ಉಲ್ಲಾಳ ಬಳಿ ಕಡಲ ದಡಕ್ಕೆ ಅಪ್ಪಳಿಸಿದ ದೋಣಿ: ಹತ್ತು ಮೀನುಗಾರರ ರಕ್ಷಣೆ

ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳ ಸಮೀಪದ ಕೋಡಿ ಎಂಬಲ್ಲಿ ಭಾನುವಾರ ಮುಂಜಾನೆ ಮೀನುಗಾರಿಕಾ ದೋಣಿ ಆಕಸ್ಮಿಕವಾಗಿ ದಡಕ್ಕೆ ಅಪ್ಪಳಿಸಿದ್ದು, ನಂತರ ಅದರಲ್ಲಿದ್ದ 10 ಮೀನುಗಾರರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ದುರಂತದ ದೃಶ್ಯ
ದುರಂತದ ದೃಶ್ಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳ ಸಮೀಪದ ಕೋಡಿ ಎಂಬಲ್ಲಿ ಭಾನುವಾರ ಮುಂಜಾನೆ ಮೀನುಗಾರಿಕಾ ದೋಣಿ ಆಕಸ್ಮಿಕವಾಗಿ ದಡಕ್ಕೆ ಅಪ್ಪಳಿಸಿದ್ದು, ನಂತರ ಅದರಲ್ಲಿದ್ದ 10 ಮೀನುಗಾರರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಮುಂಜಾನೆ 1.30 ಕ್ಕೆ ‘ಅಜಾನ್’ ಎಂಬ ದೋಣಿ ಮಂಗಳೂರು ಹಳೆಯ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ದೋಣಿಯು ಉಲ್ಲಾಳ ಮೂಲದ ಅಶ್ರಫ್ ಮತ್ತು ಫಾರೂಕ್‌ಗೆ ಸೇರಿದ್ದಾಗಿದೆ. ದೋಣಿಯಲ್ಲಿ ಕನ್ಯಾಕುಮಾರಿಯ ಐವರು ಸೇರಿದಂತೆ 10 ಮೀನುಗಾರರು ಇದ್ದು, ಅವರಲ್ಲಿ ಕೆಲವರು ಪಾನಮತ್ತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದೋಣಿಯ ಕ್ಯಾಪ್ಟನ್ ಸಮುದ್ರದ ಮಧ್ಯೆ ದೋಣಿಯನ್ನು ಮತ್ತೊಬ್ಬ ಮೀನುಗಾರನಿಗೆ ಹಸ್ತಾಂತರಿಸಿದ್ದರಿಂದ ಈ ಅಪಘಾತ ಸಂಭವಿಸಿದೆ. ದೋಣಿ ದಡಕ್ಕೆ ಅಪ್ಪಳಿಸಿದ ನಂತರ ಕೆಲ ಮೀನುಗಾರರು ವಾಂತಿ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಉಲ್ಲಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com