕೋವಿಡ್ ಬಂದರೆ ಇನ್ನೇನು ಗತಿ, ನಗರದ ಕುಟುಂಬವೊಂದು ಕೋವಿಡ್ ಗೆ ಸೆಡ್ಡುಹೊಡೆದಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕ್ಯಾನ್ಸರ್ ನಿಂದ ಗುಣಮುಖವಾಗುವುದೇ ಕಷ್ಟ, ಹೀಗಿರುವಾಗ ಕೋವಿಡ್ ಬಂದರೆ ಇನ್ನೇನು ಗತಿ, ನಗರದ ಕುಟುಂಬವೊಂದು ಕೋವಿಡ್ ಗೆ ಸೆಡ್ಡುಹೊಡೆದಿದ್ದಾರೆ.

ಬಿಂದು ಎಂಬುವರ ಕುಟುಂಬಕ್ಕೆ ಕೊರೋನಾ ಸೋಂಕು ಇರುವುದು ಏಪ್ರಿಲ್ 20 ರಂದು ತಿಳಿಯಿತು. ಕೋರೊನಾ ಗೆದ್ದ ನಂತರ ಅವರು ಎಲ್ಲರಿಗೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.

ತಾವು ಗುಣಮುಖವಾಗಲು ಸಹಾಯ ಮಾಡಿದ ಎಲ್ಲರಿಗೂ ಬಿಂದು ಧನ್ಯವಾದ ಹೇಳಿದ್ದಾರೆ, ಏಪ್ರಿಲ್ 17 ರಂದು 80 ವರ್ಷದ ನಮ್ಮ ತಂದೆಗೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡವು. ಏಪ್ರಿಲ್ 19 ರಂದು ನನಗೆ ಕೆಮ್ಮು ಬಂತು, ನಂತರ ನನ್ನ ತಾಯಿ ಮತ್ತು ಸಹೋದರ ಕೂಡ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ನಿರ್ಧರಿಸಿದೆವು ಎಂದು ಹೇಳಿದ್ದಾರೆ.

ಮಧ್ಯಾಹ್ನ ನಾವು ಟೆಸ್ಟ್ ಮಾಡಿಸಿಕೊಳ್ಳಲು ಲ್ಯಾಬ್ ಗೆ ಹೋದೆವು, ಆದರೆ ಜನ ತುಂಬಾ ಇದ್ದ ಕಾರಣ ಸಂಜೆ ಬರಲು ಅವರು ತಿಳಿಸಿದರು. ಮನೆಗೆ ತೆರಳಿದ ನಂತರ ವಯಸ್ಸಿನ ಹಿನ್ನೆಲೆಯಲ್ಲಿ ಅವರು ಮತ್ತೆ ಲ್ಯಾಬ್ ಗೆ ಬರಲು ನಿರಾಕರಿಸಿದರು, ಹೀಗಾಗಿ ನಾವು ಮನೆಯಲ್ಲಿ ಯೇ ಆರ್ ಟಿ ಪಿಸಿಆರ್ ಪರೀಕ್ಷೆ ಮಾಡಿಕೊಂಡೆವು. ಏಪ್ರಿಲ್ 23 ಮತ್ತು 24 ರಂದು ವರದಿ ಬಂತು, ಎಲ್ಲರಿಗೂ ಕೋವಿಡ್ ಪಾಸಿಟಿವ್ ಇತ್ತು.

ಮಧ್ಯಾಹ್ನ 12 ಗಂಟೆ ವೇಳೆಗೆ ನಮ್ಮ ತಂದೆಗೆ ಬಿಯು ನಂಬರ್ ಬಂತು, ಬಿಬಿಎಂಪಿ ಸೇರಿದಂತೆ ಹಲವರಿಂದ ನಮಗೆ ಕರೆ ಬಂತು, ಪ್ರತಿಯೊಬ್ಬರು ಪದೇ ಪದೇ ಅದೆ ಪ್ರಶ್ನೆಗಳನ್ನು ಕೇಳಿದರು.ಏಪ್ರಿಲ್ 24 ರಂದು  ನನ್ನ ತಂದೆಯ ಆಮ್ಲಜನಕ ಪ್ರಮಾಣ ಕಡಿಮೆಯಾಗಿತ್ತು.

ಬಿಬಿಎಂಪಿ ಸಹಾಯದೊಂದಿಗೆ ವೈದ್ಯರನ್ನು ಸಂಪರ್ಕಿಸಿದೆವು ಅವರು ಪ್ಯಾರಾಸಿಟಮಲ್  ಮಾತ್ರೆ ತೆಗಗೆದುಕೊಳ್ಳುವಂತೆ ಸಲಹೆ ನೀಡಿದರು. ಸಿಟಿ ಸ್ಕ್ಯಾನ್ ನಲ್ಲಿ ನ್ಯುಮೋನಿಯಾ ಇರುವುದು ಪತ್ತೆಯಾಯಿತು. ಹೀಗಾಗಿ ನಾವು ಆಸ್ಪತ್ರೆಗೆ ಹೋಗದೇ ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ನಿರ್ಧರಿಸಿದೆವು,  ಆದರೆ ಆಕ್ಸಿಜನ್ ವ್ಯವಸ್ಥೆ ಮಾಡಬೇಕಿತ್ತು. ಅಚ್ಚರಿ ಎಂಬಂತೆ ನನ್ನ ಸಹೋದರನಿಗೆ ಪರಿಚಯಸ್ಥರು ನನಗೆ ಸಹಾಯ ಮಾಡಿದರು ಎಂದು ಮತ್ತಿಕೆರೆ ನಿವಾಸಿ ಬಿಂದು ತಿಳಿಸಿದ್ದಾರೆ. 

ಟೆಲಿ ಕಾಲರ್ಸ್ ಮತ್ತು ವೈದ್ಯರ ಸಲಹೆ ಮೇರೆಗೆ ಬಿಂದು ಅವರು 40 ಲೀಟರ್ ಮತ್ತು 10 ಲೀಟರ್ ನ ಆಕ್ಸಿಜನ್ ಟ್ಯಾಂಕ್ ಅನ್ನು 40 ಸಾವಿರ ರು ನೀಡಿ ಖರೀದಿಸಿದರು.

ಆದರೆ ಅದನ್ನು ಹೇಗೆ ಬಳಸಬೇಕು ಎಂಬುದು ಕುಟುಂಬಸ್ಥರಿಗೆ ತಿಳಿದಿರಲಿಲ್ಲ, ಆಂಬುಲೆನ್ಸ್ ಚಾಲಕ ಮತ್ತು ಆಸ್ಪತ್ರೆಯ ಅಟೆಂಡೆಂಟ್ ಒಬ್ಬರಿಂದ ತಮಗೆ ಸಹಾಯವಾಯಿತು. ತಾವು ಸಂಕಷ್ಟದಲ್ಲಿದ್ದಾಗ ಹಲವರು ತಮ್ಮ ನೆರವಿಗೆ ಬಂದರು ಎಂದು ಬಿಂದು ಸ್ಮರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com