ಕೃಷಿ ಭೂಮಿಯಲ್ಲಿ 67ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದೇವೇಗೌಡ ದಂಪತಿ! ವಿಡಿಯೋ

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ, ಚೆನ್ನಮ್ಮ ಅವರ ದಾಂಪತ್ಯ ಜೀವನಕ್ಕೆ 67ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ಸೋಮವಾರ ರಾಮನಗರದ ಕೇತಗಾನಹಳ್ಳಿಯಲ್ಲಿರುವ ಎಚ್.ಡಿ. ಕುಮಾರಸ್ವಾಮಿ ಅವರ ಕೃಷಿಭೂಮಿಯಲ್ಲಿ ತೆಂಗಿನ ಸಸಿನೆಟ್ಟು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

Published: 24th May 2021 11:24 PM  |   Last Updated: 25th May 2021 12:13 PM   |  A+A-


HD_Devegowda1

ತೆಂಗಿನ ಸಸಿ ನೆಟ್ಟ ದೇವೇಗೌಡ ದಂಪತಿ

Posted By : Nagaraja AB
Source : Online Desk

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ, ಚೆನ್ನಮ್ಮ ಅವರ ದಾಂಪತ್ಯ ಜೀವನಕ್ಕೆ 67ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ಸೋಮವಾರ ರಾಮನಗರದ ಕೇತಗಾನಹಳ್ಳಿಯಲ್ಲಿರುವ ಎಚ್.ಡಿ. ಕುಮಾರಸ್ವಾಮಿ ಅವರ ಕೃಷಿಭೂಮಿಯಲ್ಲಿ ತೆಂಗಿನ ಸಸಿನೆಟ್ಟು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಎಚ್.ಡಿ. ಕುಮಾರಸ್ವಾಮಿ, ಹಸಿರಿನಿಂದ ಕಂಗೊಳಿಸುತ್ತಾ, ಸಂಭ್ರಮಿಸುತ್ತಿರುವ ತೋಟವನ್ನು ಕಂಡು 'ರೈತನ ಮಗ' ದೇವೇಗೌಡರು ಅಷ್ಟೇ ಸಂಭ್ರಮಪಟ್ಟರು ಎಂದಿದ್ದಾರೆ.

ದಂಪತಿ ಈ ಶುಭ ದಿನ ನನ್ನ ಪ್ರೀತಿಯ ತೋಟಕ್ಕೆ ಆಗಮಿಸಿ, ಕಲ್ಪವೃಕ್ಷವಾದ ತೆಂಗಿನ ಸಸಿ ನೆಟ್ಟಿದ್ದು ಅವರ ಮಗನಾದ ನನ್ನನ್ನು ಭಾವಪರವಶನಾಗುವಂತೆ ಮಾಡಿತು. ಈ ಅಪರೂಪದ ಸನ್ನಿವೇಶ ಸೃಷ್ಟಿಸಿದ ದೇವರಿಗೆ ನನ್ನ ನಮನಗಳು. ದೇವೇಗೌಡ ದಂಪತಿಗೆ ಶುಭಾಶಯಗಳು ಎಂದು ಕುಮಾರಸ್ವಾಮಿ ಬರೆದುಕೊಂಡಿದ್ದಾರೆ.


Stay up to date on all the latest ರಾಜ್ಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp