ಬೆಳಗಾವಿ: ಕೋವಿಡ್ ಶಂಕಿತ ವೃದ್ಧ ದಂಪತಿಯನ್ನು ಬೀದಿಗೆ ತಳ್ಳಿದ ಅಪಾರ್ಟ್ ಮೆಂಟ್ ನಿವಾಸಿಗಳು 

ಕೋವಿಡ್ ಸೋಂಕಿತ ವೃದ್ಧ ದಂಪತಿಯನ್ನು ಅಪಾರ್ಟ್ ಮೆಂಟ್ ನಿಂದ ಹೊರದಬ್ಬಿದ ಅಮಾನುಷ ಕೃತ್ಯ ಬೆಳಗಾವಿಯಲ್ಲಿ ನಡೆದಿದೆ. ಆಹಾರ, ಆಶ್ರಯವಿಲ್ಲದೆ ಬೀದಿ ಬದಿಯಲ್ಲಿದ್ದ ವೃದ್ಧ ದಂಪತಿಯನ್ನು ಕೊನೆಗೆ ಕೆಲವು ಸಾಮಾಜಿಕ ಕಾರ್ಯಕರ್ತರು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ ಘಟನೆ ನಡೆದಿದೆ.
ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಹೋಗುತ್ತಿರುವ ವೃದ್ಧ ದಂಪತಿ
ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಹೋಗುತ್ತಿರುವ ವೃದ್ಧ ದಂಪತಿ

ಬೆಳಗಾವಿ: ಕೋವಿಡ್ ಸೋಂಕಿತ ವೃದ್ಧ ದಂಪತಿಯನ್ನು ಅಪಾರ್ಟ್ ಮೆಂಟ್ ನಿಂದ ಹೊರದಬ್ಬಿದ ಅಮಾನುಷ ಕೃತ್ಯ ಬೆಳಗಾವಿಯಲ್ಲಿ ನಡೆದಿದೆ. ಆಹಾರ, ಆಶ್ರಯವಿಲ್ಲದೆ ಬೀದಿ ಬದಿಯಲ್ಲಿದ್ದ ವೃದ್ಧ ದಂಪತಿಯನ್ನು ಕೊನೆಗೆ ಕೆಲವು ಸಾಮಾಜಿಕ ಕಾರ್ಯಕರ್ತರು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ ಘಟನೆ ನಡೆದಿದೆ.

ಮಹದೇವ ದೇವನ್(70 ವ) ಮತ್ತು ಅವರ ಪತ್ನಿ 65 ವರ್ಷದ ಶಾಂತ ಹಿಂಡ್ವಾಡಿ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ನ ಕ್ವಾರ್ಟರ್ಸ್ ನಲ್ಲಿ ವಾಸಿಸುತ್ತಿದ್ದರು. ಅಲ್ಲಿ ಮಹದೇವ್ ವಾಚ್ ಮೆನ್ ಆಗಿ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ದೇವನ್ ಅವರಿಗೆ ದೇಹದಲ್ಲಿ ಬಳಲಿಕೆ ಕಂಡುಬಂದಿತ್ತು. ಪತ್ನಿ ಮತ್ತು ಪತಿ ಇಬ್ಬರಲ್ಲಿಯೂ ಕಫ ಕಂಡುಬಂತು. ಇದರಿಂದ ಅಪಾರ್ಟ್ ಮೆಂಟ್ ನಲ್ಲಿದ್ದವರಿಗೆ ಆತಂಕವಾಗಿ ಕೂಡಲೇ ಕ್ವಾರ್ಟರ್ಸ್ ಖಾಲಿ ಮಾಡಿ ಎಂದು ಅಪಾರ್ಟ್ ಮೆಂಟ್ ನಿವಾಸಿಗಳು ಒತ್ತಾಯಿಸಿದರು. ದಂಪತಿಗೆ ಉಳಿದುಕೊಳ್ಳಲು ಬೇರೆ ಸ್ಥಳವಿಲ್ಲದೆ ಆಹಾರ, ಆಶ್ರಯವಿಲ್ಲದೆ ಬೀದಿಗೆ ಬಂದರು.

ಅಪಾರ್ಟ್ ಮೆಂಟ್ ಪಕ್ಕದಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬರು ವೃದ್ಧ ದಂಪತಿಯ ಪರಿಸ್ಥಿತಿ ಕಂಡು ಸಾಮಾಜಿಕ ಕಾರ್ಯಕರ್ತ ಕಿರಣ್ ನಿಪ್ಪಾಣಿಕರ್ ಅವರಿಗೆ ವಿಷಯ ತಲುಪಿಸಿದರು. ಅವರು ಸೋಷಿಯಲ್ ಮೀಡಿಯಾ ಗ್ರೂಪ್ ನಲ್ಲಿ ವೃದ್ಧ ದಂಪತಿಯ ಕಷ್ಟದ ಪರಿಸ್ಥಿತಿಯನ್ನು ಹಂಚಿಕೊಂಡರು. ಕೂಡಲೇ ಸಾಮಾಜಿಕ ಕಾರ್ಯಕರ್ತ ಸುರೇಂದ್ರ ಅಂಗೋಲ್ಕರ್, ಅನಿಲ್ ಅಷ್ಟೇಕರ್ ಮತ್ತು ಇತರರು ಸ್ಥಳಕ್ಕೆ ಬಂದು ದಂಪತಿಯನ್ನು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ದಂಪತಿಗೆ ಸಾಮಾಜಿಕ ಕಾರ್ಯಕರ್ತರೇ ಆಹಾರ ಮತ್ತು ಬಟ್ಟೆಗಳನ್ನು ನೀಡಿದರು. ಕೊನೆಗೆ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಲು ಪ್ರಯತ್ನಿಸಿದರು. ಆದರೆ ಆಸ್ಪತ್ರೆ ಸಿಬ್ಬಂದಿ ಬೆಡ್ ಗಳು ಖಾಲಿಯಿಲ್ಲವೆಂದು ದಾಖಲಿಸಿಕೊಳ್ಳಲು ನಿರಾಕರಿಸಿದರು.

ಆಗ ಸಾಮಾಜಿಕ ಕಾರ್ಯಕರ್ತರು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಪರಿಸ್ಥಿತಿ ಬಗ್ಗೆ ಹಂಚಿಕೊಂಡರು. ಅದೇ ಆಸ್ಪತ್ರೆಯ ಉನ್ನತ ಮಟ್ಟದ ಅಧಿಕಾರಿಗಳವರೆಗೆ ವಿಷಯ ತಲುಪಿತು.ಕೊನೆಗೆ ಅದೇ ಆಸ್ಪತ್ರೆಯಲ್ಲಿ ದಂಪತಿಯನ್ನು ದಾಖಲಿಸಿಕೊಂಡು ಈಗ ಚಿಕಿತ್ಸೆ ನಡೆಯುತ್ತಿದೆ.

ಹಸಿವಿನಿಂದ ಬಳಲಿ ಹೋಗಿದ್ದರು ದಂಪತಿ. ದಂಪತಿಯಲ್ಲಿಬ್ಬರಲ್ಲೂ ಕೋವಿಡ್ ಲಕ್ಷಣಗಳಿಲ್ಲ. ಹೀಗಾಗಿ ಸಾಮಾನ್ಯ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಗಾವಿ ನಗರ ಪಾಲಿಕೆಯ ಆಶ್ರಯ ಮನೆಗೆ ಇಬ್ಬರನ್ನೂ ಸದ್ಯ ವರ್ಗಾಯಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com