2 ತಿಂಗಳಲ್ಲಿ ಕೊರೋನಾಗೆ 7 ಗರ್ಭಿಣಿಯರು ಬಲಿ: ಕೋವಿಡ್ ವಿರುದ್ಧದ ಹೋರಾಟಕ್ಕೆ ಬಳ್ಳಾರಿ ಅಧಿಕಾರಿಗಳಿಂದ ಹೊಸ ಕಾರ್ಯತಂತ್ರ!

ಕೊರೋನಾ ಮೊದಲ ಅಲೆಯನ್ನು ಸಮರ್ಥವಾಗಿ ನಿಭಾಯಿಸಿ ಶ್ಲಾಘನೆಗೊಳಗಾಗಿದ್ದ ಬಳ್ಳಾರಿ ಅಧಿಕಾರಿಗಳಿಗೆ ಎರಡನೇ ಅಲೆ ಕಠಿಣ ಪರಿಸ್ಥಿತಿ ತಂದೊಡ್ಡಿದೆ. ಇದಕ್ಕೆ ಕಾರಣವಾಗಿದ್ದು ಕಳೆದ ಎರಡು ತಿಂಗಳಲ್ಲಿ ಏಳು ಗರ್ಭೀಣಿಯರ ಸಾವು. 
ಗರ್ಭಿಣಿ (ಸಾಂಕೇತಿಕ ಚಿತ್ರ)
ಗರ್ಭಿಣಿ (ಸಾಂಕೇತಿಕ ಚಿತ್ರ)

ಬಳ್ಳಾರಿ: ಕೊರೋನಾ ಮೊದಲ ಅಲೆಯನ್ನು ಸಮರ್ಥವಾಗಿ ನಿಭಾಯಿಸಿ ಶ್ಲಾಘನೆಗೊಳಗಾಗಿದ್ದ ಬಳ್ಳಾರಿ ಅಧಿಕಾರಿಗಳಿಗೆ ಎರಡನೇ ಅಲೆ ಕಠಿಣ ಪರಿಸ್ಥಿತಿ ತಂದೊಡ್ಡಿದೆ. ಇದಕ್ಕೆ ಕಾರಣವಾಗಿದ್ದು ಕಳೆದ ಎರಡು ತಿಂಗಳಲ್ಲಿ ಏಳು ಗರ್ಭೀಣಿಯರ ಸಾವು. 

ಹೌದು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕಳೆದ ಎರಡು ತಿಂಗಳಲ್ಲಿನ ಏಳು ಗರ್ಭಿಣಿಯರು ಮೃತಪಟ್ಟಿದ್ದಾರೆ. ಏಪ್ರಿಲ್ 2021ರಿಂದ, ಈ ಎರಡು ಜಿಲ್ಲೆಗಳಲ್ಲಿ 180 ಗರ್ಭಿಣಿಯರು ಕೊರೋನಾ ತುತ್ತಾಗಿದ್ದರು. ಗರ್ಭಿಣಿ ಮಹಿಳೆಯರಲ್ಲಿ ಸಾವಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ, ಜಿಲ್ಲಾ ಆಡಳಿತವು ಇಂತಹ ಸಾವುನೋವುಗಳನ್ನು ಕಡಿಮೆ ಮಾಡುವ ಯೋಜನೆಗಳನ್ನು ರೂಪಿಸಿದೆ.

ಮೊದಲಿಗೆ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಗರ್ಭಿಣಿ ಕೋವಿಡ್-19 ರೋಗಿಗಳನ್ನು ನೋಡಿಕೊಳ್ಳಲು ಹೆಚ್ಚುವರಿ ಆರೋಗ್ಯ ಸಿಬ್ಬಂದಿ ಮತ್ತು ವಿಶೇಷ ತಂಡಗಳನ್ನು ರಚಿಸಲಾಗುವುದು. ಕೋವಿಡ್ ಹೊಂದಿರುವ ಗರ್ಭಿಣಿ ಮಹಿಳೆಯರ ಆರೋಗ್ಯದ ಬಗ್ಗೆ ಮತ್ತು ಜಿಲ್ಲೆಗಳ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವವರ ಬಗ್ಗೆಯೂ ಆಡಳಿತವು ಗಮನ ಹರಿಸಲಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಕೆಲವು ಹಳ್ಳಿಗಳಲ್ಲಿ ಗರ್ಭಿಣಿ ಮಹಿಳೆಯರ ಮತ್ತು ಮಕ್ಕಳ ನಿಯಮಿತ ಆರೋಗ್ಯ ತಪಾಸಣೆ ನಡೆಸಲು ಸ್ಥಳೀಯ ಆಶಾ ಕಾರ್ಯಕರ್ತರಿಗೆ ತಿಳಿಸಲಾಗಿದೆ.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಚ್. ​​ಎಲ್ ಜನಾರ್ಧನ್ ಮಾತನಾಡಿ, ಸಾವನ್ನಪ್ಪಿದ ಹೆಚ್ಚಿನ ರೋಗಿಗಳ ಸ್ಥಿತಿ ದುರ್ಬಲವಾಗಿತ್ತು. ತಮಗೆ ಕೊರೋನಾ ಬಂದಿದೆ ಎಂದು ತಿಳಿದು ಕೆಲವರು ಭಯಭೀತರಾಗಿದ್ದರು. ಆದ್ದರಿಂದ ಈ ಸಮಸ್ಯೆಯನ್ನು ನಿಭಾಯಿಸಲು, ನಾವು ಈಗ ವಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಮತ್ತು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಆತ್ಮಸ್ಥೈರ್ಯ ತುಂಬುವ ಕೇಂದ್ರಗಳನ್ನು ರಚಿಸಿದ್ದೇವೆ ಎಂದರು. 

ಬಳ್ಳಾರಿ ಮತ್ತು ವಿಜಯನಗರ ಗ್ರಾಮೀಣ ಪ್ರದೇಶಗಳಲ್ಲಿ ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸಿದ ನಂತರ ಆರೋಗ್ಯ ತಂಡಗಳು ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೊರೋನಾ ಪರೀಕ್ಷೆಗಳನ್ನು ನಡೆಸುತ್ತಿವೆ. ಆರೋಗ್ಯ ಅಧಿಕಾರಿಗಳು ಜನರಿಗೆ ಸಣ್ಣದೊಂದು ಲಕ್ಷಣಗಳಿದ್ದರೂ, ವಿಶೇಷವಾಗಿ ಗರ್ಭಿಣಿಯರನ್ನು ಹೆಚ್ಚಾಗಿ ಪರೀಕ್ಷಿಸುತ್ತಿದ್ದಾರೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com