ಜೂನ್ ಕೊನೆಯ ವೇಳೆಗೆ ಕೊರೋನಾ ಸೋಂಕು ಸ್ಥಿರತೆಗೆ ಬರಬಹುದು: ತಾಂತ್ರಿಕ ಸಮಿತಿ ಮುಖ್ಯಸ್ಥ ಡಾ ಎಂ ಕೆ ಸುದರ್ಶನ್ 

ಕೊರೋನಾ ಎರಡನೇ ಅಲೆ ತೀವ್ರವಾಗಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಪರಿಸ್ಥಿತಿ ಕಠಿಣವಾಗಿದೆ. ಈ ಸಂದರ್ಭದಲ್ಲಿ ರಾಜ್ಯ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ ಎಂ ಕೆ ಸುದರ್ಶನ್ ಅವರನ್ನು ಮಾತನಾಡಿಸಿದಾಗ ಜೂನ್ ಕೊನೆಯ ಹೊತ್ತಿಗೆ ಪರಿಸ್ಥಿತಿ ಸ್ಥಿರತೆಗೆ ಬರಬಹುದು ಎನ್ನುತ್ತಾರೆ.
ಡಾ ಎಂ ಕೆ ಸುದರ್ಶನ್
ಡಾ ಎಂ ಕೆ ಸುದರ್ಶನ್

ಬೆಂಗಳೂರು: ಕೊರೋನಾ ಎರಡನೇ ಅಲೆ ತೀವ್ರವಾಗಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಪರಿಸ್ಥಿತಿ ಕಠಿಣವಾಗಿದೆ. ಈ ಸಂದರ್ಭದಲ್ಲಿ ರಾಜ್ಯ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ ಎಂ ಕೆ ಸುದರ್ಶನ್ ಅವರನ್ನು ಮಾತನಾಡಿಸಿದಾಗ ಜೂನ್ ಕೊನೆಯ ಹೊತ್ತಿಗೆ ಪರಿಸ್ಥಿತಿ ಸ್ಥಿರತೆಗೆ ಬರಬಹುದು ಎನ್ನುತ್ತಾರೆ.

ಈಗಿನ ಪರಿಸ್ಥಿತಿಯನ್ನು ಹೇಗೆ ವಿಮರ್ಶಿಸುತ್ತೀರಿ?
ಪರಿಸ್ಥಿತಿ ಲಾಕ್ ಡೌನ್ ಹೇರಿಕೆಯ ನಂತರ ಸುಧಾರಿಸುತ್ತಿದೆ. ಲಾಕ್ ಡೌನ್ ನ ಎರಡನೇ ಹಂತವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಜೂನ್ ಕೊನೆಯ ಹೊತ್ತಿಗೆ ಪರಿಸ್ಥಿತಿ ಸುಧಾರಿಸಬಹುದು. ಪಾಸಿಟಿವ್ ದರ ಕಡಿಮೆಯಾಗಬಹುದು. ಕೊರೋನಾ ಸೋಂಕಿತರ, ಅವರ ನಿಕಟವರ್ತಿಗಳ, ಪ್ರತಿ ಮನೆಮನೆಗಳಲ್ಲಿ ಸೋಂಕಿತರನ್ನು ಹುಡುಕಿ ಪರೀಕ್ಷೆ ನಡೆಸುತ್ತಿರುವುದರಿಂದಲೇ ಕೊರೋನಾ ಸೋಂಕು ಇತ್ತೀಚೆಗೆ ಇಳಿಮುಖವಾಗುತ್ತಿದೆ. ಲಾಕ್ ಡೌನ್ ನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರೆ ಪಾಸಿಟಿವ್ ದರ ಖಂಡಿತಾ ಕಡಿಮೆಯಾಗುತ್ತದೆ.

ಈಗ ಸಾಕಷ್ಟು ಕೊರೋನಾ ಪರೀಕ್ಷೆ ನಡೆಯುತ್ತಿದೆಯೇ?
ಲಾಕ್ ಡೌನ್ ಜಾರಿಯಾಗಿ ಜನರು ಮನೆಯಲ್ಲಿದ್ದಾರೆ. ಸಾಮಾನ್ಯ ದಿನಗಳಲ್ಲಿ ಮಾಡಿದ್ದಂತೆ ಪರೀಕ್ಷೆಗಳು ಈಗ ಮಾಡಲು ಸಾಧ್ಯವಿಲ್ಲ. ಹೆಚ್ಚು ಕೇಂದ್ರೀಕೃತ ಪರೀಕ್ಷೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ, ಶೇಕಡಾ 30ರವರೆಗೆ ರ್ಯಾಪಿಡ್ ಆಂಟಿಜೆನ್ ಟೆಸ್ಟ್(ಆರ್ ಎಟಿ) ಮಾಡಲಾಗುತ್ತದೆ. ರೋಗಲಕ್ಷಣ ಹೊಂದಿರುವವರಿಗೆ ಹೆಚ್ಚೆಚ್ಚು ಪರೀಕ್ಷೆ ಮಾಡಿದರೆ ಸೋಂಕು ಹರಡುವಿಕೆಯನ್ನು ಕಡಿಮೆ ಮಾಡಬಹುದು. ತಕ್ಷಣವೇ ಹೋಂ ಐಸೊಲೇಷನ್, ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಿಸುವ ಕೆಲಸವನ್ನು ಸೋಂಕಿತರಿಗೆ ಮಾಡಬೇಕು. ಪರೀಕ್ಷೆ ಹೆಚ್ಚಿಸಿ ಬೇಗನೆ ಫಲಿತಾಂಶ ನೀಡುವ ವ್ಯವಸ್ಥೆಯಾಗಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲಾಗಿದೆ. ಗ್ರಾಮಗಳಲ್ಲಿ ಸರಿಯಾಗಿ ಹೋಂ ಐಸೊಲೇಷನ್ ಮಾಡದಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಇತ್ತೀಚೆಗೆ ವ್ಯಾಪಿಸುತ್ತಿದೆ.

ಲಾಕ್ ಡೌನ್ ನಿಜಕ್ಕೂ ಸಹಾಯವಾಗಿದೆಯೇ?
14 ದಿನಗಳ ಲಾಕ್ ಡೌನ್ ನಿಜಕ್ಕೂ ಒಳ್ಳೆಯದು. ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತು ಪಾಸಿಟಿವ್ ದರದಲ್ಲಿ ಕಡಿಮೆಯಾಗಿದೆ.

ಲಾಕ್ ಡೌನ್ ಗಿಂತ ಮೊದಲಿಗೆ ಹೋಲಿಸಿದರೆ ಈಗ ಪಾಸಿಟಿವ್ ದರ ಕಡಿಮೆಯಾಗಿದೆ, ಒಪ್ಪಿಕೊಳ್ಳೋಣ, ಆದರೆ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಏರುತ್ತಲೇ ಇದೆಯಲ್ಲವೇ, ಯಾಕೆ?
ನಿರೀಕ್ಷಿತ ಮಟ್ಟಕ್ಕೆ ಸಾವಿನ ಸಂಖ್ಯೆ ಇಳಿಕೆಯಾಗಿಲ್ಲ. ಇದು ಸಣ್ಣ ಪರಿಣಾಮವಷ್ಟೆ, ಸೋಂಕಿತರು ತಡವಾಗಿ ಆಸ್ಪತ್ರೆಗೆ ಬರುವುದರಿಂದ ಚೇತರಿಕೆ ಸಾಧ್ಯತೆ ಕಡಿಮೆ. ತಡವಾಗಿ ಆಸ್ಪತ್ರೆಗೆ ಹೋಗಿ ದಾಖಲಾದರೆ ಸೋಂಕಿತರು ಬದುಕುಳಿಯುವ ಸಾಧ್ಯತೆ ಕಡಿಮೆ. ಇದರಲ್ಲಿ ಹಲವು ಸಂಕೀರ್ಣ ಹಲವು ವಿಷಯಗಳು ಅಡಗಿರುತ್ತದೆ. ಇದೀಗ ಲಾಕ್ ಡೌನ್ ಎರಡನೇ ಹಂತದಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ. ಇತ್ತೀಚೆಗೆ ಒಂದು ವಾರದಿಂದ ಆಸ್ಪತ್ರೆಗಳಲ್ಲಿ ಬೆಡ್ ಗಳ ಸಂಖ್ಯೆಯ ಸಮಸ್ಯೆ ಕಡಿಮೆಯಾಗುತ್ತಿದೆ. ಬೇಗನೆ, ಸಮಯಕ್ಕೆ ಸರಿಯಾಗಿ ಆಸ್ಪತ್ರೆಗಳಿಗೆ ದಾಖಲಾಗುವುದರಿಂದ ಸೋಂಕಿತರ ಸಂಖ್ಯೆ ಮತ್ತು ಮೃತಪಡುವವರ ಸಂಖ್ಯೆಯನ್ನು ಕಡಿಮೆ ಮಾಡಬಹುದು.

ಮೂರನೇ ಅಲೆಗೆ ಹೇಗೆ ಸಿದ್ದವಾಗುತ್ತಿದ್ದೀರಿ?
ಡಾ ದೇವಿ ಶೆಟ್ಟಿ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿಯನ್ನು ರಚಿಸಲಾಗಿದ್ದು ಅದು ಮೂರನೇ ಅಲೆಯನ್ನು ಎದುರಿಸಿ ನಿರ್ವಹಿಸುವ ಬಗ್ಗೆ ಸರ್ಕಾರಕ್ಕೆ ಮಾರ್ಗದರ್ಶನ ಮಾಡಲಿದೆ.

ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆಯಲ್ಲವೇ?
ಲಸಿಕೆ ಅಭಿಯಾನ ಕೇವಲ 18 ವರ್ಷ ಮತ್ತು ಮೇಲ್ಪಟ್ಟವರೆಗೆ ನಡೆಯುತ್ತಿರುವುದರಿಂದ ಅದು ತಾರ್ಕಿಕ ವಿವರಣೆಯಾಗಿದೆ. ಲಸಿಕೆ ನೀಡದ ಕಾರಣ ಅವು ದುರ್ಬಲವಾಗಿ ಕಂಡುಬರುತ್ತವೆ ಮತ್ತು ಶಾಲೆಗಳು ಮತ್ತು ಕಾಲೇಜುಗಳು ಮತ್ತೆ ತೆರೆಯುವ ನಿರೀಕ್ಷೆಯಿದೆ.

ಲಸಿಕೆ ಅಭಿಯಾನ ತುಂಬಾ ನಿಧಾನವಾಗಿ ಸಾಗುತ್ತಿದೆ ಎನಿಸುವುದಿಲ್ಲವೇ ಮೂರನೇ ಅಲೆಗೆ ಮುನ್ನ ನಿರೀಕ್ಷಿತ ಗುಂಪಿಗೆ ಲಸಿಕೆ ಹಾಕಿ ಮುಗಿಸಲು ಸಾಧ್ಯವಿದೆಯೇ?
ಲಸಿಕೆ ಲಭ್ಯತೆ ಮೇಲೆ ಅವಲಂಬಿತವಾಗಿದೆ. ಸರ್ಕಾರ ಸಿದ್ದವಿದ್ದರೂ ಲಸಿಕೆ ಲಭ್ಯತೆ ಇಲ್ಲದ ಕಾರಣ ಎಲ್ಲರಿಗೂ ಲಸಿಕೆ ಹಾಕಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಸಾಧ್ಯವಾದ ಪ್ರಯತ್ನ ಮಾಡುತ್ತಿದೆ. ಜಾಗತಿಕ ಟೆಂಡರ್ ಕರೆಯಲಾಗಿದೆ. ಖರೀದಿ ಮತ್ತು ಪಾವತಿ ಪ್ರಕ್ರಿಯೆಗಳನ್ನು ಮಾಡಲಾಗಿದೆ.

ಕೊರೋನಾ ಸೋಂಕು ಹೆಚ್ಚುತ್ತಿರುವಾಗ ಲಸಿಕೆ ಸಮಸ್ಯೆ ನಿಜಕ್ಕೂ ಆತಂಕ ಹುಟ್ಟಿಸುವುದಿಲ್ಲವೇ?
ಹೌದು, ಆತಂಕವಾಗುತ್ತಿದೆ, ಸರ್ಕಾರ ಸಾಧ್ಯವಾದ ಪ್ರಯತ್ನ ಮಾಡುತ್ತಿದೆ.

ಬ್ಲ್ಯಾಕ್ ಫಂಗಸ್ ಹೆಚ್ಚುತ್ತಿರುವ ಬಗ್ಗೆ ಆತಂಕವಿದೆ, ಅದನ್ನು ನಿಭಾಯಿಸಲು ಸಜ್ಜಾಗಿದ್ದೇವಾ?
-ಆತಂಕಪಡುವ ಅಗತ್ಯವಿಲ್ಲ. ಎರಡನೇ ಅಲೆಯಲ್ಲಿ ಇದು ಹೊಸ ಪ್ರಕರಣ. ಅದನ್ನು ಗುಣಪಡಿಸುವ ಸಾಧ್ಯತೆಯಿದೆ. ಅಗತ್ಯ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಬ್ಲ್ಯಾಕ್ ಫಂಗಸ್ ನ್ನು ತಡೆಯುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com