ಮಡಿಕೇರಿ ಆರ್ಮಿ ಕ್ಯಾಂಟೀನ್ ಹೊರಗೆ ಗ್ರಾಹಕರ ಸಾಲು: ವರದಿ ಮಾಡಲು ತೆರಳಿದ್ದ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರ್ತಿ ಮೇಲೆ ಹಲ್ಲೆ ಆರೋಪ

ಮಡಿಕೇರಿಯ ಆರ್ಮಿ ಕ್ಯಾಂಟೀನ್ ಎದುರು ಸಾಮಾನುಗಳ ಖರೀದಿಗೆ ಗ್ರಾಹಕರ ಉದ್ದದ ಸಾಲನ್ನು ಕಂಡು ಅದನ್ನು ವರದಿ ಮಾಡಲು ಸ್ಥಳಕ್ಕೆ ತೆರಳಿದ್ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ವರದಿಗಾರ್ತಿ ಮೇಲೆ ಹಲ್ಲೆ ನಡೆಸಿದ ಪ್ರಕರಣ ಶುಕ್ರವಾರ ನಡೆದಿದೆ.
ವಿಡಿಯೊದಲ್ಲಿದ್ದ ಪೊಲೀಸರು ಮತ್ತು ಗ್ರಾಹಕರು
ವಿಡಿಯೊದಲ್ಲಿದ್ದ ಪೊಲೀಸರು ಮತ್ತು ಗ್ರಾಹಕರು

ಮಡಿಕೇರಿ(ಕೊಡಗು ಜಿಲ್ಲೆ): ಮಡಿಕೇರಿಯ ಆರ್ಮಿ ಕ್ಯಾಂಟೀನ್ ಎದುರು ಸಾಮಾನುಗಳ ಖರೀದಿಗೆ ಗ್ರಾಹಕರ ಉದ್ದದ ಸಾಲನ್ನು ಕಂಡು ಅದನ್ನು ವರದಿ ಮಾಡಲು ಸ್ಥಳಕ್ಕೆ ತೆರಳಿದ್ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ವರದಿಗಾರ್ತಿ ಮೇಲೆ ಹಲ್ಲೆ ನಡೆಸಿದ ಪ್ರಕರಣ ಶುಕ್ರವಾರ ನಡೆದಿದೆ.

ಮಡಿಕೇರಿ ಆರ್ಮಿ ಕ್ಯಾಂಟೀನ್ ಬಳಿ ಗ್ರಾಹಕರು ಕೊರೋನಾ ಲಾಕ್ ಡೌನ್ ಸಮಯದಲ್ಲಿ ಉದ್ದವಾದ ಸರದಿ ಸಾಲಿನಲ್ಲಿ ಸಾಮಾಜಿಕ ಅಂತರವಿಲ್ಲದೆ ನಿಂತಿದ್ದರು. ಅದರ ಫೋಟೋ, ವಿಡಿಯೊ ತೆಗೆಯಲು ಹೋದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರ್ತಿ ಪ್ರಜ್ಞಾ ಜಿ ಆರ್ ಮತ್ತು ಇನ್ನೊಂದು ಪತ್ರಿಕೆಯ ವರದಿಗಾರನ ಮೇಲೆ ಪೊಲೀಸರು ಹಲ್ಲೆ ನಡೆಸಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸರು ನನ್ನನ್ನು ತಳ್ಳಿ ಮೊಬೈಲ್ ಫೋನ್ ಕಿತ್ತು ಬಿಸಾಕಿದರು. ಇದಕ್ಕೆ ಗ್ರಾಹಕರೊಬ್ಬರು ಸಾಥ್ ಕೊಟ್ಟು ಬೈಯತೊಡಗಿದರು ಎಂದು ನಮ್ಮ ಕೊಡಗು ಜಿಲ್ಲಾ ವರದಿಗಾರ್ತಿ ತಿಳಿಸಿದ್ದಾರೆ.

ವರದಿ ಮಾಡಲು ತೆರಳುವ ಪತ್ರಕರ್ತರ ಜೊತೆ ಪೊಲೀಸರು ಈ ರೀತಿ ವರ್ತಿಸುವುದು ಎಷ್ಟು ಸರಿ, ವರದಿಗಾರರ ಜೀವಕ್ಕೆ ಭದ್ರತೆ ಎಲ್ಲಿದೆ ಎಂಬ ಪ್ರಶ್ನೆ ಪತ್ರಕರ್ತ ಸಮೂಹದಲ್ಲಿ ಕೇಳಿಬರುತ್ತಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು: ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಇಂದು ಬೆಳಗ್ಗೆ ಇಬ್ಬರು ಪತ್ರಕರ್ತರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರಿಗೆ ದೂರು ಸಲ್ಲಿಸಿದೆ.

This is what my colleague @prajna_gr gets for reporting !

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com