ಸಮುದ್ರದಲ್ಲಿ ಕೆಟ್ಟುನಿಂತ ಬೋಟ್: ಕೇರಳ, ತಮಿಳುನಾಡು ಮೀನುಗಾರರ ರಕ್ಷಣೆ

ಮಂಗಳೂರು ಬಂದರಿಂದ 20 ನಾಟಿಕಲ್ ಮೈಲ್ ದೂರ ಅರಬ್ಬೀ ಸಮುದ್ರದಲ್ಲಿ ಎಂಜಿನ್ ಕೆಟ್ಟು ಅಪಾಯಕ್ಕೆ ಸಿಲುಕಿದ್ದ ತಮಿಳುನಾಡು ಹಾಗೂ ಕೇರಳ ರಾಜ್ಯ ಮೂಲದ 10 ಮಂದಿ ಮೀನುಗಾರರನ್ನು ಕೋಸ್ಟ್ ಗಾರ್ಡ್ ನೌಕಾಪಡೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ಮಂಗಳೂರು ಬಂದರಿಂದ 20 ನಾಟಿಕಲ್ ಮೈಲ್ ದೂರ ಅರಬ್ಬೀ ಸಮುದ್ರದಲ್ಲಿ ಎಂಜಿನ್ ಕೆಟ್ಟು ಅಪಾಯಕ್ಕೆ ಸಿಲುಕಿದ್ದ ತಮಿಳುನಾಡು ಹಾಗೂ ಕೇರಳ ರಾಜ್ಯ ಮೂಲದ 10 ಮಂದಿ ಮೀನುಗಾರರನ್ನು ಕೋಸ್ಟ್ ಗಾರ್ಡ್ ನೌಕಾಪಡೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. 

ಲಾರ್ಡ್ ಆಫ್ ದಿ ಓಷನ್ ಎಂಬ ಮೀನುಗಾರಿಕಾ ದೋಣಿಯು ಅಪಾಯಕ್ಕೆ ಸಿಲುಕಿದ್ದು, ರಕ್ಷಣೆ ಕೋರಿ ಸಂದೇಶವನ್ನು ವಿಹೆಚ್ಎಫ್ ಸಂವಹನ ಉಪಕರಣ ಮೂಲಕ ರವಾನಿಸಿತ್ತು. 

ಮಗಂಳೂರಿನ ಮೆರಿಟೈಂ ರೆಸ್ಕ್ಯೂ ಕೋಆರ್ಡಿನೇಶನ್ ಸೆಂಟರ್ ನಲ್ಲಿ ಈ ಸಂದೇಶವನ್ನು ಪಡೆಯಲಾಗಿದ್ದು, ಗಸ್ತು ನಿರತ ನೌಕಾ ಸಿ448ನ್ನು ಕೂಡಲೇ ನೆರವಿಗಾಗಿ ಕಳುಹಿಸಲಾಗಿತ್ತು. ಅಲ್ಲದೆ, ಮಂಗಳೂರಿನಿಂದ ಐಸಿಜಿಎಸ್ ರಾಜ್ ದೂತ್ ನೌಕೆಯನ್ನೂ ಕಳುಹಿಸಲಾಯಿತು. 

ಈ ಮೊದಲು ಮೇ.14 ರಂದು ನೌಕೆ, ತೌಕ್ಟೆ ಚಂಡಮಾರುತದಿಂದಾಗಿ ಪೋರ್ ಬಂದರಿನಲ್ಲಿ ನಿಂತಿತ್ತು. ಮೇ.19ರಂದು ಅಲ್ಲಿಂದ ಹೊರಟಿದ್ದು, ಗುರುವಾರ ಬೆಳಿಗ್ಗೆ ಎಂಜಿನ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಎಂಜಿನ್ ಕೆಲಸ ನಿಲ್ಲಿಸಿದ ಕಾರಣ ಅದನ್ನು ಇನ್ನೊಂದು ಮೀನುಗಾರಿಕಾ ದೋಣಿ ಅಲ್ ಬದ್ರಿಯಾ ಎಂಬ ನೌಕೆಗೆ ಕಟ್ಟಿ ಮೊದಲು ಸ್ವಲ್ಪ ದೂರ ತರಲಾಗಿದೆ. ಆ ಬಳಿಕ ಐಸಿಜಿಎಸ್ ರಾಜ್ ದೂತ್, ಈ ನೌಕೆಯನ್ನು ಮಂಗಳೂರು ಹಳೆ ಬಂದರಿಗೆ ಕರೆ ತಂದಿದೆ. ಆ ಬಳಿಕ ಮುಂದಿನ ಕ್ರಮಕ್ಕಾಗಿ ಮೀನುಗಾರರನ್ನು ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರಿಗೆ ಹಸ್ತಾಂತರಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com