ಕೊರೋನಾ 2 ನೇ ಅಲೆಯಲ್ಲಿ ಸೋಂಕಿತರ ಆರೋಗ್ಯದ ಮೇಲೆ ದೀರ್ಘಕಾಲಿಕ ಪರಿಣಾಮ ಹೆಚ್ಚು!

ಕೊರೋನಾದ 2 ನೇ ಅಲೆಯಲ್ಲಿ ಸೋಂಕು ಪತ್ತೆಯಾದವರು ದೀರ್ಘಕಾಲಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತಿದೆ.
ಕೊರೋನಾಗೆ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ (ಸಂಗ್ರಹ ಚಿತ್ರ)
ಕೊರೋನಾಗೆ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ (ಸಂಗ್ರಹ ಚಿತ್ರ)

ಬೆಂಗಳೂರು: ಕೊರೋನಾದ 2 ನೇ ಅಲೆಯಲ್ಲಿ ಸೋಂಕು ಪತ್ತೆಯಾದವರು ದೀರ್ಘಕಾಲಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತಿದೆ. 

ಪ್ರಾರಂಭಿಕ ಹಂತದ, ಮಧ್ಯಮ ಹಂತದ ಕೊರೋನಾ ಸೋಂಕನ್ನು ಎದುರಿಸಿ ಚೇತರಿಕೆಯ ನಂತರವೂ ಕಾಣಿಸಿಕೊಳ್ಳುತ್ತಿದ್ದ ಸೋಂಕುಗಳ ಪ್ರಕರಣ ಕಳೆದ ವರ್ಷ ಮೂರನೇ ಒಂದರಷ್ಟಿತ್ತು. ಆದರೆ ಅದು ಈ ವರ್ಷ 50-60 ರಷ್ಟು ಹೆಚ್ಚಾಗಿದೆ. 

ಡಿಸ್ಚಾರ್ಜ್ ಆದ ಬಳಿಕ ನಾಲ್ಕು ವಾರಗಳು ಕಾಣಿಸಿಕೊಳ್ಳುವ ಈ ಸೋಂಕಿನಿಂದಾಗಿ ಹೊಸ ಕೋವಿಡ್-19 ರೋಗಿಗಳಿಗೆ ಬೆಡ್ ಗಳ ಸಮಸ್ಯೆಗಳೂ ತಲೆದೋರುತ್ತಿವೆ. 

ಇದು ಈಗಾಗಲೇ ಎದುರಾಗಿರುವ ಬೆಡ್ ಗಳ ಕೊರತೆ, ಆಕ್ಸಿಜನ್ ಕೊರತೆ ಮ್ಯೂಕೋರ್ಮೈಕೋಸಿಸ್ (ಬ್ಲಾಕ್ ಫಂಗಸ್) ನ ಜೊತೆಗೆ ಹೊಸ ಆತಂಕಕ್ಕೆ ಕಾರಣವಾಗಿದೆ. ಇನ್ನು ಹಿರಿಯರಲ್ಲಿ ಅಷ್ಟೇ ಅಲ್ಲದೇ ಕಿರಿಯ ವಯಸ್ಸಿನವರಲ್ಲೂ ಈ ರೀತಿಯ ಕೊರೋನಾ ಚೇತರಿಕೆಯ ನಂತರ ಕಾಣಿಸಿಕೊಳ್ಳುತ್ತಿರುವ ಸೋಂಕುಗಳು ಆಂತಕವನ್ನು ಮತ್ತಷ್ಟು ಹೆಚ್ಚಿಸಿದೆ. 

ಈ ಬಗ್ಗೆ ಹಲವು ಆಸ್ಪತ್ರೆಗಳ ವೈದ್ಯರು ಮಾಹಿತಿ ನೀಡಿದ್ದು, ಕೊರೋನೋತ್ತರ ಸೋಂಕುಗಳ ಪೈಕಿ  ಲಂಗ್  ಫೈಬ್ರೋಸಿಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ, ಇದರ ಜೊತೆಗೆ ಶ್ವಾಸಕೋಶದಲ್ಲಿ ರಕ್ತಸ್ರಾವವಾಗುವ ಪಲ್ಮನರಿ ಎಂಬೋಲಿಸಂ ಹಾಗೂ ಎದೆಯೊಳಗೆ ಗಾಳಿಯ ಸೋರಿಕೆಯಾಗುವ ನ್ಯುಮೋಮೆಡಿಯಾಸ್ಟಿನಮ್ ಎಂಬ ಸಮಸ್ಯೆಯೂ ಕಾಣಿಸಿಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. 

ಲಂಗ್ ಫಿಬ್ರೋಸಿಸ್ ನಲ್ಲಿ ಆಂತರಿಕವಾಗಿ ಶ್ವಾಸಕೋಶಗಳ ಮೇಲೆ ಕಲೆಗಳು ಉಳಿಯುತ್ತವೆ.  ಉಸಿರಾಟದ ತೊಂದ, ಒಣ ಕೆಮ್ಮು, ತೂಕ ಕಡಿಮೆ,  ಉರಗುರಿನ ಸಮಸ್ಯೆಗಳು, ಆಯಾಸ ಇವುಗಳು ಲಂಗ್ ಫಿಬ್ರೋಸಿಸ್ ನ ಪ್ರಮುಖ ಲಕ್ಷಣಗಳಾಗಿವೆ. 

ಇದರಿಂದಾಗಿ ಶ್ವಾಸಕೋಶದ ಅಧಿಕ ಒತ್ತಡ, ಉಸಿರಾಟದ ವೈಫಲ್ಯ ಶ್ವಾಸಕೋಶ ಹಾಗೂ ಎದೆಯ ನಡುವೆ ಗಾಳಿ ಸೋರಿಕೆಯಾಗುವ ನ್ಯುಮೋಥೊರಾಕ್ಸ್ ಗಳು, ಶ್ವಾಸಕೋಶದ ಕ್ಯಾನ್ಸರ್ ಗಳ ಅಪಾಯ ಹೆಚ್ಚಿರುತ್ತದೆ.

ಸಾಕ್ರ ವರ್ಲ್ಡ್ ಹಾಸ್ಪೆಟಲ್ ನಲ್ಲಿ, ಕ್ರಿಟಿಕಲ್ ಕೇರ್ ಮೆಡಿಸಿನ್, ಶ್ವಾಸಕೋಶ ವಿಭಾಗದ ಹಿರಿಯ ಸಲಹೆಗಾರರೂ ಆಗಿರುವ ಡಾ. ಸಚಿನ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಬಾರಿ ಕೋವಿಡ್-19 ಚೇತರಿಕೆಯ ನಂತರ ಪಲ್ಮನರಿ ಎಂಬಾಲಿಸಮ್ ಮತ್ತು ನ್ಯುಮೋಮೆಡಿಯಾಸ್ಟಿನಮ್ ಎರಡೂ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಕನಿಷ್ಟ ಶೇ.30-40 ರಷ್ಟು ಹೆಚ್ಚು ಪ್ರಕರಣಗಳು ಈ ಬಾರಿ ವರದಿಯಾಗುತ್ತಿವೆ. ಮನೆಗೆ ಡಿಸ್ಚಾರ್ಜ್ ಆದ ಬಳಿಕವೂ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಬೇಕಾಗುವುದು ಪ್ರಮುಖ ಲಕ್ಷಣಗಳಾಗಿವೆ. ಇದರ ಹೊರತಾಗಿ ಕೆಮ್ಮು, ಎದೆ ಭಾಗದಲ್ಲಿ ನೋವು, ಅಸ್ವಸ್ಥತೆಗಳು ಕಾಣಿಸಿಕೊಳ್ಳಲಿವೆ" ಎಂದು ಹೇಳಿದ್ದಾರೆ

ಈ ರೀತಿಯ ಪ್ರಕರಣಗಳಿಗೆ ಸಾಕ್ರಾ ವರ್ಲ್ಡ್ ಆಸ್ಪತ್ರೆ, ಹೆಚ್ಚು ಅಪಾಯ ಎದುರಿಸುತ್ತಿರುವ ಕೋವಿಡ್-19 ಚೇತರಿಕೆ ಕಂಡ ವ್ಯಕ್ತಿಗಳಿಗೆ ದೂರಸ್ಥ ಮೌಲ್ಯಮಾಪನ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯನ್ನು ಪ್ರಾರಂಭಿಸಿದ್ದು, ಮನೆಯಿಂದಲೇ ವೈದ್ಯರೊಂದಿಗೆ ಸಂಪರ್ಕದಲ್ಲಿರಬಹುದಾಗಿದೆ, ಶ್ವಾಸಕೋಶಶಾಸ್ತ್ರಜ್ಞ, ಶ್ವಾಸಕೋಶದ ತಜ್ಞ ಮತ್ತು ಮಾನಸಿಕ ಚಿಕಿತ್ಸೆ ಸೇರಿದಂತೆ ಬಹು ವಿಧಾನದ ಚಿಕಿತ್ಸೆ ಅಗತ್ಯ ಎಂದು ಹೇಳಿದ್ದಾರೆ. 

ರೋಗಲಕ್ಷಣಗಳ ವಿಳಂಬಗತಿಯ ಪತ್ತೆ ಹಾಗೂ ಕೋವಿಡ್-19 ಚೇತರಿಕೆಯ ನಂತರದಲ್ಲಿ 2-3 ತಿಂಗಳ ಕಾಲ ನಿರಂತರ ಎದುರಾಗುವ ರೋಗಲಕ್ಷಣಗಳು ಈ ಬಾರಿ ವಿಭಿನ್ನವಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ಕ್ರಿಟಿಕಲ್ ಕೇರ್ ಹಾಗೂ ನಿದ್ದೆ ಔಷಧ ವಿಭಾಗದ ತಜ್ಞ ಡಾ. ಸಚಿನ್ ಡಿ ಹೇಳಿದ್ದಾರೆ. ಕೋವಿಡ್-19 ಎರಡನೇ ಅಲೆಯಲ್ಲಿ ಸೋಂಕಿನಿಂದ ಚೇತರಿಕೆ ಕಂಡವರು ಲಂಗ್ ಫಿಬ್ರೋಸಿಸ್ ಎದುರಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ವೈದ್ಯರು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com