ಲಸಿಕೆ, ಟೆಸ್ಟಿಂಗ್ ಗಾಗಿ ಮನೆ-ಮನೆ ಸಮೀಕ್ಷೆ ವೇಳೆ ಸಿಬ್ಬಂದಿಗಳಿಗೆ ಸಹಕರಿಸಿ: ಬಿಬಿಎಂಪಿ ಆಯುಕ್ತ

ಕೋವಿಡ್-19 ಲಸಿಕೆ ಹಾಗೂ ಟೆಸ್ಟಿಂಗ್ ಕುರಿತ ಮಾಹಿತಿ ಸಂಗ್ರಹಿಸಲು ಬಿಬಿಎಂಪಿ ಮನೆ-ಮನೆಗಳಿಗೆ ತೆರಳಿ ಸಮೀಕ್ಷೆ ನಡೆಸುವ ಅಭಿಯಾನಕ್ಕೆ ಚಾಲನೆ ನೀಡಿದೆ.
ಕೋವಿಡ್-19 ವಾರ್ ರೂಮ್ ನಲ್ಲಿ ಬಿಬಿಎಂಪಿ ಸಿಬ್ಬಂದಿ (ಸಂಗ್ರಹ ಚಿತ್ರ)
ಕೋವಿಡ್-19 ವಾರ್ ರೂಮ್ ನಲ್ಲಿ ಬಿಬಿಎಂಪಿ ಸಿಬ್ಬಂದಿ (ಸಂಗ್ರಹ ಚಿತ್ರ)

ಬೆಂಗಳೂರು: ಕೋವಿಡ್-19 ಲಸಿಕೆ ಹಾಗೂ ಟೆಸ್ಟಿಂಗ್ ಕುರಿತ ಮಾಹಿತಿ ಸಂಗ್ರಹಿಸಲು ಬಿಬಿಎಂಪಿ ಮನೆ-ಮನೆಗಳಿಗೆ ತೆರಳಿ ಸಮೀಕ್ಷೆ ನಡೆಸುವ ಅಭಿಯಾನಕ್ಕೆ ಚಾಲನೆ ನೀಡಿದೆ. ಆದರೆ ನಾಗರಿಕರು ಅದಕ್ಕೆ ಸಹಕರಿಸುತ್ತಿಲ್ಲ. ತಮಗೆ ತಪಾಸಣೆಯೂ ಬೇಡ, ಲಸಿಕೆಯೂ ಬೇಡ ಎಂಬ ಮನಸ್ಥಿತಿ ಕಂಡುಬರುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಹೇಳಿದ್ದಾರೆ. 

ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಗಳ ಕುರಿತು ಮಾಹಿತಿ ಪಡೆಯುವ ಹಾಗೂ ಹೋಮ್ ಐಸೊಲೇಷನ್ ಗೆ ಸಾಕಷ್ಟು ಸೌಲಭ್ಯಗಳಿವೆಯೇ ಎಂಬುದನ್ನೂ ಈ ಸಮೀಕ್ಷೆಯ ಮೂಲಕ ತಿಳಿದುಕೊಳ್ಳಲಾಗುತ್ತದೆ. ಆದರೆ ಜನರು ಇದಕ್ಕೆ ಮುಂದಾಗುತ್ತಿಲ್ಲ. ಈ ರೀತಿಯ ವರ್ತನೆ ಸಲ್ಲ ಎಂದು ಆಯುಕ್ತರು ಹಲಸೂರಿನ ಸೇಂಟ್ ಜಾನ್ಸ್ ರಸ್ತೆಯಲ್ಲಿನ ಮಿಲಿಟರಿ ಕಾಂಪೌಂಡ್ ನಲ್ಲಿ 100 ಬೆಡ್ ಗಳ ಸಾಮರ್ಥ್ಯವಿರುವ ಕೋವಿಡ್ ಕೇರ್ ಕೇಂದ್ರದ ಉದ್ಘಾಟನೆ ವೇಳೆ ಹೇಳಿದ್ದಾರೆ. 

"ರೋಗಿಗಳ ಆರೋಗ್ಯದ ಪರಿಸ್ಥಿತಿಯನ್ನು ಗಮನಿಸಿ ಆದ್ಯತೆಯ ಮೇಲೆ ಕೋವಿಡ್-19 ಕೇರ್ ಕೇಂದ್ರಗಳಿಂದ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ (ಟ್ರಯೇಜಿಂಗ್ ಸೆಂಟರ್) ಗಳ ಕುರಿತೂ ಮಾಹಿತಿ ನೀಡಿರುವ ಆಯುಕ್ತರು, ಬೆಡ್ ನೀಡುವ ಸಾಫ್ಟ್ ವೇರ್ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಟ್ರಯೇಜಿಂಗ್ ಸೆಂಟರ್ ಗಳ ಶಿಫಾರಸಿನ ಮೇಲೆ ನೇರವಾಗಿ ರೋಗಿಗಳನ್ನು ಸಿಸಿಸಿ ಗಳಿಂದ ಆಸ್ಪತ್ರೆಗಳಿಗೆ ಅವರಿಗೆ ಅಗತ್ಯವಿರುವ ಚಿಕಿತ್ಸೆಗೆ ಕಳಿಸಲಾಗುತ್ತದೆ, ಇದಕ್ಕಾಗಿ 1912ಕ್ಕೆ ಕರೆ ಮಾಡುವ ಅಗತ್ಯವಿಲ್ಲ" ಎಂದು ತಿಳಿಸಿದ್ದಾರೆ. 

"100 ಬೆಡ್ ಗಳಿರುವ ಕೋವಿಡ್-19 ಕೇರ್ ಕೇಂದ್ರಗಳಲ್ಲಿ 40 ಆಕ್ಸಿಜನೇಟೆಡ್ ಬೆಡ್ ಗಳಿದ್ದು, 24 ಗಂಟೆಗಳೂ ವೈದ್ಯರು ಹಾಗೂ ನರ್ಸ್ ಗಳ ಲಭ್ಯತೆ ಹಾಗೂ ಆಂಬುಲೆನ್ಸ್ ಗಳ ಸೇವೆಗಳಿರುವಂತೆ ನೋಡಿಕೊಳ್ಳಲಾಗಿದೆ". 

"ಪ್ರತಿಯೊಂದು ಸಿಸಿಸಿಗಳು ಹಾಗೂ ಟ್ರಯೇಜಿಂಗ್ ಕೇಂದ್ರಗಳೂ ಆಸ್ಪತ್ರೆಗಳೊಂದಿಗೆ ಜೋಡಣೆಯಾಗಿದ್ದು, ತಕ್ಷಣವೇ ರೋಗಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ಸೌಲಭ್ಯ ನಿರ್ಮಾಣ ಮಾಡಲಾಗಿದೆ" ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ. 

"ಕೋವಿಡ್-19 ನಿಂದ ಕಾರ್ಮಿಕರು ಮೃತಪಟ್ಟರೆ ಅವರಿಗೆ ಕಳೆದ ವರ್ಷ ವಿಮೆ ಯೋಜನೆಯನ್ನು ಸರ್ಕಾರ ಘೋಷಿಸಿತ್ತು. ಆದರೆ ಈ ವರ್ಷ ತಲಾ 10 ಲಕ್ಷ ನೀಡಲು ನಿರ್ಧರಿಸಲಾಗಿದೆ" ಎಂದು ಆಯುಕ್ತರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com