ಕಿಮ್ಸ್ ಆಸ್ಪತ್ರೆ ದುಸ್ಥಿತಿ: ಸೋಂಕಿತರ ಎದುರೇ ಶವಕ್ಕೆ ಪ್ಲಾಸ್ಟಿಕ್ ಪ್ಯಾಕಿಂಗ್; ವಿಡಿಯೋ ಹಂಚಿಕೊಂಡ ಕಾಂಗ್ರೆಸ್
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ದುಸ್ಥಿತಿ ಕುರಿತ ವಿಡಿಯೋವೊಂದನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
Published: 27th May 2021 01:37 AM | Last Updated: 27th May 2021 02:54 PM | A+A A-

ಕಿಮ್ಸ್ ಆಸ್ಪತ್ರೆ
ಬೆಂಗಳೂರು: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ದುಸ್ಥಿತಿ ಕುರಿತ ವಿಡಿಯೋವೊಂದನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಭಯ ಹೆಚ್ಚಿಸುವ ರೀತಿಯಲ್ಲಿ ಸೋಂಕಿತರ ಎದುರೇ ಶವಕ್ಕೆ ಪ್ಲಾಸ್ಟಿಕ್ ಪ್ಯಾಕಿಂಗ್ ಮಾಡಲಾಗುತ್ತಿದ್ದು, ಪಿಪಿಇ ಕಿಟ್ ಸುರಕ್ಷೆ ಸಿಬ್ಬಂದಿಗೂ ಇಲ್ಲ, ಶವಕ್ಕೂ ಇಲ್ಲ ಎಂದು ಹೇಳಿದೆ.
ಒಬ್ಬರು ಕೇಂದ್ರ ಮಂತ್ರಿ, ಮತ್ತೊಬ್ಬರು ರಾಜ್ಯ ಮಂತ್ರಿ ಪ್ರತಿನಿಧಿಸುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ದುಸ್ಥಿತಿ ಇದು. ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಇದೇನಾ ನಿಮ್ಮ ಸಾಧನೆ ಎಂದು ಪ್ರಶ್ನಿಸಿದೆ.
ಒಬ್ಬರು ಕೇಂದ್ರ ಮಂತ್ರಿ, ಮತ್ತೊಬ್ಬರು ರಾಜ್ಯ ಮಂತ್ರಿ ಪ್ರತಿನಿಧಿಸುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ದುಸ್ಥಿತಿ.
— Karnataka Congress (@INCKarnataka) May 26, 2021
ಭಯ ಹೆಚ್ಚಿಸುವ ರೀತಿಯಲ್ಲಿ ಸೋಂಕಿತರ ಎದುರೇ ಶವಕ್ಕೆ ಪ್ಲಾಸ್ಟಿಕ್ ಪ್ಯಾಕಿಂಗ್ ಮಾಡಲಾಗುತ್ತಿದೆ. ಪಿಪಿಇ ಕಿಟ್ ಸುರಕ್ಷೆ ಸಿಬ್ಬಂದಿಗೂ ಇಲ್ಲ, ಶವಕ್ಕೂ ಇಲ್ಲ.
ಇದೇನಾ ನಿಮ್ಮ ಸಾಧನೆ@JagadishShettar @JoshiPralhad? pic.twitter.com/crUJKnE8NJ