ವಿಜಯಪುರ: ಕೋವಿಡ್ ಹೆಲ್ಪ್ ಲೈನ್ ಸ್ಥಾಪಿಸಿ ರೋಗಿಗಳ ನೆರವಿಗೆ ನಿಂತ 'ಟೆಕ್ಕಿ'!

ಕೋವಿಡ್ ರೋಗಿಗಳಿಗೆ ಬೆಡ್, ಆಕ್ಸಿಜನ್ ಸಿಲಿಂಡರ್ ಮತ್ತು ಮೆಡಿಸನ್ ಪೂರೈಕೆಗೆ ಸಹಾಯವಾಗುವಂತೆ ವಿಜಯಪುರದ 33 ವರ್ಷದ ಟೆಕ್ಕಿಯೋರ್ವ 24*7 ಸಹಾಯವಾಣಿ ಸ್ಥಾಪಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಿಜಯಪುರ: ಕೋವಿಡ್ ರೋಗಿಗಳಿಗೆ ಬೆಡ್, ಆಕ್ಸಿಜನ್ ಸಿಲಿಂಡರ್ ಮತ್ತು ಮೆಡಿಸನ್ ಪೂರೈಕೆಗೆ ಸಹಾಯವಾಗುವಂತೆ ವಿಜಯಪುರದ 33 ವರ್ಷದ ಟೆಕ್ಕಿಯೋರ್ವ 24*7 ಸಹಾಯವಾಣಿ ಸ್ಥಾಪಿಸಿದ್ದಾರೆ.

ಝಾಹೂರ್ ಕಾಜಿ  ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು, ವೈದ್ಯರು, ಕಾರ್ಯಕರ್ತರು ಮತ್ತು ಇತರ ಸಾಫ್ಟ್‌ವೇರ್ ಎಂಜಿನಿಯರ್‌ಗಳ ಸಹಯೋಗದೊಂದಿಗೆ ಮೇ 14 ರಂದು ವಿಜಯಪುರದಲ್ಲಿ ಮರ್ಸಿ ಹೆಲ್ಪ್ ಲೈನ್ ಆರಂಭಿಸಿದರು.

ಯುಎಸ್, ಯುಕೆ, ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿರುವ 10 ವೈದ್ಯರು ರಾಜ್ಯದ ರೋಗಿಗಳಿಗೆ ಅದರಲ್ಲೂ ಹೋಮ್ ಐಸೋಲೇಶನ್ ನಲ್ಲಿರುವ ರೋಗಿಗಳಿಗೆ ಟೆಲಿ ಕನ್ಸ್ ಲ್ಟೇಶನ್ ಗೆ ಒಪ್ಪಿಕೊಂಡರು.

ಆರು ಪದವೀಧರರು ಸ್ವಯಂ ಪ್ರೇರಿತವಾಗಿ ಬಂದು ಮರ್ಸಿ ಹೆಲ್ತ್ ಲೈನ್ ನಲ್ಲಿ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ. ಕರೆಗಳನ್ನು ಸ್ವೀಕರಿಸಿ ಅಗತ್ಯ ಸಹಾ ಮಾಡಲಿದ್ದಾರೆ. 7848025025 ತಂಡವು ಹೆಲ್ಪ್ ಲೈನ್ ಸಹಾಯವಾಣಿ ಸೆಟ್ ಅಪ್ ಮಾಡಿದೆ.

ದಿನದ 24 ಗಂಟೆ ಕೆಲಸ ಮಾಡಲು ಸಹಾಯವಾಣಿ ಸಿದ್ಧವಾಗಿದೆ, ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರಗಳಿಂದ ಪ್ರತಿದಿನ ಸುಮಾರು 30 ಕರೆ ಬರುತ್ತಿದ್ದು, ಅಗತ್ಯವಿರುವವರಿಗೆ ಸಹಾಯ ಮಾಡಲಾಗುತ್ತಿದೆ. ಆಸ್ಪತ್ರೆ ಬಿಲ್ ಪಾವತಿಸಲು ಸಾಧ್ಯವಾಗದವರಿಗೆ ಐದು ಸ್ವಯಂ ಸೇವಾ ಸಂಘಗಳು ಹಣಕಾಸಿನ ನೆರವು ನೀಡುತ್ತಿವೆ. 

ಆಸ್ಪತ್ರೆ ಬಿಲ್, ಫುಡ್ ಕಿಟ್, ಅನಾಥ ಶವಗಳ ಸಂಸ್ಕಾರ ಸೇರಿದಂತೆ ಹಲವು ರೀತಿಯ ಸಹಾಯ ಮಾಡುತ್ತಿದೆ. ಇಂತಹ ಕಠಿಣ ಕಾಲದಲ್ಲಿ ಅಗತ್ಯವಿರುವವರಿಗೆ ಸಹಾಯ ಮಾಡುವುದು ನಮ್ಮ ಮುಖ್ಯ ಉದ್ದೇಶ. ನಾವು ಜಿಲ್ಲಾ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡುತ್ತಿದ್ದೇವೆ. ಕೋವಿಡ್ -19 ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ” ಮರ್ಸಿ ಹೆಲ್ಪ್ ಲೈನ್ ಇದುವರೆಗೆ ಕನಿಷ್ಠ 15 ರೋಗಿಗಳಿಗೆ ಆಮ್ಲಜನಕ ಹಾಸಿಗೆಗಳನ್ನು ಪಡೆಯಲು ಮತ್ತು ಸುಮಾರು 10 ಜನರಿಗೆ ವೆಂಟಿಲೇಟರ್‌ಗಳನ್ನು ಒದಗಿಸಿದೆ. ಅಲ್ಲದೆ, 10 ರೋಗಿಗಳು ಉಚಿತ ಟೆಲಿ-ಸಮಾಲೋಚನೆ ಸೇವೆಗಳನ್ನು ಪಡೆದುಕೊಂಡಿದ್ದಾರೆ ಎಂದು ಝಾಹೂರ್ ಕಾಜಿ  ಹೇಳಿದ್ದಾರೆ.

“ನಮಗೆ ಕರೆ ಮಾಡುವವರು ಹೆಚ್ಚಿನವರು ನಗರ ಪ್ರದೇಶಗಳಿಂದ ಬಂದವರು. ಹಳ್ಳಿಗಳಲ್ಲಿರುವವರಿಗೆ ರೋಗದ ಬಗ್ಗೆ ಸೀಮಿತ ಜ್ಞಾನವಿರುವುದರಿಂದ ಅವರನ್ನು ತಲುಪಲು ನಾವು ಬಯಸುತ್ತೇವೆ. ಈಗ, ಪ್ರಕರಣಗಳು ಕಡಿಮೆಯಾದ ಕಾರಣ ಮರ್ಸಿ ಹೆಲ್ಪ್ ಲೈನ್ ಗೆ ಕರೆಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಕಾಜಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com