ಬೆಂಗಳೂರು: ಸಪ್ನ ಬುಕ್ ಹೌಸ್ ಸಂಸ್ಥಾಪಕ ಸುರೇಶ್ ಶಾ ನಿಧನ

ಭಾರತದ ಅತಿದೊಡ್ಡ ಪುಸ್ತಕ ಮಳಿಗೆ ಎಂದೇ ಹೆಸರಾದ ಸಪ್ನ  ಬುಕ್ ಹೌಸ್ ಸಂಸ್ಥಾಪಕ ಸುರೇಶ್ ಸಿ. ಶಾ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಸುರೇಶ್ ಶಾ
ಸುರೇಶ್ ಶಾ

ಬೆಂಗಳೂರು: ಭಾರತದ ಅತಿದೊಡ್ಡ ಪುಸ್ತಕ ಮಳಿಗೆ ಎಂದೇ ಹೆಸರಾದ ಸಪ್ನ  ಬುಕ್ ಹೌಸ್ ಸಂಸ್ಥಾಪಕ ಸುರೇಶ್ ಸಿ. ಶಾ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶೇಷಾದ್ರಿಪುರದ ಸಾಗರ್ ಅಪೋಲೊ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ.

1966ರಲ್ಲಿ ಚಿಕ್ಕದಾಗಿ ಸಪ್ನ ಬುಕ್ ಹೌಸ್ ಆರಂಭಿಸಿದ ಸುರೇಶ್ ಶಾ ಅವರು ಸಂಸ್ಥೆಯನ್ನು ದೇಶದ ಅತಿದೊಡ್ಡ ಪುಸ್ತಕ ಮಳಿಗೆಯನ್ನಾಗಿ ಕಟ್ಟಿ ಬೆಳೆಸಿದ್ದರು. ಗಾಂಧಿನಗರ, ಜಯನಗರ, ಕೋರಮಂಗಲ, ಸದಾಶಿವನಗರ, ಮಂಗಳೂರು, ಮೈಸೂರು, ಸೇರಿದಂತೆ 19 ಶಾಖೆಗಳನ್ನು ಹೊಂದಿರುವ ಸಪ್ನ ಕನ್ನಡ ಪುಸ್ತಕಗಳನ್ನು ವ್ಯಾಪಕವಾಗಿ ಓದುಗರಿಗೆ ತಲುಪಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ.

ಸುರೇಶ್ ಸಿ ಶಾ ಅವರು ಮೂವರು ಪುತ್ರರಾದ ನಿತಿನ್ ಶಾ, ದೀಪಕ್ ಶಾ ಮತ್ತು ಪರೇಶ್ ಶಾ ಅವರನ್ನು ಅಗಲಿದ್ದಾರೆ. ಬುಧವಾರ
ಬೆಳಗ್ಗೆ ಹರಿಶ್ಚಂದ್ರ ಘಾಟ್ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಸಪ್ನ ಪ್ರಕಟಣೆ ತಿಳಿಸಿದೆ.

ಸುರೇಶ್ ಶಾ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮತ್ತಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com