ಕೋವಿಡ್-19 ಸೋಂಕಿತರಿಗೆ ಬೆಂಗಳೂರಿನ ಆಸ್ಪತ್ರೆಗಳಿಂದ 'ಆ್ಯಂಟಿಬಾಡಿ ಕಾಕ್ಟೇಲ್' ಥೆರಪಿ ಪ್ರಾರಂಭ!

ಹೋಂ ಐಸೊಲೇಷನ್ ನಲ್ಲಿರುವ ಸಣ್ಣ ಹಾಗೂ ಮಧ್ಯಮ ಪ್ರಮಾಣದಲ್ಲಿ ಕೋವಿಡ್ ಸೋಂಕಿನ ಲಕ್ಷಣ ಹೊಂದಿರುವವರು ಮೊನೊಕ್ಲೋನಲ್ ಆಂಟಿಬಾಡಿ ಥೆರಪಿ (ಆಂಟಿಬಾಡಿ ಕಾಕ್ಟೈಲ್) ಬಳಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಅನುಮತಿ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಗಳು ಅದರ ಆರಂಭಕ್ಕೆ ಮುಂದಾಗಿವೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹೋಂ ಐಸೊಲೇಷನ್ ನಲ್ಲಿರುವ ಸಣ್ಣ ಹಾಗೂ ಮಧ್ಯಮ ಪ್ರಮಾಣದಲ್ಲಿ ಕೋವಿಡ್ ಸೋಂಕಿನ ಲಕ್ಷಣ ಹೊಂದಿರುವವರು ಮೊನೊಕ್ಲೋನಲ್ ಆಂಟಿಬಾಡಿ ಥೆರಪಿ (ಆಂಟಿಬಾಡಿ ಕಾಕ್ಟೈಲ್) ಬಳಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಅನುಮತಿ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಗಳು ಅದರ ಆರಂಭಕ್ಕೆ ಮುಂದಾಗಿವೆ. ಈ ಥೆರಪಿಯನ್ನು ದೆಹಲಿಯಲ್ಲಿ ಓರ್ವ ರೋಗಿಗೆ ಮಾತ್ರ ಇದುವರೆಗೆ ನೀಡಲಾಗಿತ್ತಷ್ಟೆ.

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಥೆರಪಿಯನ್ನು ಆರಂಭಿಸಲಿದ್ದು, ಇಲ್ಲಿ ಎರಡು ಔಷಧಿಗಳಾದ ಕ್ಯಾಸಿರಿವಿಮಾಬ್ ಮತ್ತು ಇಮ್ಡೆವಿಮಾಬ್ (ಪುಡಿಯನ್ನು ದ್ರಾವಣವಾಗಿ ತಲಾ 10 ಎಂಎಲ್)ನ್ನು ಮಿಶ್ರ ಮಾಡಿ ಸೀಸೆ ರೂಪದಲ್ಲಿ ಲಭ್ಯವಾಗುವಂತೆ ತಯಾರು ಮಾಡಲಾಗುತ್ತದೆ. ರೋಗಿ ಆಸ್ಪತ್ರೆಯಲ್ಲಿ ದಾಖಲಾಗಬೇಕೆಂದೇನಿಲ್ಲ, ಹಾಗೆಯೇ ಥೆರಪಿ ಪಡೆದುಕೊಳ್ಳಬಹುದು.

ಎಚ್‌ಸಿಕ್ಯು, ಫಾವಿಪಿರವಿರ್ ಮತ್ತು ಐವರ್ಮೆಕ್ಟಿನ್ ಗಿಂತ ಹೆಚ್ಚು ಪರಿಣಾಮಕಾರಿ ಎಂದು ಸಾಬೀತಾಗಿರುವ ಚಿಕಿತ್ಸೆಯು ಸ್ಪೈಕ್ ಪ್ರೋಟೀನ್‌ಗೆ ವಿರುದ್ಧವಾಗಿ ವರ್ತಿಸುವ ಮೂಲಕ ಮತ್ತು ವೈರಸ್ ಶ್ವಾಸಕೋಶಕ್ಕೆ ಸೇರದಂತೆ ನೋಡಿಕೊಳ್ಳುತ್ತದೆ. ಸಾರ್ಸ್ ಕೋವಿಡ್-2 ವಿರುದ್ಧ ಪ್ರತಿರೋಧವನ್ನು ಉಂಟುಮಾಡುತ್ತದೆ. ರೂಪಾಂತರಿತ ವೈರಸ್ ದೇಹಕ್ಕೆ ದಾಳಿ ಮಾಡದಂತೆ ಇದು ತಡೆಯುತ್ತದೆ. ನಾವು ಇದರ ಬಳಕೆಗೆ ನಿಯಮ ಅನುಸರಿಸುತ್ತಿದ್ದು ಹೀಗಾಗಿ ಇದು ದುರುಪಯೋಗವಾಗುವ ಸಾಧ್ಯತೆಯಿಲ್ಲ ಎಂದು ಮಣಿಪಾಲ್ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರಜ್ಞ, ಶ್ವಾಸಕೋಶ ಕಸಿ ವೈದ್ಯ ಡಾ ಸತ್ಯನಾರಾಯಣ ಮೈಸೂರು ಹೇಳುತ್ತಾರೆ.

ಔಷಧಿಯನ್ನು ನಿರ್ದಿಷ್ಟ ಸಂದರ್ಭಗಳಲ್ಲಿ ಬಳಸಬಹುದು, ವಿಶೇಷವಾಗಿ ತೀವ್ರವಾದ ಕಾಯಿಲೆಗೆ ಹೆಚ್ಚಿನ ಅಪಾಯದಲ್ಲಿರುವ ಜನರಲ್ಲಿ. ಇದು ಪರಿಣಾಮ ಬೀರಬಹುದು. ಆದರೆ ದುಬಾರಿಯಾಗಿದೆ. ಇತರ ಸಂಯೋಜನೆಗಳು ಇದ್ದು, ಭಾರತದಲ್ಲಿ ಸದ್ಯಕ್ಕೆ ಬಳಕೆಯಲ್ಲಿಲ್ಲ ಎಂದು ಆಸ್ಟರ್ ಸಿಎಂಐ ಆಸ್ಪತ್ರೆಯ ತೀವ್ರ ನಿಗಾ ಘಟಕದ ಹಿರಿಯ ವೈದ್ಯ ಡಾ ಪ್ರಕಾಶ್ ದೊರೈಸ್ವಾಮಿ ಹೇಳುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com