ಕೋವಿಡ್-19: ಶಿವಮೊಗ್ಗದ ಪೆಟ್ರೋಲ್ ಬಂಕ್, ಅಂಗಡಿಗಳಲ್ಲಿ ಉಚಿತ ಎಸ್ ಪಿಒ-2 ತಪಾಸಣೆ ಸೌಲಭ್ಯ

ಪಲ್ಸ್ ಆಕ್ಸಿಮೀಟರ್ ಕೊಳ್ಳಲಾಗದವರಿಗೆ ಪೆಟ್ರೋಲ್ ಬಂಕ್, ಅಂಗಡಿಗಳಲ್ಲಿ ಉಚಿತ ಎಸ್ ಪಿಒ-2 ತಪಾಸಣೆ ಮಾಡುವ ವಿನೂತನ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಎಸ್ ಪಿಒ-2 ತಪಾಸಣೆ
ಎಸ್ ಪಿಒ-2 ತಪಾಸಣೆ

ಶಿವಮೊಗ್ಗ: ಪಲ್ಸ್ ಆಕ್ಸಿಮೀಟರ್ ಕೊಳ್ಳಲಾಗದವರಿಗೆ ಪೆಟ್ರೋಲ್ ಬಂಕ್, ಅಂಗಡಿಗಳಲ್ಲಿ ಉಚಿತ ಎಸ್ ಪಿಒ-2 ತಪಾಸಣೆ ಮಾಡುವ ವಿನೂತನ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ 2ನೇ ಅಲೆ ವೇಳೆ ಆಮ್ಲಜನಕ ಪ್ರಮಾಣ ತಗ್ಗಿ ಸಾವನ್ನಪ್ಪುತ್ತಿದ್ದಾರೆ. ಸರಿಯಾದ ಸಮಯಕ್ಕೆ ಆಮ್ಲಜನಕ ಸಿಗದೇ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದು, ಪಲ್ಸ್ ಆಕ್ಸೀಮೀಟರ್ ಪರೀಕ್ಷಾ ಯಂತ್ರಗಳಿಗೆ ವ್ಯಾಪಕ ಬೇಡಿಕೆ ಸೃಷ್ಟಿಯಾಗಿದೆ. ಮನೆಯಲ್ಲಿ ದೇಹದ  ಆಮ್ಲಜನಕ ಪ್ರಮಾಣದ ಪರೀಕ್ಷೆ ಮಾಡಿಕೊಳ್ಳಲು ಪಲ್ಸ್ ಆಕ್ಸೀಮೀಟರ್ ನ ಅವಶ್ಯಕತೆ ಇದ್ದು, ಬೆಲೆ ಏರಿಕೆ ಮತ್ತು ಬೇಡಿಕೆ ಹೆಚ್ಚಳದಿಂದಾಗಿ ಪಲ್ಸ್ ಆಕ್ಸೀಮೀಟರ್ ಬಡವರ ಪಾಲಿಗೆ ಕೈಗೆಟುಕದಂತಾಗಿದೆ.

ಇದೇ ಕಾರಣಕ್ಕಾಗಿ ಶಿವಮೊಗ್ಗದಲ್ಲಿ ಅಂಗಡಿಗಳಲ್ಲಿ ಮತ್ತು ಪೆಟ್ರೋಲ್ ಬಂಕ್ ಗಳಲ್ಲಿ ಪಲ್ಸ್ ಆಕ್ಸೀಮೀಟರ್ ಗಳನ್ನು ಇಟ್ಟು, ಬಂದ ಗ್ರಾಹಕರಿಗೆ ಉಚಿತವಾಗಿ ಎಸ್ ಪಿಒ-2 ಪರೀಕ್ಷೆ ನಡೆಸಲಾಗುತ್ತಿದೆ. ಇದಕ್ಕಾಗಿ ಸಮಾಜ ಸೇವಾ ಸಂಘಟನೆ ಎಚ್ ಎಂ ಟ್ರಸ್ಟ್ ಸುಮಾರು 200 ಪಲ್ಸ್ ಆಕ್ಸೀಮೀಟರ್ ಗಶಳನ್ನು ಖರೀದಿ  ಮಾಡಿದ್ದು, ಹಾಲು, ತರಕಾರಿ ಅಂಗಡಿ ಮತ್ತು ಪೆಟ್ರೋಲ್ ಬಂಕ್ ಗಳಲ್ಲಿ ಇಟ್ಟು ಬಂದ ಗ್ರಾಹಕರಿಗೆ ಉಚಿತವಾಗಿ ತಪಾಸಣೆ ಮಾಡುತ್ತಿದೆ.  

1996 ರಲ್ಲಿ ಎಚ್‌ಎಂ ಟ್ರಸ್ಟ್ ಸ್ಥಾಪನೆಯಾಗಿದ್ದು, ಸ್ಥಳೀಯ ಕಾರ್ಪೊರೇಟರ್ ಎಚ್ ಸಿ ಯೋಗೇಶ್ ಅವರ ಕುಟುಂಬದ ಒಡೆತನದ ಈ ಟ್ರಸ್ಟ್ 2 ಲಕ್ಷ ರೂ.ಗಳ ಆಕ್ಸಿಮೀಟರ್‌ಗಳನ್ನು ಸಂಗ್ರಹಿಸಿದೆ. ಅಗತ್ಯವಿರುವ ಜನರಿಗೆ ವಿವಿಧ ಅಂಗಡಿಗಳಲ್ಲಿ ಎಸ್ ಪಿ ಒ2 ಪರೀಕ್ಷೆ ಮಾಡಲಾಗುತ್ತಿದೆ.

ಶಿವಮೊಗ್ಗದ ವಿನೋಭ ನಗರದ ಪೊಲೀಸ್ ಚೌಕಿಯಲ್ಲಿ ಆಕ್ಸಿಮೀಟರ್ ವಿತರಿಸುವ ಕಾರ್ಯಕ್ರಮವನ್ನು ಯೋಗೇಶ್ ಉದ್ಘಾಟಿಸಿದರು. ಈ ಬಗ್ಗೆ ಮಾತನಾಡಿರುವ ಟ್ರಸ್ಟ್ ಅಧ್ಯಕ್ಷ ಯೋಗೀಶ್ ಅವರು, 'ಒಂದು ಆಕ್ಸಿಮೀಟರ್ ಬೆಲೆ ಸರಾಸರಿ 2 ಸಾವಿರ ರೂಗಳಷ್ಟಿದೆ. ಇಷ್ಟು ದುಬಾರಿ ಹಣ ನೀಡಿ ಬಡವರು ಖರೀದಿ ಮಾಡಲು  ಸಾಧ್ಯವಿಲ್ಲ. ಹೀಗಾಗಿ ನಾವೇ ಒಂದಷ್ಟು ಆಕ್ಸೀಮೀಟರ್ ಗಳನ್ನು ಖರೀದಿ ಮಾಡಿ ಅಂಗಡಿಗಳಿಗೆ ನೀಡಿ, ಅವರಿಗೆ ಇದರ ಪರೀಕ್ಷೆ ಮಾಡುವ ಕುರಿತು ತರಬೇತಿ ನೀಡುತ್ತಿದ್ದೇವೆ. ಇದರಿಂದ ಅಂಗಡಿಗೆ ಬಂದು ಬಡವರು ಉಚಿತವಾಗಿ ಎಸ್ ಪಿಒ-2 ತಪಾಸಣೆ ಮಾಡಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com