ಖುದ್ದು ರಸ್ತೆಗಿಳಿದ ಪೊಲೀಸ್ ಆಯುಕ್ತ​​ ಕಮಲ್​ ಪಂತ್; ಬೆಂಗಳೂರಿನಲ್ಲಿ 3 ಗಂಟೆಯಲ್ಲೆ 1500 ವಾಹನ ಜಪ್ತಿ!

ಕೊರೊನಾ ಎರಡನೇ ಅಲೆ ನಿಯಂತ್ರಿಸಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಲಾಕ್​​ಡೌನ್ ಜಾರಿಗೊಳಿಸಿದ್ದು, ಲಾಕ್​​ಡೌನ್​ ಯಶಸ್ವಿಗೊಳಿಸಲು ಖುದ್ದು ನಗರ ಪೊಲೀಸ್​ ಆಯುಕ್ತ​ ಕಮಲ್​​​ ಪಂತ್ ಅವರೇ ರಸ್ತೆಗೆ ಇಳಿದು ವಾಹನಗಳನ್ನು ಪರಿಶೀಲನೆ ನಡೆಸಿದರು.
ಕಮಲ್ ಪಂಥ್
ಕಮಲ್ ಪಂಥ್

ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಿಸಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಲಾಕ್​​ಡೌನ್ ಜಾರಿಗೊಳಿಸಿದ್ದು, ಲಾಕ್​​ಡೌನ್​ ಯಶಸ್ವಿಗೊಳಿಸಲು ಖುದ್ದು ನಗರ ಪೊಲೀಸ್​ ಆಯುಕ್ತ​ ಕಮಲ್​​​ ಪಂತ್ ಅವರೇ ರಸ್ತೆಗೆ ಇಳಿದು ವಾಹನಗಳನ್ನು ಪರಿಶೀಲನೆ ನಡೆಸಿದರು.

ನಗರದ ಕೆಆರ್​ ಸರ್ಕಲ್​​, ನೃಪತುಂಗ ರಸ್ತೆ, ಕೆಆರ್​ ಮಾರುಕಟ್ಟೆ ಸೇರಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದ ಆಯುಕ್ತರು, ಬೆಳಗ್ಗೆ 10 ಗಂಟೆಯ ನಂತರವೂ ಅನಗತ್ಯವಾಗಿ ರಸ್ತೆಗೆ ಇಳಿದಿದ್ದ ವಾಹನ ಸವಾರರನ್ನು ಪರಿಶೀಲನೆ ನಡೆಸಿದರು. ಈ ವೇಳೆ ಜಾಲಿ ರೈಡ್ ಮಾಡಿಕೊಂಡು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ   ಯುವಕನೋರ್ವನನ್ನು ತಡೆದು ಪ್ರಶ್ನಿಸಿದ ಆಯುಕ್ತರು, ಸವಾರನ ದಾಖಲೆ ಪರಿಶೀಲನೆ ನಡೆಸಿ ಅನಗತ್ಯವಾಗಿ ರಸ್ತೆ​​ಗೆ ಇಳಿದಿದ್ದನ್ನು ಖಚಿತ ಪಡಿಸಿಕೊಂಡು ತಕ್ಷಣವೇ ಸ್ಥಳೀಯ ಪೊಲೀಸ್​ ಸಿಬ್ಬಂದಿಯನ್ನು ಕರೆದು ಯುವಕನನ್ನು ವಶಕ್ಕೆ ಪಡೆಯಲು ಸೂಚಿಸಿದರು.

ಲಾಕ್ ಡೌನ್ ಉಲ್ಲಂಘನೆ- ನಗರದಲ್ಲಿ 1,500 ವಾಹನ ಜಪ್ತಿ: ಕಮಲ್ ಪಂತ್
ನಗರದಲ್ಲಿ ಇಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ಗಂಟೆವರೆಗೆ ಬರೊಬ್ಬರಿ 1,500 ವಾಹನಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯುಕ್ತರು, ಲಾಕ್ ಡೌನ್ ನಿಯಮ ಉಲ್ಲಂಘಿಸಿದವರಿಂದ 1,500 ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದ್ದು, ಕೆಲ ಚಾಲಕರನ್ನು ವಶಕ್ಕೆ ಪಡೆಯಲಾಗಿದೆ. 

ಅನಗತ್ಯವಾಗಿ ಓಡಾಡುತ್ತಿದ್ದವರ ಮೇಲೂ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದರು.ನಗರದಲ್ಲಿ ಹೋಟೆಲ್, ಮಾಲ್ ಸೇರಿ ಯಾವೊಂದು ಅಂಗಡಿಗಳು ಓಪನ್ ಇಲ್ಲ. ಬಹುತೇಕ ಎಲ್ಲಾ ಕಡೆ ಜನರಿಂದ ಉತ್ತಮ ಸಹಕಾರ ದೊರಕುತ್ತಿದೆ.ಜನ ಸಹಕರಿಸಿದಾಗ ಮಾತ್ರ ಲಾಕ್ ಡೌನ್ ಯಶಸ್ವಿಯಾಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com