ಕೋವಿಡ್ ವಾರಿಯರ್ಸ್ ಎಂದು ಘೋಷಣೆ: ಆತಂಕದಲ್ಲಿದ್ದ ಅಂಚೆ ಕಚೇರಿ ಸಿಬ್ಬಂದಿಗಳು ನಿರಾಳ

ಕೊರೋನಾ ಆತಂಕದ ನಡುವಲ್ಲೂ ಸೇವೆ ಮುಂದುವರೆಸುತ್ತಿರುವ ಅಂಚೆ ಇಲಾಖೆ ಸಿಬ್ಬಂದಿಗಳನ್ನೂ ಕೋವಿಡ್ ವಾರಿಯರ್ಸ್ ಗಳೆಂದು ಸರ್ಕಾರ ಘೋಷಣೆ ಮಾಡಿದ್ದು, ಆತಂಕದಲ್ಲಿದ್ದ ಅಂಚೆ ಇಲಾಖೆ ಸಿಬ್ಬಂದಿಗಳಿಗೆ  ಸರ್ಕಾರದ ಘೋಷಣೆ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಆತಂಕದ ನಡುವಲ್ಲೂ ಸೇವೆ ಮುಂದುವರೆಸುತ್ತಿರುವ ಅಂಚೆ ಇಲಾಖೆ ಸಿಬ್ಬಂದಿಗಳನ್ನೂ ಕೋವಿಡ್ ವಾರಿಯರ್ಸ್ ಗಳೆಂದು ಸರ್ಕಾರ ಘೋಷಣೆ ಮಾಡಿದ್ದು, ಆತಂಕದಲ್ಲಿದ್ದ ಅಂಚೆ ಇಲಾಖೆ ಸಿಬ್ಬಂದಿಗಳಿಗೆ  ಸರ್ಕಾರದ ಘೋಷಣೆ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ. 

ಕೊರೋನಾ 2ನೇ ಅಲೆಯಲ್ಲಿ ಅಂಚೆ ಇಲಾಖೆಯಲ್ಲಿ ಈವರೆಗೂ 40 ಮಂದಿ ಸಿಬ್ಬಂದಿಗಳು ಮಹಾಮಾರಿ ಕೊರೋನಾಗೆ ಬಲಿಯಾಗಿದ್ದಾರೆ. ಅಲ್ಲದೆ, 610 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಬೆಳವಣಿಗೆ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯನ್ನು ಎದುರು ಮಾಡಿದ್ದು, ಸಂಕಷ್ಟಗಳ ನಡುವಲ್ಲೂ ಇಲಾಖೆ ತನ್ನ ಸೇವೆಯನ್ನು ಮುಂದುವರೆಸಿದೆ. 

ಅಂಚೆ ಇಲಾಖೆಯಲ್ಲಿ ಮೂವರು ಚಾಲಕರು, ಮೂವರು ಸ್ಟೆನೋಗ್ರಾಫರ್‌ಗಳು, ಐದು ಅಕೌಂಟೆಂಟ್‌ಗಳು ಮತ್ತು ಆರು ಮಂದಿ ಸಾಮಾನ್ಯ ಪೋಸ್ಟ್‌ಮನ್‌ಗಳು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 

ಸಚಿವರ ನಿರಂತರ ಪ್ರಯತ್ನಗಳಿಂದಾಗಿ ಅಂಚೆ ಇಲಾಖೆ ಸಿಬ್ಬಂದಿಯನ್ನು ಮುಂಚೂಣಿ ಕಾರ್ಯಕರ್ತರೆಂದು ಘೋಷಿಸಲಾಗಿದೆ. 18-45 ವಯೋಮಾನದ ಒಟ್ಟು 11,560 ಉದ್ಯೋಗಿಗಳಿಗೆ ಮತ್ತು 45 ವರ್ಷಕ್ಕೂ ಹೆಚ್ಚು ವಯೋಮಾನದ ಒಟ್ಟು 19,647 ಉದ್ಯೋಗಿಗಳಿಗೆ ಇದೀಗ ಲಸಿಕೆ ನೀಡಲಾಗುವುದು ಎಂದು ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ (ಕರ್ನಾಟಕ ಸರ್ಕಲ್) ಶಾರದಾ ಸಂಪತ್ ಅವರು ಹೇಳಿದ್ದಾರೆ. 

ಇಲಾಖೆಯು ಈಗಾಗಲೇ 5,477 ಇಲಾಖೆ ಸಿಬ್ಬಂದಿಗಳಿಗೆ ಲಸಿಕೆ ನೀಡುವ ಸಲುವಾಗಿ 53 ಲಸಿಕಾ ಶಿಬಿರಗಳನ್ನು ತೆರೆದಿದೆ. ಅಲ್ಲದೆ, ಕೊರೋನಾ ಎರಡನೇ ಅಲೆಯಲ್ಲಿ ಮೃತಪಟ್ಟ ಸಿಬ್ಬಂದಿಗಳ ಕುಟುಂಬಸ್ಥರಿಗೂ ಪರಿಹಾರದ ಆಧಾರದ ಮೇಲೆ ಲಸಿಕೆಗಳನ್ನು ನೀಡಲಾಗುತ್ತದೆ. ಇದಲ್ಲದೆ, ಕರ್ನಾಟಕ ಸರ್ಕಲ್ ಈಗಾಗಲೇ ಕೋವಿ ಸುರಕ್ಷಾ ಎಂಬ ಆ್ಯಪ್ ಅಭಿವೃದ್ಧಿಪಡಿಸಿದ್ದು, ಈ ಆ್ಯಪ್ ಮೂಲಕ ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ಕುರಿತ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಸಿಬ್ಬಂದಿಗಳಿಗೆ ಸಹಾಯಕವಾಗಲು ಪ್ಲಾಸ್ಮಾ ಬ್ಯಾಂಕ್ ಕೂಡ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ. 

ಅಂಚೆ ಇಲಾಖೆಯಲ್ಲಿ ಈ ವರೆಗೂ 767 ಮಂದಿ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗುಲಿದ್ದು, ಇದರಲ್ಲಿ 117 ಮಂದಿ ಸಿಬ್ಬಂದಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com