ಸ್ಲಂಗಳಲ್ಲಿ ವಾಸಿಸುವವರು ಕೊರೋನಾ ಪಾಸಿಟಿವ್ ಬಂದರೆ ಕೂಡಲೇ ಆರೈಕೆ ಕೇಂದ್ರಕ್ಕೆ ದಾಖಲಾಗಿ: ಬಿಎಸ್‌ವೈ

ಕೋವಿಡ್ ಪ್ರೇರಿತ ಲಾಕ್‌ಡೌನ್‌ಗಾಗಿ ಎರಡನೇ ಹಣಕಾಸು ಪ್ಯಾಕೇಜ್ ಪರಿಗಣನೆಯಲ್ಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯುರಪ್ಪ ಹೇಳಿದ್ದಾರೆ.
ಸಿಎಂ ಬಿಎಸ್ ವೈ
ಸಿಎಂ ಬಿಎಸ್ ವೈ

ಬೆಂಗಳೂರು: ಕೋವಿಡ್ ಪ್ರೇರಿತ ಲಾಕ್‌ಡೌನ್‌ಗಾಗಿ ಎರಡನೇ ಹಣಕಾಸು ಪ್ಯಾಕೇಜ್ ಪರಿಗಣನೆಯಲ್ಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯುರಪ್ಪ ಹೇಳಿದ್ದಾರೆ.

ಸಮಯಕ್ಕೆ ಸರಿಯಾಗಿ ಅಗತ್ಯವಿರುವ ರೋಗಿಗಳಿಗೆ ಆಮ್ಲಜನಕಯುಕ್ತ ಐಸಿಯು ಹಾಸಿಗೆಗಳು ಸಿಗುವುದರೊಂದಿಗೆ ಕೋವಿಡ್ ಪರಿಸ್ಥಿತಿ ಸುಧಾರಿಸಿದೆ. ದೈನಂದಿನ ಕೋವಿಡ್ ಪ್ರಕರಣಗಳಲ್ಲಿ, ವಿಶೇಷವಾಗಿ ಬೆಂಗಳೂರಿನಂತಹ ನಗರದಲ್ಲಿ ಕ್ರಮವಾಗಿ ಇಳಿಕೆಯಾಗುತ್ತಿರುವುದು ಸ್ವಲ್ಪ ಸಮಾಧಾನ ತಂದಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿನ ಪರಿಸ್ಥಿತಿ ತೃಪ್ತಿಕರವಾಗಿಲ್ಲ. ಅಲ್ಲಿನ ಜನರು ಹೆಚ್ಚು ಜಾಗರೂಕರಾಗಿರಬೇಕು ಎಂದು ಯಡಿಯೂರಪ್ಪ ಹೇಳಿದರು. 

'ಹಣಕಾಸಿನ ಮಿತಿಗಳಲ್ಲಿ, ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ. ಸಿದ್ದರಾಮಯ್ಯ(ವಿರೋಧ ಪಕ್ಷದ ನಾಯಕ) ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಇತಿಮಿತಿಗಳಲ್ಲಿ ನಾನು ಪ್ಯಾಕೇಜ್ ಘೋಷಿಸಿದೆ ಎಂದು ಯಡಿಯೂರಪ್ಪ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

ಪ್ಯಾಕೇಜ್ ವಿರುದ್ಧ ಪ್ರತಿಪಕ್ಷದ ನಾಯಕನ ಟೀಕೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, 'ಇನ್ನೂ ಹಲವಾರು ವಿಭಾಗಗಳಿಗೆ ಪ್ಯಾಕೇಜ್ ಸಿಕ್ಕಿಲ್ಲ, ನಾನು ಅವರ ಬಗ್ಗೆ ಯೋಚಿಸುತ್ತಿದ್ದೇನೆ. 10-12 ದಿನಗಳಲ್ಲಿ ನಾನು ಅವರಲ್ಲಿ ಕೆಲವರಿಗೆ ಮತ್ತೊಂದು ಪ್ಯಾಕೇಜ್ ಘೋಷಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಕೊರೋನಾ ಮಹಾಮಾರಿ ಎರಡನೇ ಅಲೆ ವಿರುದ್ಧ ರಾಜ್ಯವು ಹೋರಾಡುತ್ತಿದ್ದು, ಕೊರೋನಾ ಕಟ್ಟಿಹಾಕುವ ಸಲುವಾಗಿ ಲಾಕ್‌ಡೌನ್‌ ಘೋಷಿಸಲಾಗಿದೆ. ಇನ್ನು ಲಾಕ್ ಡೌನ್ ನಿಂದ ಜೀವನೋಪಾಯಕ್ಕೆ ಧಕ್ಕೆಯಾದವರಿಗೆ ಪರಿಹಾರವಾಗಿ ಯಡಿಯೂರಪ್ಪನವರು ಕಳೆದ ವಾರ 1,250 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದ್ದರು. ಈ ಪ್ಯಾಕೇಜ್ ಅನ್ನು ಅಲ್ಪ ಮತ್ತು ಅವೈಜ್ಞಾನಿಕ ಎಂದು ಸಿದ್ದರಾಮಯ್ಯ ಕರೆದಿದ್ದು ಅಲ್ಲದೆ ಇದು ಅಗತ್ಯವಿರುವ ಜನರನ್ನು ತಲುಪುವ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದರು. 

ಸಿಎಂ ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕೋವಿಡ್ ಕಾಲ್ ಸೆಂಟರ್ ಗೆ ಭೇಟಿ ನೀಡಿ ಅದರ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಆಮ್ಲಜನಕ ಸಹಿತ ಹಾಸಿಗೆಗಳು ಲಭ್ಯವಿವೆ. ಕೊರತೆ ತೀರಾ ಕಡಿಮೆ ಇದೆ ಎಂದು ತಿಳಿಸಿದ ಯಡಿಯೂರಪ್ಪ, ಅಗತ್ಯಕ್ಕೆ ತಕ್ಕಂತೆ ಐಸಿಯು ಹಾಸಿಗೆಗಳನ್ನು ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಬೆಂಗಳೂರಿನ 28 ಕೋವಿಡ್ ಆರೈಕೆ ಕೇಂದ್ರಗಳಲ್ಲಿ(ಸಿಸಿಸಿ) 3,000 ಹಾಸಿಗೆಗಳು ಲಭ್ಯವಿದ್ದು, ಅವುಗಳಲ್ಲಿ 1,000 ಆಮ್ಲಜನಕಯುಕ್ತ ಹಾಸಿಗೆಗಳು, ವೈದ್ಯರು ಮತ್ತು ದಾದಿಯರಂತಹ ಎಲ್ಲಾ ಅಗತ್ಯಗಳನ್ನು ಒದಗಿಸಲಾಗಿದೆ ಎಂದು ಬಿಎಸ್ ವೈ ಹೇಳಿದರು.

"ಬಹು ಮುಖ್ಯವಾಗಿ, ಹಳ್ಳಿಗಳಲ್ಲಿ ವಾಸಿಸುವ ಜನರು, ನಗರಗಳಲ್ಲಿ ಅಥವಾ ನಗರ ಪ್ರದೇಶಗಳಲ್ಲಿನ ಕೊಳೆಗೇರಿಗಳು ಸಹ ಕೋವಿಡ್ ಆರೈಕೆ ಕೇಂದ್ರಕ್ಕೆ ಸೇರಬೇಕು. ಏಕೆಂದರೆ ಅವರಿಗೆ ಮನೆ ಪ್ರತ್ಯೇಕತೆಗೆ ಸೌಲಭ್ಯಗಳಿರುವುದಿಲ್ಲ, ಮನೆಗಳು ಚಿಕ್ಕದಾಗಿರುತ್ತವೆ. ಇದರಿಂದ ಇದು ಸೋಂಕು ಹರಡುವಿಕೆಗೆ ಕಾರಣವಾಗಬಹುದು. ಹೀಗಾಗಿ ಅವರಿಗಾಗಿ ಆರೈಕೆ ಕೇಂದ್ರದಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com