ಕೋವಿಡ್ ಕೇರ್ ಕೇಂದ್ರಗಳಲ್ಲಿ ಮಹಿಳಾ ಮಾರ್ಷಲ್ ಗಳ ನೇಮಕ: ರೋಗಿಗಳಿಗೆ ಹೆಚ್ಚಿನ ಆರೈಕೆ, ಪ್ರೀತಿ ನಿರೀಕ್ಷೆ 

ಹೊಸಕೋಟೆಯಿಂದ ಪ್ರತಿದಿನ ಮುಂಜಾನೆ 5 ಕಿಲೋ ಮೀಟರ್ ನಡೆದು ಮಹದೇವಪುರ ಕೋವಿಡ್ ಕೇಂದ್ರಕ್ಕೆ ಬೆಳಗ್ಗೆ 6 ಗಂಟೆಗೆ ಮೊದಲು 25 ವರ್ಷದ ಭವಾನಿ ಕೆ ಜಿ ತಲುಪುತ್ತಾರೆ. ಬೆಂಗಳೂರಿನಲ್ಲಿ ನಿಯೋಜನೆಗೊಂಡಿರುವ 'ಮಹಿಳೆಯರ ಮಾರ್ಷಲ್' ತಂಡದ 12 ಮಹಿಳೆಯರಲ್ಲಿ ಭವಾನಿ ಕೂಡ ಒಬ್ಬರಾಗಿದ್ದಾರೆ.
ಮಹಿಳಾ ಮಾರ್ಷಲ್
ಮಹಿಳಾ ಮಾರ್ಷಲ್

ಬೆಂಗಳೂರು: ಹೊಸಕೋಟೆಯಿಂದ ಪ್ರತಿದಿನ ಮುಂಜಾನೆ 5 ಕಿಲೋ ಮೀಟರ್ ನಡೆದು ಮಹದೇವಪುರ ಕೋವಿಡ್ ಕೇಂದ್ರಕ್ಕೆ ಬೆಳಗ್ಗೆ 6 ಗಂಟೆಗೆ ಮೊದಲು 25 ವರ್ಷದ ಭವಾನಿ ಕೆ ಜಿ ತಲುಪುತ್ತಾರೆ. ಬೆಂಗಳೂರಿನಲ್ಲಿ ನಿಯೋಜನೆಗೊಂಡಿರುವ 'ಮಹಿಳೆಯರ ಮಾರ್ಷಲ್' ತಂಡದ 12 ಮಹಿಳೆಯರಲ್ಲಿ ಭವಾನಿ ಕೂಡ ಒಬ್ಬರಾಗಿದ್ದಾರೆ.

ಬಿ ಎ ಪದವೀಧರೆ ಮತ್ತು ಎನ್ ಸಿಸಿ ಸರ್ಟಿಫಿಕೇಟ್ ಹೊಂದಿರುವ ಭವಾನಿ ಸಾಫ್ಟ್ ವೇರ್ ಉದ್ಯೋಗವನ್ನು ತೊರೆದು ಈ ಕೊರೋನಾ ಸಂಕಷ್ಟ ಕಾಲದಲ್ಲಿ ಕೊರೋನಾ ಮುಂಚೂಣಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ.

''ವಾರದ ಹಿಂದೆ ನಾನು ಇದಕ್ಕೆ ಸೇರಿದೆ.ಸಹಾಯ ಮಾಡುವ ಇಚ್ಛೆಯಿಂದ ನಾನು ಮಾರ್ಷಲ್ ತಂಡಕ್ಕೆ ಸೇರ್ಪಡೆಯಾದೆ, ಎನ್ ಸಿಸಿ ತರಬೇತಿಯಲ್ಲಿ ಕೂಡ ನಮಗೆ ಹೇಳಿಕೊಡುವುದು ಸೇವೆಯೇ ಧ್ಯೇಯ ಎಂದು. ಕೋವಿಡ್ ಕೇರ್ ಸೆಂಟರ್ ನಲ್ಲಿ ನನ್ನ ಕೆಲಸ ರೋಗಿಗಳ ವಿವರ ತೆಗೆದುಕೊಳ್ಳುವುದು, ಅವರ ರೋಗ ಲಕ್ಷಣ ತಪಾಸಣೆ ಮಾಡುವುದು, ಅವರಿಗೆ ಸಾಂತ್ವನ ಹೇಳುವುದು, ಅಗತ್ಯವಿದ್ದರೆ ರೋಗಿಗಳನ್ನು ವೈದ್ಯರಿಗೆ ಮತ್ತು ನರ್ಸ್ ಗಳಿಗೆ ಉಲ್ಲೇಖಿಸುವುದು ಆಗಿದೆ'' ಎಂದು ಭವಾನಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಗೆ ಹೇಳಿದ್ದಾರೆ.

ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಮಹಿಳಾ ಮಾರ್ಷಲ್ ಗಳನ್ನು ಪ್ರಾಯೋಗಿಕ ಮಾದರಿಯಲ್ಲಿ ನೇಮಕ ಮಾಡುತ್ತಿದ್ದು ಅವರನ್ನು ಆಯ್ದ ಮಾತೃತ್ವ ಕೇಂದ್ರಗಳು, ಕೋವಿಡ್ ಕೇರ್ ಕೇಂದ್ರಗಳು, ಪ್ರಯೋಗ ಮತ್ತು ಸ್ಥಿರೀಕರಣ ಕೇಂದ್ರಗಳಲ್ಲಿ ನಿಯೋಜನೆ ಮಾಡುತ್ತವೆ. ಈ ಹಿಂದೆ ಕೆಲಸದ ಅವಧಿ ಹೊಂದಿಕೆಯಾಗದ ಕಾರಣ ಮತ್ತು ಮಹಿಳಾ ಸ್ನೇಹಿ ವ್ಯವಸ್ಥೆಯಿಲ್ಲದ್ದರಿಂದ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದೆವು ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳುತ್ತಾರೆ.

ಜ್ಯೋತಿಕಾ ಪುರುಷೋತ್ತಮ್ ತೀವ್ರ ಉತ್ಸಾಹದಿಂದ ಶಾಂತಿನಗರ ಮಾತೃತ್ವ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರಕ್ಕೆ ಸೇರುವ ಪ್ರತಿಯೊಬ್ಬರನ್ನೂ ಪರೀಕ್ಷೆ ಮಾಡಲಾಗುತ್ತದೆ. ಇಲ್ಲಿ ಸುಮಾರು 200 ವಾರ್ಡ್ ಗಳಿದ್ದು 66 ಹೊಸ ನೇಮಕಗೊಂಡವರು ಬಿಬಿಎಂಪಿ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com